September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಪಂದ್ಯಾಟಕ್ಕೆ ಎಸ್.ಡಿ.ಎಂ ಕಾಲೇಜಿನ 9 ವಿದ್ಯಾರ್ಥಿಗಳು ಆಯ್ಕೆ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ 9 ಜನ ವಿದ್ಯಾರ್ಥಿಗಳು ಇದೇ ಬರುವ ಫೆಬ್ರವರಿ 14ರಿಂದ 18ವರೆಗೆ ವಿಜಯವಾಡದಲ್ಲಿ ನಡೆಯಲಿರುವ ಅಖಿಲಾ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಮಹಿಳಾ ನೆಟ್ ಬಾಲ್ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ.

ಇವರು ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ತಂಡದಲ್ಲಿ ಎಸ್.ಡಿ.ಎಂ ಕಾಲೇಜಿನ ಎಂಎಸ್ ಡಬ್ಲ್ಯೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಾದ ವರ್ಷಿತಾ, ರಶ್ಮೀ ಎಸ್, ಎಂ.ಕಾಂ ವಿದ್ಯಾರ್ಥಿನಿ ಮನಿಷಾ, ಬಿಕಾಂ ವಿದ್ಯಾರ್ಥಿಳಾದ ಸುರಕ್ಷಾ, ಪಲ್ಲವಿ, ಸಿಂಚನಾ, ಬಿಎ ವಿದ್ಯಾರ್ಥಿನಿ ಧನು ಶ್ರೀ ಎಚ್.ಆರ್. ಬಿ.ಎಸ್ ಸಿ ವಿದ್ಯಾರ್ಥಿನಿ ಸ್ಪೂರ್ತಿ ಎಂ.ಆರ್ ತಂಡದಲ್ಲಿ ಭಾಗವಹಿಸಲಿದ್ದಾರೆ. ಇದೇ ಮಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ಆಳ್ವಾಸ್ ಕಾಲೇಜಿನ ಜೋಸ್ಮಿನ್ ಮಾರಿಯಾ ಮತ್ತು ನಿರ್ಮಾಲಾ ಕಾಮತ್ ಸೇರಿದಂತೆ ಮೂಡುಬಿದಿರೆಯ ದವಳ ಕಾಲೇಜಿನ ವಿಶ್ಮೀತಾ ವಿ ಶೆಟ್ಟಿ ಆಯ್ಕೆಗೊಂಡಿರುತ್ತಾರೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪುಜಾರಿ ತರಬೇತಿ ನೀಡಿರುತ್ತಾರೆ.

Related posts

ಮುಂಡಾಜೆ: ವಿದ್ಯುತ್ ಲೈನ್ ಮೇಲೆ ಬಿದ್ದ ಮರ: ಗುಡ್ಡಕ್ಕೆ ಬೆಂಕಿ

Suddi Udaya

ಶಿಶಿಲ: ಕಿಂಡಿ ಅಣೆಕಟ್ಟುವಿನಲ್ಲಿ ಅಡ್ಡಲಾಗಿ ಬಿದ್ದಿದ್ದ ಮರದ ದಿಮ್ಮಿಗಳ ತೆರವು ಕಾರ್ಯ

Suddi Udaya

ಸೆ.27: ನಯನಾಡು ಸ.ಪ್ರೌ. ಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾಟ

Suddi Udaya

ಸೆ.15: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘ ಅರಸಿನಮಕ್ಕಿ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಕಾರ್ಕಳದಲ್ಲಿ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ವಿರುದ್ಧ ಮಾನ ಹಾನಿ:ಬಂಗೇರ ಅಭಿಮಾನಿಗಳಿಂದ ವೇಣೂರು ಪೊಲೀಸರಿಗೆ ದೂರು

Suddi Udaya

ಬೆಳ್ತಂಗಡಿ : ಶ್ರೀಮತಿ ಆಲಿಸ್ ಪಿರೇರಾ ನಿಧನ

Suddi Udaya
error: Content is protected !!