September 6, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲೋಕೇಶ್ವರಿ ವಿನಯಚಂದ್ರರವರಿಗೆ ಸ್ವಗ್ರಾಮದಲ್ಲಿ ಗೌರವಾರ್ಪಣೆ

ಕಡಿರುದ್ಯಾವರ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಸಂಸ್ಕೃತಿಯವರು ೨೦೨೫ನೇ ವರ್ಷದ ಗೌರವ ಪ್ರಶಸ್ತಿ ನೀಡಿ ಗೌರವಿಸಿದ ಕಡಿರುದ್ಯಾವರ ಗ್ರಾಮದ ವಳಂಬ್ರ ಲೋಕೇಶ್ಚರಿ ವಿನಯಚಂದ್ರ ರವರಿಗೆ ಸ್ಥಳೀಯ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲ ಹಾಗೂ ಶ್ರೀ ವಿದ್ಯಾ ಸರಸ್ವತಿ ಸ್ವಸಹಾಯದ ವತಿಯಿಂದ ಮಹಿಳಾ ಮಂಡಲದಲ್ಲಿ ಸನ್ಮಾನಿಸಲಾಯಿತು. ಎರಡೂ ಸಂಸ್ಥೆಯ ಸದಸ್ಯರು ತಮ್ಮ ಗ್ರಾಮದವರಾದ ಲೋಕೇಶ್ವರಿಯವರ ವಿಶಿಷ್ಟ ಸಾಧನೆಯಿಂದ ಪಡೆದ ಈ ಪ್ರಶಸ್ತಿಗೆ ಅಭಿನಂದನೆ ಸಲ್ಲಿಸಿ, ತಮ್ಮಲ್ಲಿ ಓರ್ವರಾಗಿ ಎಲ್ಲ ಮಹಿಳಿಯರಿಗೆ ವಿವಿಧ ರೀತಿಯಲ್ಲಿ ಜಾತಿ, ಮತ, ಪಕ್ಷಭೇದ ಮರೆತು ಸಲ್ಲಿಸಿದ ನಿಸ್ವಾರ್ಥ ಸೇವೆಗೆ ದೊರೆತ ಸನ್ಮಾನ ತಮಗೆ ದೊರೆತದ್ದು ಸಂತೋಷವಾಗಿದೆ ಎಂದು ತಿಳಿಸಿ ಶಾಲು ಸ್ಮರಣಿಕೆ ಫಲಪುಷ್ಪ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಭಾರತಿ ಉಪಾಧ್ಯಕ್ಷೆ ರಮಾ ಎಸ್. ಪರಾಂಜಪೆ, ಕೋಶಾಧಿಕಾರಿ ಸಂಧ್ಯಾಕಿರಣ್, ಸದಸ್ಯರಾದ ಭವ್ಯಶ್ರೀ ಕೀರ್ತಿರಾಜ್, ಸೌಮ್ಯ, ರೋಸಮ್ಮ, ಲಿಸ್ಸಿ, ಶಿಭಾ, ವರದಾ ಭಾಯಿ, ವಸಂತಿ, ಡೀಕಮ್ಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಶುಭಕೋರಿದರು. ಗ್ರಾಮಸ್ಥರ ಸಹಕಾರ ಹಾಗೂ ಪ್ರೋತ್ಸಾಹದಿಂದ ತನಗೆ ದೊರೆತ ಈ ಪ್ರಶಸ್ತಿಗೆ ತಾವೆಲ್ಲರೂ ಭಾಜನರು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

Related posts

ಅಗ್ನಿವೀರ್ ಜಿಡಿ ಹುದ್ದೆಗೆ ಆಯ್ಕೆಯಾದ ಗುರುಕಿರಣ್ ರವರಿಗೆ ಶ್ರೀ ರಾಮ್ ಫ್ರೆಂಡ್ಸ್ ಬಾಜಾರು ವತಿಯಿಂದ ಸನ್ಮಾನ

Suddi Udaya

ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗಿ

Suddi Udaya

ಬಂದಾರು ಚಂದ್ರಹಾಸ ಕುಂಬಾರರವರಿಗೆ ಸಾಹಿತ್ಯ ಸಾಮ್ರಾಟ್ ಪ್ರಶಸ್ತಿ

Suddi Udaya

ಉಜಿರೆ ಎಸ್.ಡಿ.ಎಂ ಮಹಿಳಾ ಐ.ಟಿ.ಐ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಹಾಗೂ ಭಿತ್ತಿ ಪತ್ರಿಕೆ ಅನಾವರಣ

Suddi Udaya

ಮಾ.1: ಉಜಿರೆಯಲ್ಲಿ ಅನು ಇಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಶುಭಾರಂಭ

Suddi Udaya

ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಗೌಡರ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಭೇಟಿ, ಆರ್ಥಿಕ ನೆರವು

Suddi Udaya
error: Content is protected !!