September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಲುಕ್ಕು ಫೋಟೋ ಫ್ರೇಮ್ ನೂತನ ಶಾಖೆ ಶುಭಾರಂಭ

ಗುರುವಾಯನಕೆರೆ: ರಸ್ತೆ ಅಗಲೀಕರಣ ಕಾಮಗಾರಿಯಿಂದ ಸ್ಥಳಾಂತರಗೊಂಡಿದ್ದ ಲುಕ್ಕು ಫೋಟೋ ಫ್ರೇಮ್ ಅಂಗಡಿಯು ಸ್ಥಳೀಯ ಕಟ್ಟಡದಲ್ಲಿ ಜೂ.22 ರಂದು ಗಣಹೋಮ ನೆರವೇರಿಸಿ ಬಿಲ್ಡಿಂಗ್ ಮಾಲೀಕರಾದ ಹಿಲರಿ ಪೆರೇರಾ ರಿಬ್ಬನ್ ಕಟ್ ಮಾಡುವ ಮೂಲಕ ದೀಪ ಬೆಳಗಿಸಿ ಶುಭಾರಂಭಗೊಂಡಿತು.

ಅಂಗಡಿಯ ಮಾಲೀಕರಾದ ಜಿ. ಜಗದೀಶ್ ಆಚಾರ್ಯ ಅವರು ಮಾತನಾಡಿ, ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಮಾದರಿಯ ದೇವರ ಫೋಟೋಗಳು, ಆಕರ್ಷಕ ಫೋಟೋ ಫ್ರೇಮ್‌ಗಳು, ನವೀನ ವಿನ್ಯಾಸದ ಗಿಫ್ಟ್ ಫೋಟೋಗಳು ಸೇರಿದಂತೆ ಹಲವು ವಸ್ತುಗಳು ಇಲ್ಲಿ ಲಭ್ಯವಿವೆ ಎಂದು ತಿಳಿಸಿದರು.

ಇದಲ್ಲದೆ, ಎಲ್ಲಾ ರೀತಿಯ ಫೋಟೋ ಎಡಿಟಿಂಗ್, ಡಿಜಿಟಲ್ ಡಿಸೈನಿಂಗ್, ಲ್ಯಾಮಿನೇಷನ್ ಹಾಗೂ ಉತ್ತಮ ಗುಣಮಟ್ಟದ ಫೋಟೋ ಪ್ರಿಂಟಿಂಗ್ ಸೇವೆಗಳು ಒಂದೇ ಸೂರಿನಡಿ ಒದಗಿಸಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಮಲ್ಲಿಕಾ ಹಾಗೂ ಹಲವು ಗಣ್ಯರು, ಬಂಧು-ಬಳಗ ಮತ್ತು ಗ್ರಾಹಕರು ಉಪಸ್ಥಿತರಿದ್ದು ಶುಭ ಹಾರೈಸಿದರು.

Related posts

ಸುಲ್ಕೇರಿಮೊಗ್ರು ನಿವಾಸಿ ಬಾಲಮ್ಮ ನಿಧನ

Suddi Udaya

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ರಕ್ತದಾನ ಶಿಬಿರ

Suddi Udaya

ಸ್ಕೂಟರ್-ಟಿಪ್ಪರ್ ನಡುವೆ ಅಪಘಾತ: ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ

Suddi Udaya

ಅಭಿನಂದನ್ ಹರೀಶ್ ಕುಮಾರ್ ಮತ್ತಿತರರ ವಿರುದ್ಧದ ಸಮನ್ಸ್ ಗೆ ಜಿಲ್ಲಾ ನ್ಯಾಯಾಲಯದಿಂದ ತಡೆ

Suddi Udaya

ಉಜಿರೆಯಲ್ಲಿ ಲೋಕಕಲ್ಯಾಣಾರ್ಥ “ಶ್ರೀ ವಿಷ್ಣು ಯಾಗ”   

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ವಿದ್ಯಾರ್ಥಿ ಸಂಘ ರಚನೆ

Suddi Udaya
error: Content is protected !!