September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಶಿಶಿಲ: ಉಮ್ಮಂತಿಮಾರ್ ಎಂಬಲ್ಲಿ ಕಿಂಡಿ ಅಣೆಕಟ್ಟು–ಒಟ್ಲದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ

ಶಿಶಿಲ: ಶಿಶಿಲ ಗ್ರಾಮದ ಉಮ್ಮಂತಿಮಾರ್ ನಲ್ಲಿ ರೂ.2.50 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು ನಿರ್ಮಾಣ ಹಾಗೂ ಒಟ್ಲ ಪ್ರದೇಶದಲ್ಲಿ ರೂ.40 ಲಕ್ಷ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಮಾ.2ರಂದು ಶಿಲಾನ್ಯಾಸವು ಕಾರ್ಯಕ್ರಮ ನೆರವೇರಿತು.

ಶಾಸಕ ಹರೀಶ್ ಪೂಂಜ ಅವರು ಶಿಲಾನ್ಯಾಸ ನೆರವೇರಿಸಿದರು. ಸ್ಥಳೀಯ ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಈ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನೀರಿನ ಸಂರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ನೆರವಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಒಟ್ಲ ಪ್ರದೇಶದ ಸೇತುವೆ ನಿರ್ಮಾಣದಿಂದ ಗ್ರಾಮಾಂತರ ಸಂಪರ್ಕ ವ್ಯವಸ್ಥೆ ಸುಧಾರಣೆ ಕಾಣಲಿದೆ ಶಿಬಾಜೆ ಗ್ರಾಮಕ್ಕೂ ಸಂಪರ್ಕಕ್ಕೆ ಅನುಕೂಲವಾಗಲಿದೆ. ಅದಲ್ಲದೆ ಶಿಶಿಲ ದೇವಸ್ಥಾನಕ್ಕೆ ಮತ್ತು ದೇವಸ ಭಾಗಕ್ಕೆ ಈ ಸೇತುವೆ ಮೂಲಕ ಸಂಪರ್ಕ ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಸುಧೀನ್ ಡಿ, ಸಂದೀಪ್ ಅಮ್ಮುಡಂಗೆ, ಮಾಜಿ ಸದಸ್ಯರು, ಸ್ಥಳೀಯ ಮುಖಂಡರಾದ, ಕೊರಗಪ್ಪ ಗೌಡ, ಕರುಣಾಕರ ಶಿಶಿಲ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಚೇತನ ಚಂದ್ರಶೇಖರ, ಆನಂದ ಪೂಜಾರಿ, ರಾಧಾಕೃಷ್ಣ ಗುತ್ತು,ಸುಬ್ರಾಯ ಗೌಡ, ಕೆ ಜಿ ಗೋಖಲೆ, ಕುಶಾಲಪ್ಪ ಗೌಡ, ಗೋಪು ಗೋಖಲೆ, ರಮೇಶ್ ಒಟ್ಲ, ಸೀನಪ್ಪ, ಚೆನ್ನಪ್ಪ ಮಲೆಕುಡಿಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಹರೀಶ್ ಪೂಂಜರ ಪರ ಮತಯಾಚನೆಗೆ ಬಿರ್ವೆರ್ ಕುಡ್ಲದ ಸ್ಥಾಪಕ ಉದಯ್ ಪೂಜಾರಿ ಬಳ್ಳಾಲ್ ಬಾಗ್

Suddi Udaya

ಭಾರೀ ಮಳೆಗೆ ಕಾಯರ್ತಡ್ಕ ಮೈರಾರ್ ‍ನಲ್ಲಿ ಸೇತುವೆ ಮುಳುಗಡೆ

Suddi Udaya

ಲಾಯಿಲ :ಕರ್ನೋಡಿ ಸ.ಉ.ಹಿ. ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿ ಆಂಗ್ಲ ಮಾಧ್ಯಮ ಉದ್ಘಾಟನೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯಿಂದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಯಲ್ ರವರಿಗೆ ಗೌರವಾರ್ಪಣೆ

Suddi Udaya

ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ ಒಕ್ಕೂಟದ ವತಿಯಿಂದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕಳಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ ಉದ್ಯೋಗ ಪ್ರೇರಣಾ ಶಿಬಿರ

Suddi Udaya
error: Content is protected !!