September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹತ್ಯಡ್ಕ ವಿಠೋಬಾ ರುಕುಮಾಯಿ ದೇಗುಲಕ್ಕೆ ದೇಣಿಗೆ

ಹತ್ಯಡ್ಕ ಗ್ರಾಮದ ದರ್ಭೆತಡ್ಕದಲ್ಲಿ ಜೀರ್ಣೋದ್ದಾರ ಕಾರ್ಯ ಪ್ರಗತಿಯಲ್ಲಿರುವ ವಿಠೋಬಾ ರುಕುಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.2 ಲಕ್ಷ ದೇಣಿಗೆ ಚೆಕ್ ಅನ್ನು ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಶೋಧರ ಇವರು ದೇವಸ್ಥಾನದ ಆಡಳಿತ ಮಂಡಳಿಗೆ ಜ.21 ರಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಪ್ರಮುಖ ರಾದ ರಮೇಶ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅನಂತ ಗೋಖಲೆ, ಕಾರ್ಯದರ್ಶಿ ಜಿತೇಂದ್ರ ಗೋಖಲೆ, ಸದಸ್ಯರಾದ ಕಾರ್ತಿಕ್ ಹೆಬ್ಬಾರ್, ನರಸಿಂಹ ಪಾಳಂದೆ, ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿ ನಿಧಿಗಳಾದ ಯಮುನಾ ಎಮ್ ಮತ್ತು ರೂಪಾ,
ಜನಜಾಗೃತಿಯ ವಲಯ ಅಧ್ಯಕ್ಷರಾದ ಸತೀಶ್ ಶೆಟ್ಟಿ ಗುತ್ತು, ಹತ್ಯಡ್ಕ ಎ ಒಕ್ಕೂಟದ ಉಪಾಧ್ಯಕ್ಷರಾದ ಸರೋಜಿನಿ ನಾಯ್ಕ, ಹತ್ಯಡ್ಕ ಬಿ ಒಕ್ಕೂಟದ ಅಧ್ಯಕ್ಷ ಸುನಂದ ಟಿ., ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಅರಸಿನಮಕ್ಕಿ ಶಿಶಿಲ ಘಟಕದ ಘಟಕ ಪ್ರತಿನಿಧಿ ಅವಿನಾಶ್ ಭಿಡೆ ಉಪಸ್ಥಿತಿಯಲ್ಲಿ ಚೆಕ್ ಅನ್ನು ಹಸ್ತಾಂತರಿಸಲಾಯಿತು.

Related posts

ಇಂದಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್.ಡಿ.ಎಂ ಕಾಲೇಜಿನ ಡಾ ಶ್ರೀಧರ ಎನ್ ಭಟ್ ರವರಿಗೆ ‘ಶಿಕ್ಷಾಪ್ರದಾನ ಶಿರೋಮಣಿ’ ಪ್ರಶಸ್ತಿ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ

Suddi Udaya

ಫೆ. 01: ಬೆಳಾಲು ಡಿಪಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್‌ ಪಂದ್ಯಾಟ

Suddi Udaya

ನಿಡ್ಲೆ : ಕಾಟ್ಲ ಪರಿಸರದಲ್ಲಿ ಕಾಡಾನೆ ಹಾವಳಿ

Suddi Udaya

ಗೇರುಕಟ್ಟೆಯಲ್ಲಿ ತಡರಾತ್ರಿ ತ್ಯಾಜ್ಯ ಎಸೆದವನಿಗೆ ಬಿತ್ತು ದಂಡ: ಪಂ.ಸದಸ್ಯರ, ಅಭಿವೃದ್ಧಿ ಅಧಿಕಾರಿ ಮತ್ತು ಮಾಜಿ ಅಧ್ಯಕ್ಷರ ತಡರಾತ್ರಿ ಕಾರ್ಯಾಚರಣೆ

Suddi Udaya
error: Content is protected !!