September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಭಂಡಾರಿ ಯುವ ವೇದಿಕೆ ಬೆಳ್ತಂಗಡಿ: ಅಧ್ಯಕ್ಷರಾಗಿ ಪ್ರಶಾಂತ್ ಭಂಡಾರಿ ಅಂಡಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಭಂಡಾರಿ ಕನ್ಯಾಡಿ

ಬೆಳ್ತಂಗಡಿ: ಯುವಶಕ್ತಿ ಯಾವುದೇ ಸಮಾಜದ ಬೆನ್ನೆಲುಬು. ಸಂಘಟಿತ ಯುವಕರಿಂದ ಸಮಾಜದ ಅಭಿವೃದ್ಧಿ ವೇಗವಾಗಿ ನಡೆಯುತ್ತದೆ. ಈ ದಿಟ್ಟ ಉದ್ದೇಶವನ್ನು ಮನದಲ್ಲಿ ಇಟ್ಟುಕೊಂಡು ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ತನ್ನ ನೂತನ ಸಮಿತಿಯನ್ನು ರಚಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಇದರ ನೂತನ ಸಮಿತಿ ರಚನೆ ಕಾರ್ಯಕ್ರಮವು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಭಂಡಾರಿ ಸಮಾಜದ ಅಧ್ಯಕ್ಷ ಉಮೇಶ್ ಭಂಡಾರಿ ಉಜಿರೆ ಉಪಸ್ಥಿತರಿದ್ದರು.

2026–27ನೇ ಸಾಲಿನ ಗೌರಾಧ್ಯಕ್ಷರಾಗಿ ವಿಶ್ವನಾಥ್ ಭಂಡಾರಿ ಉಜಿರೆ, ಅಧ್ಯಕ್ಷರಾಗಿ ಪ್ರಶಾಂತ್ ಭಂಡಾರಿ ಅಂಡಿಂಜೆ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಭಂಡಾರಿ ಕನ್ಯಾಡಿ, ಕೋಶಾಧಿಕಾರಿಯಾಗಿ ಗಣೇಶ್ ಭಂಡಾರಿ (ರೇಷ್ಮೆ ರೋಡ್), ಜೊತೆ ಕಾರ್ಯದರ್ಶಿಯಾಗಿ ಸೌದೇಶ್ ಭಂಡಾರಿ (ನೆರಿಯ), ಉಪಾಧ್ಯಕ್ಷರಾಗಿ ಶೋಧನ್ ಭಂಡಾರಿ (ಲಾಯಿಲ), ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಭಂಡಾರಿ ಹಾಗೂ ಸುರೇಶ್ ಭಂಡಾರಿ (ಅಗರಿ) ಆಯ್ಕೆಯಾದರು.

ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿಗಳಾಗಿ ಸತೀಶ್ ಭಂಡಾರಿ (ನಾಳ) ಹಾಗೂ ಅರ್ಪಿತ್ ಭಂಡಾರಿ (ಕನ್ಯಾಡಿ), ಕ್ರೀಡಾ ಸಮಿತಿ ಕಾರ್ಯದರ್ಶಿಗಳಾಗಿ ಪ್ರಶಾಂತ್ ಭಂಡಾರಿ (ಅರುವ) ಹಾಗೂ ಹಿತೇಶ್ ಭಂಡಾರಿ (ಕೊಂಡೊಟ್ಟು) ಆಯ್ಕೆಯಾದರು.

ಸದಸ್ಯರಾಗಿ ಮಿಥುನ್ ಭಂಡಾರಿ, ರಂಜು (ಕೊಕ್ಕಡ), ಭರತ್ ರಾಜ್ ಭಂಡಾರಿ (ಉಜಿರೆ), ಸುಧಾಕರ ಭಂಡಾರಿ (ಉಜಿರೆ), ವಸಂತ ಭಂಡಾರಿ (ಅಗರಿ), ಹರಿಪ್ರಸಾದ್ ಭಂಡಾರಿ (ನೆರಿಯ), ಸಚಿನ್ ಭಂಡಾರಿ (ಅರುವ), ರವಿಚಂದ್ರ ಭಂಡಾರಿ (ಸೋಮಂತಡ್ಕ ಮತ್ತು ಸುದರ್ಶನ ಭಂಡಾರಿ (ಗರ್ಡಾಡಿ) ಸುರೇಶ್ ಭಂಡಾರಿ (ಅರುವ )ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಉಮೇಶ್ ಭಂಡಾರಿ (ಉಜಿರೆ), ಪೂವಪ್ಪ ಭಂಡಾರಿ (ಮದ್ದಡ್ಕ) ಹಾಗೂ ಅಶೋಕ್ ಭಂಡಾರಿ (ಗುಂಡಿಯಲ್ಕೆ) ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಭಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇದೇ ವೇಳೆ ಏಪ್ರಿಲ್ 14ರಂದು ಗುರುವಾಯನಕೆರೆ ಪಣೆಜಾಲುವಿನಲ್ಲಿ ಭಂಡಾರಿ ಸಮಾಜಕ್ಕೆ ಮೀಸಲಿಟ್ಟ ಜಾಗದಲ್ಲಿ ವಾರ್ಷಿಕ ಸಭೆ, ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತೀರ್ಮಾನಿಸಲಾಯಿತು.

Related posts

ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

Suddi Udaya

ನೈನಾಡು ಅಂಗನವಾಡಿ ಕೇಂದ್ರಕ್ಕೆ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದು ಹಾನಿ

Suddi Udaya

ಬೆಳ್ತಂಗಡಿ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ

Suddi Udaya

ಬಂದಾರು: ಕುಂಟಾಲಪಲ್ಕೆಯಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ಹಾನಿ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಅಬಲೆಯರ ಪುನರ್ವಸತಿ ಕೇಂದ್ರ “ಸೇವಾಶ್ರಮ”ದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಆಚರಣೆ

Suddi Udaya

ಬದ್ಯಾರ್: ರಸ್ತೆಯಲ್ಲಿ ಬಾಯಿ ತೆರದ ಗುಂಡಿ: ಅಪಾಯದ ಸೂಚನೆ

Suddi Udaya
error: Content is protected !!