September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಮಹೋತ್ಸವ ಸಂಪನ್ನ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರವಾದ ನೆಲ್ಯಾಡಿಯಲ್ಲಿ ದಶದಿನಗಳ ಕಾಲ ಭಕ್ತಿಭಾವದಿಂದ ನಡೆಯುತ್ತಿದ್ದ ವಾರ್ಷಿಕ ಮಹೋತ್ಸವವು ಅದ್ಧೂರಿ ಹಾಗೂ ಶ್ರದ್ಧಾಪೂರ್ಣ ಸಮಾರೋಪದೊಂದಿಗೆ ಸಂಪನ್ನಗೊಂಡಿತು.

ಜ.16ರಂದು ಆರಂಭಗೊಂಡ ಈ ಮಹೋತ್ಸವವು ಜ. 25ರಂದು ಮುಕ್ತಾಯವಾಯಿತು. ಹಬ್ಬದ ಪ್ರಧಾನ ದಿನವಾದ ಶನಿವಾರ, ವಿಶೇಷ ಪ್ರಾರ್ಥನೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಕರ್ಷಕ ಶೋಭಾಯಾತ್ರೆ ಮಹೋತ್ಸವದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದವು.

ಶನಿವಾರ ಸಂಜೆ ನಡೆದ ಹಬ್ಬದ ಶೋಭಾಯಾತ್ರೆ ನೆಲ್ಯಾಡಿ ಪೇಟೆಯೊಳಗೆ ಭಕ್ತಿಗೀತಗಳೊಂದಿಗೆ ಸಾಗುತ್ತಾ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರಕ್ಕೆ ಆಗಮಿಸಿತು. ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂತ ಅಲ್ಫೋನ್ಸಮ್ಮನವರಿಗೆ ತಮ್ಮ ಹರಕೆಗಳನ್ನು ಅರ್ಪಿಸಿ, ಆಶೀರ್ವಾದವನ್ನು ಪಡೆದುಕೊಂಡರು. ಭಕ್ತರ ಭಕ್ತಿಗೀತೆಗಳು ಹಾಗೂ ಜಪಮಾಲೆಗಳೊಂದಿಗೆ ಸಂಪೂರ್ಣ ಪ್ರದೇಶ ಭಕ್ತಿ ಸಾಗರವಾಗಿ ಪರಿವರ್ತಿತವಾಯಿತು.

ಮಹೋತ್ಸವದ ದಿನಗಳಲ್ಲಿ ವಿವಿಧ ದಿನಗಳಲ್ಲಿ ವಿಶೇಷ ನವೀನ ಪ್ರಾರ್ಥನೆಗಳು, ಧ್ಯಾನಗಳು, ಪವಿತ್ರ ಬಲಿ ಪೂಜೆಗಳು ಹಾಗೂ ಆತ್ಮೀಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿ ಸಂತ ಅಲ್ಫೋನ್ಸಮ್ಮನ ಕೃಪೆಗೆ ಪಾತ್ರರಾದರು.


ವಾರ್ಷಿಕ ಮಹೋತ್ಸವಕ್ಕೆ ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು, ಫಾ. ಅಲೆಕ್ಸ್ ಜೋನ್ಸನ್, ಟ್ರಸ್ಟಿಗಳಾದ ಜೋನ್ಸನ್, ರಾಜೇಶ್ ರೆಜಿ ಜೋಯ್ ಕೋಶಾಧಿಕಾರಿ ಸುರೇಶ್ ಕಾರ್ಯದರ್ಶಿ ಜೆಸ್ಸಿ ಕೇ ಜೇ ಮೊದಲಾದವರು ನೇತೃತ್ವ ವಹಿಸಿದ್ದರು.

Related posts

ಎಸ್ ವೈಎಸ್ ಬೆಳ್ತಂಗಡಿ ಝೋನ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸದಸ್ಯರು ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ, ಸಾಧಕರಿಗೆ ಸನ್ಮಾನ

Suddi Udaya

ಫೆ 3 -7: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರುವಾಯನಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷರಾಗಿ ಸತ್ಯಪಾಲನ್ ನಾಯರ್, ಕಾರ್ಯದರ್ಶಿಯಾಗಿ ಮಾನ್ಯ ಆಯ್ಕೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದಿಂದ ಮುಂಡ್ರುಪ್ಪಾಡಿ ಶಾಲೆಗೆ ಪ್ರಿಂಟರ್ ಕೊಡುಗೆ

Suddi Udaya

ಉಜಿರೆ: ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!