25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ಬಿಜೆಪಿ ವತಿಯಿಂದ ವಿಬಿಜಿ ರಾಮ್ ಜಿ ಯೋಜನೆಯ ಜನಜಾಗೃತಿ ಮೂಡಿಸಲು ಬೃಹತ್ ಜಾಥಾ

ಬೆಳ್ತAಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಹಾಗೂ ವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ ಗ್ರಾಮೀಣ ವಿಬಿಜಿ ರಾಮ್ ಜಿ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಲು ಹಾಗೂ ಕೇಂದ್ರ ಸರ್ಕಾರದ ಹೊಸ ಕಾಯ್ದೆಯಗೆ ಜನಜಾಗೃತಿ ಮೂಡಿಸಲು ಫೆ.16 ರಂದು ಬೆಳ್ತಂಗಡಿ ಶಾಸಕರ ಶ್ರಮಿಕ ಕಚೇರಿಯಿಂದ ಸಮಾಜ ಮಂದಿರದವರೆಗೆ ಬೃಹತ್ ಜಾಥಾ ನಡೆಯಿತು.

ಗ್ರಾ.ಪಂ.ಗಳು ಕೇಂದ್ರ ಸರ್ಕಾರದ ಅನುದಾನದಿಂದ ಮಾತ್ರ ಜನಸೇವೆ ಮಾಡುವ ಪರಿಸ್ಥಿತಿ:
ಬಳಿಕ ಸಮಾಜ ಮಂದಿರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ, ವಿಬಿಜಿ ರಾಮ್ ಜಿ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದೇ ಈ ಯೋಜನೆಗೆ ಕೇಂದ್ರ ೬೦% ಕೊಟ್ಟರೆ, ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗುತ್ತದೆ. ಆದರೆ, ಖಜಾನೆ ಖಾಲಿಯಾಗಿರುವ ಸರ್ಕಾರಕ್ಕೆ ಇನ್ನೂ ಎರಡೂವರೆ ವರ್ಷ ಅನುದಾನ ನೀಡಲು ಸಾಧ್ಯವಿಲ್ಲದಂತಾಗಿದೆ. ರಾಜ್ಯದ ಗ್ರಾಮ ಪಂಚಾಯತ್‌ಗಳು ಕೇಂದ್ರ ಸರ್ಕಾರದ ಅನುದಾನದಿಂದ ಮಾತ್ರ ಜನಸೇವೆ ಮಾಡುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಕೇಂದ್ರದಿಂದ ಬಂದಿರುವ 1200 ಕೋ.ರೂ. ಹಣ ಎಲ್ಲಿಗೆ ವಿನಿಯೋಗ ಆಗಿದೆ, ಯಾರು ತಿಂದಿದ್ದಾರೆ ? ಎಂಬುದೇ ಗೊತ್ತಿಲ್ಲ ಎಂದರು.

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಂಡಿರದಂತಹ ಭ್ರಷ್ಟಾಚಾರ ನಡೆಯುತ್ತಿದೆ. ವಾಲ್ಮೀಕಿ ಹಗರಣ ನಡೆಸಿ, ತೆಲಂಗಾಣ ಚುನಾವಣೆಗೆ ಬಳಸಿಕೊಂಡಿದ್ದೀರಿ. ಅಬಕಾರಿ ಇಲಾಖೆಯಲ್ಲಿ ಸುಮಾರು ೬೦೦೦ ಸಾವಿರ ಕೋ.ರೂ. ಹಗರಣ ನಡೆಸಿ ಮಹರಾಷ್ಟ್ರ ಚುನಾವಣೆಗೆ ಬಳಸಿದಿರಿ. ಅಲ್ಲದೆ, ಈ ಹಣ ಯಾರ ಯಾರ ಕಿಸೆಗೆ ಹೋಗಿದೆ, ಯಾರ ಕುಟುಂಬಕ್ಕೆ ಹೋಗಿದೆ ಎಂಬುದೂ ಜನರಿಗೆ ಗೊತ್ತಿದೆ. ಬಜೆಟ್ ಭಾಷಣ ಸಿದ್ಧರಾಮಯ್ಯನವರು ಈ ರಾಜ್ಯಕ್ಕೆ ಇಷ್ಟು ಅನುದಾನ ನೀಡಿದೆ ಎಂದು ಎದೆತಟ್ಟಿ ಹೇಳಿಕೊಳ್ಳುವ ಭಾಷಣ ಇಲ್ಲ. ಈಗ ಭಾಷಣ ಮಾಡುವಾಗ ಹೆಸರಿಲ್ಲದ ವಿದೇಶಿಗರು ಹೊಗಳಿದ್ದಾರೆಂದು ಹೇಳುತ್ತಾರೆ. ಆದರೆ, 16 ಬಾರಿ ಬಜೆಟ್ ಮಂಡಿಸಿರುವ ಸಿದ್ಧರಾಮಯ್ಯನವರಿಗೆ ಯಾರೋ ಹೇಳಿದ್ದನ್ನು ತಮ್ಮ ಸರ್ಕಾರದ ಹೊಗಳಿಕೆ ಎಂದು ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅವರಿಗೆ ಮಾಹಿತಿ ಇಲ್ಲ:
ಬಳಿಕ ಮಾತನಾಡಿದ ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಅವರು, ರಫೇಲ್ ಬಗ್ಗೆ ಆರೋಪಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದಾಗ ಮಾಧ್ಯಮಮಿತ್ರರು ಪ್ರತಿಭಟನಾಕಾರರಲ್ಲಿ ರಫೇಲ್ ಬಗ್ಗೆ ಕೇಳಿದಾಗ ಅವರಿಗೆ ಅದರ ಮಾಹಿತಿಯೇ ಇರಲಿಲ್ಲ. ಅಂತಹುದೇ ಪರಿಸ್ಥಿತಿ ವಿಬಿರಾಮ್ ಜಿ. ಯೋಜನೆಯಲ್ಲಿದೆ. ಕೇಂದ್ರದ ಈ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ಯೋ, ಅಲ್ಲಿ ಹೋಗಿ ಈ ಯೋಜನೆಯ ಫುಲ್ ಫಾರ್ಮ್ ಕೇಳಿದರೆ ಅದರ ಬಗ್ಗೆಯೂ ಅವರಿಗೆ ಗೊತ್ತಿರಲು ಸಾಧ್ಯವಿಲ್ಲ. ಈಗ ರಾಜ್ಯದಲ್ಲಿ ಏನು ಮುಖ್ಯಮಂತ್ರಿ ಖುರ್ಚಿಗಾಗಿ ಪೈಪೋಟಿ ನಡೆಯುತ್ತಿದೆಯೋ ಅದರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಪ್ರತಿಭಟನೆಯ ನಾಟಕವಾಡುತ್ತಿದೆ ಎಂದರು.

