July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಊರವರಿಂದ ಶ್ರಮದಾನ

ಬಳ್ಳಮಂಜ ಮಹತೋಭಾರ ಶ್ರೀ ಅನಂತೇ ಶ್ವರ ಸ್ವಾಮಿ ದೇವಸ್ಥಾನದ ಈಶ್ವರ ಗರ್ಭ ಗುಡಿ ಹಾಗೂ ತೀರ್ಥ ಮಂಟಪದ ನವೀಕರಣದ ಪ್ರಯುಕ್ತ ಹಳೆ ಗರ್ಭ ಗುಡಿಯ ನೆಲಸಮ ಮಾಡುವ ಕಾಯಕ ಪಂಚಾಂಗ ನಿರ್ಮಾಣ ಅಂಗಣವನ್ನು ಅಗೆದು ಕಾಂಕ್ರೀಟ್ ಹಾಕುವುದು ಹಾಗೂ ಹತ್ತು ಹಲವು ಕೆಲಸಗಳನ್ನು ಗ್ರಾಮದ ಸುಮಾರು 200 ಹಿಂದೂ ಭಾಂದವರು ಒಟ್ಟು ಸೇರಿ ಶ್ರಮದಾನ ಮಾಡಿದರು.

ಈ ವೇಳೆ ಶ್ರಮದಾನದಿಂದ ದೇವಾಲಯಕ್ಕೆ ಅಂದಾಜು ಸುಮಾರು 4 ಲಕ್ಷಗಳಷ್ಟು ಉಳಿತಾಯವಾಗಿರುತ್ತದೆ ಎಂದು ಅನುವಂಶಿಯ ಆಡಳಿತ ಮೊಕ್ತೇಸರರು ತಿಳಿಸಿದ್ದು ಈ ರೀತಿಯ ಸಹಕಾರ ಊರಿನ ಭಕ್ತಾದಿಗಳಿಂದ ದೊರಕಿದರೆ ದೇವಾಲಯಗಳ ಅಭಿವೃದ್ಧಿಗೆ ಮುನ್ನುಗಲು ಆಡಳಿತದವರಿಗೆ ಧೈರ್ಯ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟು ಸೇರಿದ ಎಲ್ಲಾ ಕರಸೇವಕರನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಸ್ವಚ್ಛತೆ ಚಪ್ಪರ ಹಾಕುವುದು ಇತ್ಯಾದಿ ಬ್ರಹ್ಮ ಕಲಶದ ಪೂರ್ವ ಭಾವಿ ಕೆಲಸಗಳು ನಡೆಯಲಿದೆ . ಮಾ.29ರಿಂದ ಎ.6 ರವರೆಗೆ ನಡೆಯುವ ಶ್ರೀ ದೇವರ ಬ್ರಹ್ಮಕಲಶ ಇತ್ಯಾದಿಗಳಿಗೆ ಎಲ್ಲರ ಸಹಕಾರವನ್ನು ಕೋರಿದರು.

Related posts

ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ: ದರ್ಶನ ಬಲಿ, ಬಟ್ಟಲು ಕಾಣಿಕೆ

Suddi Udaya

ಬೆಳಾಲು ಗ್ರಾಮದ ಮುಂಡ್ರೊಟ್ಟು ಪರಿಸರದಲ್ಲಿ ನೀರಿನ ಸಮಸ್ಯೆ: ತುರ್ತು ಕ್ರಮಕ್ಕೆ ಶಾಸಕರ ಸೂಚನೆ

Suddi Udaya

ಅಳದಂಗಡಿ ಸತ್ಯದೇವತಾ ದೈವಸ್ಥಾನದಲ್ಲಿ ಹನುಮೋತ್ಸವ ತಯಾರಿಯ ಪೂರ್ವಭಾವಿ ಸಭೆ

Suddi Udaya

ನಿಡ್ಲೆ ಹಾಗೂ ಪಟ್ರಮೆಯಲ್ಲಿ ಕಾಡಾನೆ ಪ್ರತ್ಯಕ್ಷ

Suddi Udaya

ಇಂದಬೆಟ್ಟು: ಪಿಲಾಪ್ಪಾಡಿ ನಿವಾಸಿ ಕುಸುಮಾವತಿ ನಿಧನ

Suddi Udaya

ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!