September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹೊಕ್ಕಾಡಿಗೋಳಿ ಶಾಲೆಯಲ್ಲಿ ಮೆಟ್ರಿಕ್ ಮೇಳ

ಹೊಕ್ಕಾಡಿಗೋಳಿ : ಹೊಕ್ಕಾಡಿಗೋಳಿ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ ಫೆ.14 ರಂದು ನಡೆಯಿತು.

ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಹುಲಿಮೇರು ಇವರ ಅಧ್ಯಕ್ಷತೆಯಲ್ಲಿ ಮೆಟ್ರಿಕ್ ಮೇಳದ ಉದ್ಘಾಟನೆಯನ್ನು ರಕ್ಷಣ್ ಮೆಲಾಂಟ, ಉದ್ಯಮಿ ಕೃಷ್ಣ ಕ್ರಷರ್ 12 ಕವಲು ನೆರವೇರಿಸಿಕೊಟ್ಟು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆರಂಬೋಡಿ ಪಿಡಿಓ ಗಣೇಶ್ ಶೆಟ್ಟಿ ಮಾತನಾಡಿ, ಮೆಟ್ರಿಕ್ ಮೇಳವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವುದರ ಜೊತೆಗೆ ವ್ಯವಹಾರ ಜ್ಞಾನವನ್ನು ಮೂಡಿಸುವ ಅದ್ಭುತ ಚಟುವಟಿಕೆ ಹಾಗೂ ಈ ಮೇಳದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವು ಬೆಳೆಯುತ್ತದೆ ಎಂಬುದಾಗಿ ತಿಳಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಶಶಿಧರ್ ಕಲ್ಲಾಪು ಹಾಗೂ ಕಿರಣ್ ಮಂಜಿಲ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್ ಡಿ ಎಂ ಸಿ ಸದಸ್ಯರು, ತಾಯಂದಿರ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ವ್ಯಾಪಾರ ಮಾಡಿ ಪ್ರೋತ್ಸಾಹಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಸುಮಿತ್ರ ಎಸ್. ಸ್ವಾಗತಿಸಿ, ಶಿಕ್ಷಕಿಯರಾದ ಸುಚಿತ್ರ, ಮೆಟಿಲ್ಡ ಡಿಸೋಜ, ಸಿಲ್ವಿಯಾ ಮಿರಾಂದ, ಶುಭವತಿ, ಸುತೀಕ್ಷಾ ಹಾಗೂ ಪ್ರಮೀಕ್ಷಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

Related posts

ಜು.30: ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಕಣಿಯೂರು ಗ್ರಾ. ಪಂ. ನ ಸದಸ್ಯ ಪ್ರವೀಣ್ ಗೌಡ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆದ ಹಲ್ಲೆಯನ್ನು ಖಂಡಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಬೃಹತ್ ಪ್ರತಿಭಟನೆ

Suddi Udaya

ರಕ್ಷಿತ್ ಶಿವರಾಂ ಮನವಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸ್ಪಂದನೆ : ಅರಸಿನಮಕ್ಕಿ ಶಾಲೆಗೆ ಶಿಕ್ಷಕರ ನೇಮಕ

Suddi Udaya

ಉರುವಾಲು ಶ್ರೀ ವೀಘ್ನೇಶ್ವರ ಭಜನಾ ಮಂದಿರದಲ್ಲಿ 17 ನೇ‌ ವರ್ಷದ ನಗರ ಭಜನೆಯ ಮಂಗಳೋತ್ಸವ

Suddi Udaya

ಉಜಿರೆ ಶ್ರೀ ಧ ಮಂ ಸ್ವಾಯತ್ತ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಕಾಳಿದಾಸ ಜಯಂತಿ ಆಚರಣೆ

Suddi Udaya

ಖಾಸಗಿ ವಿಮಾಕಂಪೆನಿಗಳಿಂದ ವಿಮಾ ಕಾನೂನಿನ ಉಲ್ಲಂಘನೆ ಆರೋಪ: ಜನಸಾಮಾನ್ಯರಿಗೆ ಅನ್ಯಾಯ: ಹಷ೯ ಡಿ’ಸೋಜ

Suddi Udaya

8ನೇ ರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸೆ ದಿನದ ಪ್ರಯುಕ್ತ ಎಸ್.ಡಿ.ಎಂ. ನ್ಯಾಚುರೋಪತಿ ಕಾಲೇಜಿನಿಂದ ಪ್ರಾಕೃತಿಕ ಚಿಕಿತ್ಸೆ ಜಾಗೃತಿ ಮತ್ತು ಆರೋಗ್ಯ ಶಿಬಿರ

Suddi Udaya
error: Content is protected !!