ಅಲ್ಲದೇ, ಸಿಎಂ ಖುರ್ಚಿ ಒಪ್ಪಂದದಂತೆ ಸಿದ್ಧರಾಮಯ್ಯನವರ ಅವಧಿ ಮುಗಿದಿದೆ. ಡಿಕೆಶಿಯವರು ಸಿಎಂ ಖುರ್ಚಿ ಬಿಟ್ಟುಕೊಡಲು ಹೇಳುವಾಗ ಸಿದ್ಧರಾಮಯ್ಯನವರು ಎಂದು ಹೇಳುತ್ತಾರೆ. ಅಂದರೆ, ಸಿಎಂ ಖುರ್ಚಿಯನ್ನು ಮತ್ತಷ್ಟು ದಿನ ಮುಂದೂಡುವ ಕಾರಣಕ್ಕಾಗಿ ಈಗ ರಾಜ್ಯದಲ್ಲಿ ವಿಬಿ ರಾಮ್ ಜಿ. ಬಗ್ಗೆ ವ್ಯರ್ಥ ಹೋರಾಟವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವ್ಯಂಗವಾಡಿದರು.

ಸಭೆಯಲ್ಲಿ, ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಶ್ರೀನಿವಾಸ್ ರಾವ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಘಟಕ ಕಾರ್ಯದರ್ಶಿ ಜೋಯಲ್ ಮೆಂಡೋನ್ಸ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಮಹಿಳಾ ಕಾರ್ಯದರ್ಶಿ ವಸಂತಿ ಮಚ್ಚಿನ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಮನ್ ಕಿ ಬಾತ್ ಜಿಲ್ಲಾ ಪ್ರಮುಖ್ ಸೀತಾರಾಮ್ ಬೆಳಾಲ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಉಪಸ್ಥಿತರಿದ್ದರು. ಲಾಯಿಲ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ ನಿರೂಪಣೆಗೈದರು.

Related posts

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಡಿ.4 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ : ಹಿಂದೂ ಹಿತ ರಕ್ಷಣಾ ಸಮಿತಿಯ ಕರೆಗೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ತಾಲೂಕು ಘಟಕ ಸಂಪೂರ್ಣ ಬೆಂಬಲ

Suddi Udaya

ಬೆಳ್ತಂಗಡಿ: 1867 ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮ

Suddi Udaya

ಬಾರ್ಯ ಗ್ರಾ.ಪಂ. ಅಧ್ಯಕ್ಷರಾಗಿ ಉಸ್ಮಾನ್, ಉಪಾಧ್ಯಕ್ಷರಾಗಿ ಯಶೋಧ ಶೆಟ್ಟಿ ಆಯ್ಕೆ

Suddi Udaya

ನ.11-13: ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೌಶಲ್ಯ ಜ್ಞಾನದ ಉಚಿತ ತರಬೇತಿ

Suddi Udaya

ಕಳಿಯ ಗ್ರಾಮ ಪಂಚಾಯತ್ ಜನಸ್ಪಂದನ ಸಭೆ

Suddi Udaya

ಎಸ್‌ವೈಎಸ್ ಗುರುವಾಯನಕೆರೆ ಶಾಖೆಯ ವತಿಯಿಂದ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya
error: Content is protected !!