September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಿಡಿಗಲ್: ನಡ್ವಾಲ್ ಸಿರಿಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಲ್ಮಂಜ: ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ನಲ್ಲಿ ಮಾ31ರಿಂದ ಎ.4ರವರೆಗೆ ನಡೆಯುವ ಇತಿಹಾಸ ಪ್ರಸಿದ್ಧ ನಡ್ವಾಲ್ ಸಿರಿಜಾತ್ರ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಾ.8ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಸ್ವಾಮಿ ಪ್ರಸಾದ್ ನಿಡ್ಲೆ ಬಿಡುಗಡೆಗೊಳಿಸಿ ಕ್ಷೇತ್ರದಲ್ಲಿ ನಡೆಯುವ ನಡ್ವಾಲ್ ಸಿರಿಜಾತ್ರ ಮಹೋತ್ಸವ ವಿಜೃಂಭಣೆಯಿಂದ ಅಚ್ಚುಕಟ್ಟಾಗಿ ನಡೆಯಬೇಕು ಹಾಗೂ ಸಮಿತಿಯವರು ಹಾಗೂ ಊರವರೆಲ್ಲರೂ ಸೇರಿ ಈ ವರ್ಷ ಅದ್ದೂರಿಯಾಗಿ ಮಾದರಿ ಜಾತ್ರೋತ್ಸವ ನಡೆಸೋಣ ಜಾತ್ರೋತ್ಸವದ ಯಶಸ್ಸಿನಲ್ಲಿ ತಮ್ಮೆಲ್ಲರ ಸಹಕಾರ ಇರಲಿ ಎಂದರು.

ವೇದಿಕೆಯಲ್ಲಿ ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಪಾಂಡುರಂಗ ಮರಾಟೆ ಹಡೀಲು, ಚಂದ್ರಹಾಸ ಪಟವರ್ಧನ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ ಕೊಡೆಕ್ಕಲ್, ಅರ್ಚಕರಾದ ಹೆಚ್ ಎಸ್ ಮಾಧವ ಶರ್ಮ, ಮಂಗಳೂರಿನ ವಕೀಲರಾದ ಹರೀಶ್ ಆಳ್ವಾ, ಶ್ರೀಮತಿ ಸುಧಾ ನಾಗೇಶ್ ಕುಮಾರ್ ಗೌಡ, ಸಮಿತಿ ಸದಸ್ಯರಾದ ಯಶೋಧರ ಗೌಡ ಕೊಡ್ಡೋಲು, ಪ್ರಸಾದ್ ಕುಮಾರ್, ನಾಗೇಶ್ ಎಂ, ನಾಣ್ಯಪ್ಪ ಪೂಜಾರಿ, ಗುರುರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷರಾದ ಹರೀಶ್ ಕೆ, ಪ್ರಕಾಶ್ ಕುಮಾರ್ ಎಳನೀರು , ರಾಜೇಶ್ ಪೂಜಾರಿ ಗೋಳಿದೊಟ್ಟು, ಶ್ರೀಮತಿ ಬೇಬಿ ಉಮೇಶ್, ಶ್ರೀಮತಿ ಕುಸುಮ ಶೆಟ್ಟಿ ಕೋಡ್ಡೋಳು, ಅಂಜಲಿ ಶೆಟ್ಟಿ ಸುಪ್ರೀತಾ ಶೆಟ್ಟಿ ಗುತ್ತಿಲ್ಲಾರಬೆಟ್ಟು, ರತ್ನಾಕರ ಪೂಜಾರಿ ಗೋಲಿದೊಟ್ಟು ಸಂತೋಷ್ ಗೌಡ ಗೋಳಿದೊಟ್ಟು, ಸುಭಾಷ್ ಶೆಟ್ಟಿಗಾರ್, ಶ್ರೀಮತಿ ರೇಖಾ ಭಾಲಕೃಷ್ಣ ನಾಯ್ಕ , ವಿಘ್ನೇಶ್ ನಾಯ್ಕ, ಪ್ರವೀಣ್ ಗೌಡ, ಜಯಾನಂದ ಪಾಲೆದಡಿ, ಶ್ರೀಮತಿ ವಿನಯಪ್ರಕಾಶ್ ಶೆಟ್ಟಿ, ಶ್ರೀಮತಿ, ಗಂಗಯ್ಯ ಕುಂಬಾರ, ವಿಘ್ನೇಶ್ ಪೂಜಾರಿ, ಪ್ರಜ್ವಲ್ ಹೆಬ್ಬಾರ್ಧೋಡಿ, ಸೀತಾಲಕ್ಷ್ಮಿ ಹಾಗೂ ಊರವರು ಉಪಸ್ಥಿತರಿದ್ದರು.

Related posts

ಅ.17: ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಂಘಟನೆಯ ವತಿಯಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಮತ್ತು ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಾಗೂ ಕಾರ್ಗಿಲ್ ವೀರ ಯೋಧರಿಗೆ ಗೌರವ ಸಮರ್ಪಣೆ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ನೆರಿಯ ಸಂತ ಥೋಮಸ್ ಅ.ಪ್ರೌ. ಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ

Suddi Udaya

ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಹರಿ ಓಂ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಗೆ ಬ್ಯಾಗ್, ಕೊಡೆ ಹಾಗೂ ಪುಸ್ತಕ ವಿತರಣೆ

Suddi Udaya

ಸೌಜನ್ಯ ಪ್ರಕರಣ ಮರು ತನಿಖೆ ಕೋರಿದ ಅರ್ಜಿ: ಸರಕಾರ, ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿ

Suddi Udaya

ಕೂಕ್ರಬೆಟ್ಟು, ಕೊಕ್ರಾಡಿ ಶಾಲೆಗಳ ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಲಾ ₹ 2 ಲಕ್ಷ ಮಂಜೂರು

Suddi Udaya

ಧರ್ಮಸ್ಥಳ: ಬೊಳಿಯಾರ್ ನಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ

Suddi Udaya
error: Content is protected !!