September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಫೆ.3-7: ಶ್ರೀ ಕ್ಷೇತ್ರ ಓಡೀಲು ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ಫೆ.3ರಿಂದ 7ರ ವರೆಗೆ ಶ್ರೀ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.

ಫೆ.3 ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ದೇವರಿಗೆ ಪಂಚಾಮೃತ ಅಭಿಷೇಕ, ಗಣಹೋಮ, ನವ ಕಲಶಾಭಿಷೇಕ, ಅಲಂಕಾರ ಪೂಜೆ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ, ಸಂಜೆ ಉತ್ಸವ ಬಲಿ, ರಾತ್ರಿಪೂಜೆ, ಭೂತಬಲಿ, ಅನ್ನಸಂತರ್ಪಣೆ ನಡೆಯಲಿದೆ.

ಫೆ.4ರಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಶತರುದ್ರಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಬಲಿ, ರಾತ್ರಿಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಫೆ.5ರಂದು ಬೆಳಿಗ್ಗೆ ಅಭಿಷೇಕ, ನಿತ್ಯಪೂಜೆ, ರುದ್ರಹೋಮ, ನಿತ್ಯಬಲಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದರ್ಶನ ಬಲಿ ಉತ್ಸವ,
ಬಟ್ಟಲು ಕಾಣಿಕೆ, ದೈವ-ದೇವರ ಭೇಟಿ, ರಾತ್ರಿಪೂಜೆ, ಭೂತಬಲಿ, ಅನ್ನಸಂತರ್ಪಣೆ. ಫೆ.೬ರಂದು ಬೆಳಿಗ್ಗೆ ಅಭಿಷೇಕ, ನಿತ್ಯಪೂಜೆ, ಮಹಾಪೂಜೆ, ನಿತ್ಯಬಲಿ, ಆಶ್ಲೇಷಾ ಬಲಿ, ಅನ್ನಸಂತರ್ಪಣೆ, ಸಂಜೆ ಶ್ರೀರಂಗ ಪೂಜೆ, ಸವಾರಿಬಲಿ, ರಾತ್ರಿಪೂಜೆ, ಭೂತಬಲಿ, ಕವಾಟಬಂಧನ, ಅನ್ನಸಂತರ್ಪಣೆ. ಫೆ.7ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಮಹಾಪೂಜೆ, ತುಲಾಭಾರ ಸೇವೆ, ಚೂರ್ಣೋತ್ಸವ, ನಂದಿ ಪೂಜೆ, ಅನ್ನಸಂತರ್ಪಣೆ, ಸಂಜೆ ಉತ್ಸವ ಬಲಿ, ಅವಭೃತ ಸ್ನಾನ, ಧ್ವಜಾವರೋಹಣ, ರಾತ್ರಿಪೂಜೆ, ಮಂತ್ರಾಕ್ಷತೆ ಮತ್ತು ಸಂಪ್ರೋಕ್ಷಗಾಮಿ, ಅನ್ನಸಂತರ್ಪಣೆ ನಡೆಯಲಿದೆ. ಫೆ.4 ರಂದು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿAದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ದಿನೇಶ್ ಮೂಲ್ಯ ಕೊಂಡೆಮಾರು ತಿಳಿಸಿದ್ದಾರೆ.

Related posts

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಉದ್ಯಮಿ ಕಿರಣಚಂದ್ರ ಪುಷ್ಪಗಿರಿ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

Suddi Udaya

ಮಡಂತ್ಯಾರು: ವರ್ತಕ ಬಂಧು ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಶಿರ್ಲಾಲು: “ಭವತಿ ಭಿಕ್ಷಾಂದೇಹಿ” ನಿಧಿ ಸಂಗ್ರಹ ಅಭಿಯಾನದ ಧನಸಹಾಯ ಹಸ್ತಾಂತರ

Suddi Udaya

ಬುರುಡೆ ಚಿನ್ನಯ್ಯ ಮತ್ತೆ ಇಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya

ಎಲ್‌ ಸಿ ಆರ್ ವಿದ್ಯಾಸಂಸ್ಥೆ ಕಕ್ಯಪದವು: ಪದವಿ ವಿಭಾಗದ ಬಿ.ಕಾಂ ನಲ್ಲಿ ವಾಣಿಜ್ಯ ಚಟುವಟಿಕೆ

Suddi Udaya
error: Content is protected !!