September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಇತಿಹಾಸ ಪ್ರಸಿದ್ದ ಬಳಂಜ ದೇವಸ್ಥಾನದ ಭಕ್ತವೃಂದದಿಂದ ಶಾಸಕ ಹರೀಶ್ ಪೂಂಜರವರ ಭೇಟಿ

ಬಳಂಜ: ಇತಿಹಾಸ ಪ್ರಸಿದ್ದ ಬಳಂಜ ಶ್ರೀ ಪಂಚಲಿಂಗೇಶ್ವರ ದುರ್ಗಾ ಪರಮೇಶ್ವರಿಯ ಸನ್ನಿದಾನವು ಜೀರ್ಣೋದ್ಧಾರಗೊಂಡು 12 ವರುಷಗಳು ಕಳೆದು ಇದೀಗ ಪುನಃ ಬ್ರಹ್ಮಕಲಶಕ್ಕೆ ಅಣಿಯಾಗುತ್ತಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರ ನೇತೃತ್ವದಲ್ಲೇ ಬ್ರಹ್ಮಕಲಶ ನಡೆಸುವ ಬಗ್ಗೆ ಅಧಿಕೃತ ಆಹ್ವಾನವನ್ನು ಸಲ್ಲಿಸಲು ಬಳಂಜದ ಸಮಸ್ತರು ಶಾಸಕ ಹರೀಶ್ ಪೂಂಜರವರ ನಿವಾಸಕ್ಕೆ ಮಾ 21 ರಂದು ಭೇಟಿ ನೀಡಿ ಬ್ರಹ್ಮಕಲಶೋತ್ಸವ ಬಗ್ಗೆ ಚರ್ಚಿಸಿದರು.

ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ಕಳೆದ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು,ಕ್ಷೇತ್ರದ ಮುಂದಿನ ಬ್ರಹ್ಮಕಲಶೋತ್ಸವವು ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ನಡೆಯಬೇಕು ಎಂಬ ಮನವಿಯನ್ನು ಬಳಂಜ ಕ್ಷೇತ್ರದ ಭಕ್ತವರ್ಗ ಶಾಸಕರಲ್ಲಿ ವಿನಂತಿಸಿದಾಗ ಶಾಸಕರು ಪೂರ್ಣಪ್ರಮಾಣದಲ್ಲಿ ಒಪ್ಪಿಗೆ ಸೂಚಿಸಿ,ಕ್ಷೇತ್ರದ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸಹಕಾರ ನೀಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ ಶೀತಲ್ ಪಡಿವಾಳ್,ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ,ಪ್ರಮುಖರಾದ ಜಯ ಸಾಲಿಯಾನ್ ಕೊಂಗುಳ,ಸುರೇಶ್ ಶೆಟ್ಟಿ ಕುರೆಲ್ಯ,ಚಂದ್ರಶೇಖರ ಪಿಕೆ,ರಾಜೇಂದ್ರ ಶೆಟ್ಟಿ ಕುರೆಲ್ಯ,ಸಂತೋಷ್ ಕುಮಾರ್ ಕಾಪಿನಡ್ಕ, ರಮಾನಾಥ ರೈ ಪಂಬಾಜೆ,ಸತೀಶ್ ಶೆಟ್ಟಿ ಕುರೆಲ್ಯ,ಪ್ರಭಾಕರ ಹೆಗ್ಡೆ ಕೋಡಿ,ಸಂತೋಷ್ ಹೆಗ್ಡೆ ತೆಂಕಕಾರಂದೂರು,ಸಂತೋಷ್ ಪಿ ಕೋಟ್ಯಾನ್ ಬಳಂಜ,ಗುರುಪ್ರಸಾದ್ ಹೆಗ್ಡೆ ಬಳಂಜ,ಸತೀಶ್ ದೇವಾಡಿಗ ಬಳಂಜ,ಗಣೇಶ್ ಸುರ್ಯ ಕಾಪಿನಡ್ಕ, ಡೀಕಯ್ಯ ಕುಲಾಲ್ ಬಳಂಜ,ಸನತ್ ಶೆಟ್ಟಿ ನಾಲ್ಕೂರು,ಸುಧೀಶ್ ಪೂಜಾರಿ ಅಂತರ ಮತ್ತು ಬಳಂಜ ನಾಲ್ಕೂರು ತೆಂಕರಾರಂದೂರು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಡೆಂಗ್ಯೂ ಜಾಗೃತಿ- ಡಾ. ಕಲಾಮಧು ದಂಪತಿಗಳಿಗೆ ಸನ್ಮಾನ

Suddi Udaya

ಧರ್ಮಸ್ಥಳ ಗ್ರಾ.ಪಂ. ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಲ್ಲಿ ಸ್ವಚ್ಛತಾ ನೌಕರರ ಕುಟುಂಬದ ಆರೋಗ್ಯ ತಪಾಸಣೆ, ಸನ್ಮಾನ ಹಾಗೂ ವಸ್ತ್ರ ವಿತರಣೆ

Suddi Udaya

ಮಂಗಳೂರುನಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ವಿರೋಧಿ ದಿನ ಆಚರಣೆ: ಬೆಳ್ತಂಗಡಿ ತಾಲೂಕಿನ ಔಷಧಿ ವ್ಯಾಪಾರಸ್ಥರು ಭಾಗಿ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸೇವಾ ಟ್ರಸ್ಟ್, ರೋಟರಿ ಬೆಂಗಳೂರು ಇಂದಿರಾ ನಗರ,ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಕಂಬಳ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ

Suddi Udaya

ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ನೂತನ ಕೊಠಡಿಗೆ ಶಿಲಾನ್ಯಾಸ ಹಾಗೂ ವಿವೇಕ ಕೊಠಡಿ ಉದ್ಘಾಟನೆ

Suddi Udaya
error: Content is protected !!