September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಭಟ್ಕಳ ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತಿ ಉತ್ಸವ

ಧರ್ಮದಿಂದ ಭಗವಂತನ ಅನುಗ್ರಹ: ಕನ್ಯಾಡಿ ಶ್ರೀ

ಬೆಳ್ತಂಗಡಿ: ಧರ್ಮ ಮಾರ್ಗದಿಂದ ನಡೆದರೆ ಭಗವಂತನ ಅನುಗ್ರಹ ಯಾವತ್ತೂ ಇರುತ್ತದೆ ಎಂದು ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಅವರು ಮಾ.4ರಂದು ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತಿ ಉತ್ಸವದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.

ಒಂದು ಒಳ್ಳೆಯ ಪದವಿ ಹಾಗೂ ಗೌರವ ಸಿಗಬೇಕಾದರೆ ನಮಗೆ ಪೂರ್ವಜನ್ಮದ ಪುಣ್ಯ ಇರಬೇಕಾಗುತ್ತದೆ. ಭಗವಂತನನನ್ನು ಸೇರಬೇಕಾದರೆ ವಿವೇಕ, ಇಂದ್ರಿಯ ನಿಗ್ರಹ ಹಾಗೂ ವೈರಾಗ್ಯ ಈ ಮೂರು ಒಟ್ಟಿಗೆ ಆಗಬೇಕು. ಭಗವಂತನ ಆತ್ಮವೇ ನಮ್ಮ ಜೀವಾತ್ಮವಾಗಿದೆ. ಭಗವಂತನನ್ನು ಸೇರಬೇಕಾದರೆ ರಾಜಯೋಗ, ಭಕ್ತಿಯೋಗ ಹಾಗೂ ಕರ್ಮ ಯೋಗ ಬೇಕಾಗುತ್ತದೆ. ಗಟ್ಟಿಯಾದ ವ್ಯಕ್ತಿತ್ವ ಪಡೆಯಬೇಕಾದರೆ ಯೋಗಿಯಾಗಬೇಕು. ಆತ್ಮ ಮತ್ತು ಪರಮಾತ್ಮನ ಒಟ್ಟಿಗೆ ಸೇರಿಸುವ ಪ್ರಕ್ರಿಯೇಯೆ ಯೋಗವಾಗಿದೆ ಎಂದು ಹೇಳಿದರು.

ನಮ್ಮ ಆತ್ಮವನ್ನು ನಾವೇ ಉದ್ದರಿಸಬೇಕು. ನಾವೆಲ್ಲರೂ ಪರಸ್ಪರ ದ್ವೇಷವನ್ನು ಬಿಟ್ಟು ನಾವೆಲ್ಲರೂ ಎಲ್ಲರನ್ನು ಪ್ರೀತಿಸುವಂತವರಾಗಬೇಕು. ಧರ್ಮ ಆಧಾರಿತ ಜೀವನ ನಮ್ಮನ್ನು ಸುಖದ ಕಡೆಗೆ ಕೊಂಡೊಯ್ಯುತ್ತದೆ, ಸಂತರ ಸಾಧನೆ ತಪಸ್ಸು ಸನಾತನ ಪರಂಪರೆಯ ಮುಂದುವರಿಕೆಗೆ ಪೂರವಾಗಿರುತ್ತದೆ ಎಂದರು.

ಪ್ರತಿಷ್ಠಾಪನಾ ವರ್ಧಂತಿ ಉತ್ಸವದ ಅಂಗವಾಗಿ ಧ್ಯಾನ ಮಂದಿರದಲ್ಲಿ ಬೆಳಿಗ್ಗೆ ವಿವಿಧ ಹೋಮ ಹವನಗಳೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಲೋಕಕಲ್ಯಾಣಕ್ಕಾಗಿ ಶ್ರೀರಾಮತಾರಕ ಮಹಾಯಜ್ಞ ವೇದಮೂರ್ತಿ ಲಕ್ಷ್ಮೀಪತಿ ಇವರ ನೇತೃತ್ವದಲ್ಲಿ ಅರ್ಚಕರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ವೈದ್ಯ, ಶ್ರೀರಾಮ ಕ್ಷೇತ್ರದ ನೂತನ ಟ್ರಸ್ಟಿಗಳಾಗಿ ಆಯ್ಕೆಯಾದ, ಎಚ್.ಆರ್.ನಾಯ್ಕ, ಕೋನಳ್ಳಿ, ಚಂದ್ರ ಪೂಜಾರಿ ಸಾಗರ, ಕೆ.ಆರ್.ನಾಯ್ಕ, ಭಟ್ಕಳ, ರವೀಂದ್ರ ಪೂಜಾರಿ, ತುಕಾರಾಮ ಸಾಲ್ಯಾನ್ ಹಾಗೂ ರವಿದಾಸ ಬೆಂಗಳೂರು ಇವರನ್ನು ಸ್ವಾಮೀಜಿಗಳು ಶಾಲು ಹೊದೆಯಿಸಿ ಗೌರವಿಸಿದರು.

