22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ ದಯಾ ವಿಶೇಷ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಭಾರತದ 76ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಗಣ್ಯರು ವಿಶೇಷ ಚೇತನ ಮಕ್ಕಳೊಡಗೂಡಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹಾಗೂ ಭಾರತದ ಸಂವಿಧಾನ ಪುಸ್ತಕಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಯಾ ವಿಶೇಷ ಶಾಲೆಯ ನಿರ್ದೇಶಕ ವಂ.ಫಾ.ವಿನೋದ್ ಮಸ್ಕರೇನಸ್ ವಹಿಸಿ ಮಾತನಾಡಿ ಸಂವಿಧಾನವು ಜಾತ್ಯಾತೀತವಾದದ್ದು, ಎಲ್ಲಾ ಜಾತಿ, ಮತಗಳಿಗೂ ಮಿಗಿಲಾಗಿ ಮಾನವೀಯತೆಯನ್ನು ಸಾರುವ ಗ್ರಂಥ. ಇಡೀ ವಿಶ್ವಕ್ಕೆ ಮಾದರಿಯಾದ ಗ್ರಂಥ ಮತ್ತು ಇದರ ಶಿಲ್ಪಿಯಾದ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಅವರೊಂದಿಗೆ ಅಂದು ಸಂವಿಧಾನ ರಚನೆಯಲ್ಲಿ ತೊಡಗಿಸಿಕೊಂಡವರ ಉತ್ತಮ ವಿಚಾರಗಳು, ಯೋಚನೆಗಳು ಇಂದು ನಮ್ಮ ದೇಶದಲ್ಲಿ ಭಾತೃತ್ವವನ್ನು ಬೆಳೆಸಲು ಕಾರಣವಾಗಿದೆ ಎಂದರು.

ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಚರ್ಚ್, ವಂ.ಫಾ. ಏಲಿಯಾಸ್ ಡಿಸೋಜಾ ಗಣರಾಜ್ಯೋತ್ಸವದ ಶುಭಾಶಯವನ್ನು ಕೋರುತ್ತಾ, ಸೈಂಟ್ ಪೀಟರ್ ಕ್ಲೇವರ್ ಚರ್ಚ್ ಅಳದಂಗಡಿ ಇಲ್ಲಿನ ಚೇತನ ಸ್ತ್ರೀ ಸಂಘಟನೆಯು ಹಲವಾರು ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಇಂದಿನ ದಯಾ ಶಾಲೆಯ ಈ ಭೇಟಿಯೂ ಕೂಡಾ ಅವರು ಯಶಸ್ವಿಯಾಗಿ ಆಯೋಜಿಸಿದ ಕಾರ್ಯಕ್ರಮಗಳಲ್ಲೊಂದು. ಈ ವಿಶೇಷ ಚೇತನ ಮಕ್ಕಳು ನಮ್ಮೆಲ್ಲರ ಹೊಣೆ. ಶಾಲೆಯ ಸಿಬ್ಬಂದಿಗಳು ಇಲ್ಲಿನ ಮಕ್ಕಳನ್ನು ಪ್ರೀತಿಸುತ್ತಿರುವುದರೊಂದಿಗೆ ತಮ್ಮ ರಾಷ್ಟ್ರ ಪ್ರೇಮವನ್ನೂ ತಮ್ಮ ಸೇವೆಯ ಮೂಲಕ ತೋರ್ಪಡಿಸುತ್ತಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಗೆ ಹಾಗೂ ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವ ವಂ.ಫಾ. ವಿನೋದ್ ಮಸ್ಕರೇನ್ಹಸ್ ರವರಿಗೆ ದೊಡ್ಡ ಸೆಲ್ಯೂಟ್ ಎಂದರು.

ಚೇತನ ಸ್ತ್ರೀ ಸಂಘಟನೆಯ ಅಧ್ಯಕ್ಷರಾದ ಸೆಲಿನಾ ಕ್ರಾಸ್ತಾ, ದಯಾ ವಿಶೇಷ ಶಾಲೆಯ ಮುಖ್ಯಶಿಕ್ಷಕಿಯಾದ ದಿವ್ಯಾ ಟಿ.ವಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ದೈಹಿಕ ಶಿಕ್ಷಕಿ ಕುಮಾರಿ ಜೆನ್ವಿರಾ ವಾಸ್ ಉಪಸ್ಥಿತರಿದ್ದ ಸರ್ವರಿಗೂ ಭಾರತ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಚೇತನ ಸ್ತ್ರೀ ಸಂಘಟನೆ ಅಳದಂಗಡಿ ಮತ್ತು ಚರ್ಚ್ ನ ಕುಟುಂಬಗಳಿಂದ ಸಂಗ್ರಹಿಸಿದ ದವಸ ಧಾನ್ಯಗಳು, ತರಕಾರಿ ಮತ್ತು ಧನಸಹಾಯವನ್ನು ಶಾಲಾ ನಿರ್ದೇಶಕರಿಗೆ ಹಸ್ತಾಂತರಿಸಿದರು.

ಶಿಕ್ಷಕಿ ಸುಜಾತಾ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಹೇಮಾವತಿ ವಂದಿಸಿ, ಶಿಕ್ಷಕಿ ಸುಮನಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆ ಪದವಿ/ ಪದವಿ ಪೂರ್ವ ವಿಭಾಗದ ಬಾಲಕಿಯರ ಸ್ಥಳೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀಮತಿ ವಸಂತಿ ಗೌಡ ಇವರಿಂದ ದೇಣಿಗೆ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮಾ ಮಸೀದಿ ವಾರ್ಷಿಕ ಮಹಾಸಭೆ, ಸಮಿತಿ ರಚನೆ : ಅಧ್ಯಕ್ಷರಾಗಿ ಇಸ್ಮಾಯಿಲ್ ಸನಾ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಪುನರಾಯ್ಕೆ

Suddi Udaya

ನೆರಿಯದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಇಲಾಖೆ ದಾಳಿ : ಹಿಟಾಚಿ, ಟಿಪ್ಪರ್, ಟಾಕ್ಟರ್ ವಶಕ್ಕೆ

Suddi Udaya

ಅರಸಿನಮಕ್ಕಿ: ಅಂಗಡಿ ಗುಡ್ಡೆ ನಿವಾಸಿ ಶ್ರೀಮತಿ ಬಾಲಕಿ ನಿಧನ

Suddi Udaya
error: Content is protected !!