ಪ್ರಶ್ನೆ, ನಾರಾಯಣ ಬಾರ್ಪಿ, ಉತ್ತರಕನ್ನಡ, ಶಿವಮೊಗ್ಗ, ಉಡುಪಿ ಭಟ್ಕಳ ಗುರುಮಠ ದೇವಸ್ಥಾನದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ಹನುಮಂತ ದೇವಸ್ತಾನದ ಅಧ್ಯಕ್ಷ ನಾಗೇಂದ್ರ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಪ್ರಮುಖರ ಪ್ರಮುಖರಾದ ಡಿ.ಬಿ.ನಾಯ್ಕ, ಭಟ್ಕಳ ನಾಗೇಶ ನಾಯ್ಕ ಕಾಗಾಲ, ರಾಮಾ ಮೊಗೇರ, ಅಟೋ ಗಂಗಾಧರ, ಬೆಂಗಳೂರು, ಈರಪ್ಪ ಗರ್ಡಿಕರ, ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಬ್ಲಾಕ ಕಾಂಗ್ರೆಸ್ ವೆಂಕಟೇಶ ನಾಯ್ಕ, ವಾಮನ ನಾಮನ ಕೃಷ್ಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯ ವಿವಿಧೆಡೆಯಿಂದ ಪ್ರಮುಖರು, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ವಿವಿಧ ಜಿಲ್ಲೆಯ ಪಧಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಲಕ್ಷ್ಮೀಪತಿ ಇವರಿಂದ ವೇಧಘೋಷ ನಡೆಯಿತು. ಶಿಕ್ಷಣ ನಾರಾಯಣ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷಶ್ರೀಧರ ನಾಯ್ಕ ವಂದಿಸಿದರು.

Related posts

ಧರ್ಮಸ್ಥಳ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Suddi Udaya

ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ಹಾಗೂ ಇಂಟರ್ನೆಟ್ ಕ್ಲಬ್ ಆಶ್ರಯದಲ್ಲಿ ಶುಗರ್ ಹಾಗೂ ಬಿಪಿ ತಪಾಸಣೆ

Suddi Udaya

ಎಸ್ ಬಿಐ ಲೈಫ್‌ ಕಾರ್ಕಳ ಬ್ರಾಂಚ್ ಬೆಳ್ತಂಗಡಿಯ ಘಟಕದ ಸುಭಾಷ್ ಚಂದ್ರ ಎಂ ಪಿ ರವರಿಗೆ ಇಂಟರ್ನ್ಯಾಷನಲ್ ಕ್ವಾಲಿಟಿ ಅವಾರ್ಡ್

Suddi Udaya

ಮುಂಡಾಜೆ: ನಿರಂತರ ಮಳೆಯಿಂದಾಗಿ ಮುಂಡ್ರುಪ್ಪಾಡಿ ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ನೀರು: ಅಪಾರ ಹಾನಿ

Suddi Udaya

ಭಜನಾ ಪರಿಷತ್ ಲಾಯಿಲ ವಲಯದ ಅಧ್ಯಕ್ಷರಾಗಿ ಪಿ. ಚಂದ್ರಶೇಖರ ಸಾಲ್ಯಾನ್, ಕಾರ್ಯದರ್ಶಿಯಾಗಿ ಅಖಿಲೇಶ್ ಚಂದ್ಕೂರು, ಕೋಶಾಧಿಕಾರಿಯಾಗಿ ದಿನೇಶ್ ಜಾನ್ಲಪು

Suddi Udaya

ಜೆಇಇ ಅಡ್ವಾನ್ಸ್ ನಲ್ಲಿ ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ, ರಾಷ್ಟ್ರ ಮಟ್ಟದಲ್ಲಿ 45 ನೆಯ ರ‍್ಯಾಂಕ್ ಪಡೆದ ವೀರಭದ್ರೇಶ್ ಕಟಗೇರಿ: ಗಗನ ಕುಸುಮವೆನಿಸಿದ ಐಐಟಿ ಪ್ರವೇಶಾತಿ ಎಕ್ಸೆಲ್ ನಿಂದ ಸುಲಭ ಸಾಧ್ಯ : ರಾಷ್ಟ್ರದ ಅತ್ಯಂತ ಕಠಿಣ ಪರೀಕ್ಷೆ ಎಕ್ಸೆಲ್ ವಿದ್ಯಾರ್ಥಿಗಳಿಗೆ ಸಲೀಸು

Suddi Udaya
error: Content is protected !!