September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಕಂಬಳ ನಿರೂಪಕರಿಂದ ಛಾಯಾಗ್ರಾಹಕ ವೃತ್ತಿಯ ಬಗ್ಗೆ ಆಕ್ಷೇಪಾರ್ಹ ಮಾತು: ಛಾಯಾಗ್ರಾಹಕರ ಆಕ್ರೋಶ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿಯವರಿಗೆ ದೂರು

ಬೆಳ್ತಂಗಡಿ: ಇತ್ತೀಚೆಗೆ ವೇಣೂರು ಕಂಬಳ ಕಾರ್ಯಕ್ರಮದಲ್ಲಿ ನಿರೂಪಕರಾಗಿರುವ ರಾಜೀವ್ ಶೆಟ್ಟಿ ಎಡ್ತೂರು ಎಂಬವರು ಛಾಯಾಗ್ರಾಹಕರ ವೃತ್ತಿಯ ಬಗ್ಗೆ ತೀರಾ ಅಪಮಾನ ಮತ್ತು ಅಗೌರವಗಳಿಂದ ಕೂಡಿದ ಮಾತುಗಳನ್ನಾಡಿದ್ದು, ಈ ಬಗ್ಗೆ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಶಿಯೇಶನ್ ಮಂಗಳೂರು ಮತ್ತು ಉಡುಪಿ ಜಿಲ್ಲಾ ಛಾಯಾಗ್ರಾಹಕರು ತೀವ್ರ ಆಕೇಪ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಶಿಯೇಶನ್ ಮಂಗಳೂರು ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷರಾದ ನವೀನ್ ರೈ ಪುತ್ತೂರುವರು ಮಂಗಳವಾರ ಕಾಪುವಿನಲ್ಲಿ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿಯವರಿಗೆ ರಾಜೀವ್ ಶೆಟ್ಟಿ ಎಡ್ತೂರು ರವರ ನಡೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ, ಇತ್ತೀಚೆಗೆ ವೇಣೂರು ಕಂಬಳ ಕಾರ್ಯಕ್ರಮದಲ್ಲಿ ನಿರೂಪಕರಾಗಿರುವ ರಾಜೀವ್ ಶೆಟ್ಟಿ, ಎಡ್ತೂರು ಎಂಬವರು ಛಾಯಾಗ್ರಾಹಕರ ವೃತ್ತಿಯ ಬಗ್ಗೆ ತೀರಾ ಅಪಮಾನ ಮತ್ತು ಅಗೌರವಗಳಿಂದ ಕೂಡಿದ ಮಾತುಗಳನ್ನಾಡಿದ್ದು, ಎಲ್ಲರ ವಾಟ್ಸಾಪ್ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ ಛಾಯಾಗ್ರಾಹಕರೆಲ್ಲರೂ ತೀವ್ರ ಅಸಮಾಧಾನಗೊಂಡಿದ್ದು, ಈಗಾಗಲೇ ಮೊಬೈಲ್ ಮತ್ತು ಆಧುನಿಕ ತಂತ್ರಜ್ಞಾನ ದುರುಪಯೋಗದಿಂದ ವೃತ್ತಿ ನಿರತ ಛಾಯಾಗ್ರಾಹಕರ ವೃತ್ತಿಗೆ ತೊಂದರೆಯಾಗಿರುವ ಸಂದರ್ಭದಲ್ಲಿ, ರಾಜೀವ ಶೆಟ್ಟಿಯವರು ಇಂತಹ ಅಸಂಬದ್ಧ ಮಾತುಗಳಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡಿದ್ದು, ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಇಟ್ಟುಕೊಂಡಿರುವ ಛಾಯಾಗ್ರಾಹಕರ ವೃತ್ತಿಯನ್ನು ಹೀನಾಯವಾಗಿ ಸಾರ್ವಜನಿಕವಾಗಿ ಹೀಯಾಳಿಸಿರುವ ಮತ್ತು ಬಾಯಿ ಚಪಲಕ್ಕಾಗಿ ಬೇರೆ ವೃತ್ತಿಯನ್ನು ಸಾರ್ವಜನಿಕ ವೇದಿಕೆಗಳಲ್ಲಿ ತೀರಾ ಕೆಳಮಟ್ಟದಲ್ಲಿ ಮಾತನಾಡಿ ಗೌರವಯತವಾದ ಕಂಬಳದ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರಾಜೀವ ಶೆಟ್ಟಿಯವರನ್ನು ಸಮಿತಿಯಿಂದ ತೆಗೆದು ಹಾಕಬೇಕು ಮತ್ತು ನಾಡಿನ ಸಮಸ್ತ ಛಾಯಾಗ್ರಾಹಕರಲ್ಲಿ ತಕ್ಷಣ ಬಹಿರಂಗವಾಗಿ ಕ್ಷಮೆ ಕೇಳಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸುತ್ತಿದ್ದೇವೆ. ಈ ಬೇಡಿಕೆಗೆ ತಕ್ಷಣ ಸ್ಪಂದನೆ ಸಿಗದಿದ್ದಲ್ಲಿ ಉಭಯ ಜಿಲ್ಲೆಯ ಛಾಯಾಗ್ರಾಹಕರಿಂದ ರಾಜೀವ ಶೆಟ್ಟಿಯವರು ನಿರೂಪಣೆ ಮಾಡುವ ಮುಂದಿನ ಕಂಬಳಗಳಲ್ಲಿ ತೀವ್ರ ತರಹದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಲಾಗಿದೆ.

ಮನವಿ ಸ್ವೀಕರಿಸಿದ ಡಾ. ದೇವಿಪ್ರಸಾದ್ ಶೆಟ್ಟಿಯವರು ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಶಿಯೇಶನ್ ನಿಯೋಗದೊಂದಿಗೆ ಮಾತನಾಡಿ, ಈಗಾಗಲೇ ನಾನು ರಾಜೀವ ಶೆಟ್ಟಿಯವರಲ್ಲಿ ಮಾತನಾಡಿದ್ದೇನೆ. ಅವರು ಛಾಯಾಗ್ರಾಹಕರ ಮೇಲಿನ ವೈಯಕ್ತಿಕ ದ್ವೇಷದಿಂದ ಹೇಳಿಲ್ಲ. ನನ್ನಿಂದ ನೋವಾಗಿದ್ದರೆ ಮುಂದಿನ ಕಂಬಳದಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ. ಛಾಯಾಚಿತ್ರ ಗ್ರಾಹಕರು ಕಂಬಳ ಇಷ್ಟು ಎತ್ತರಕ್ಕೆ ಏರಲು ಕಾರಣಕರ್ತರು. ಈ ಬಗ್ಗೆ ನಾನು ರಾಜೀವ ಶೆಟ್ಟಿಯವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಶಿಯೇಶನ್ ಮಂಗಳೂರು ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ ದೇವರಾಜ ಶೆಟ್ಟಿ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಅಜಯ ಕುಮಾರ್, ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಬಂಟ್ವಾಳ, ಕಾರ್ಯದರ್ಶಿ ಹರೀಶ್ ಪಿ ಕೋಟ್ಯಾನ್, ಅಮೃತ ಬೀಜಾಡಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ರವಿ ಕೋಟ್ಯಾನ್, ಚಿದಾನಂದ ಉಳ್ಳಾಲ್, ಕಾಪು ವಲಯಾಧ್ಯಕ್ಷ ಸಂತೋಷ್ ಕಾಪು, ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಸುರೇಶ್ ಎರ್ಮಾಳು, ಪೂರ್ವಾಧ್ಯಕ್ಷರುಗಳಾದ ಸುಬ್ರಹ್ಮಣ್ಯ ಐತಾಳ್, ಕೃಷ್ಣ ರಾವ್, ವಿನೋದ್ ಕಾಂಚನ್, ಪ್ರಮೋದ್ ಸುವರ್ಣ, ಉಡುಪಿ ವಲಯಾಧ್ಯಕ್ಷ ದಿವಾಕರ ಹಿರಿಯಡ್ಕ, ಮಾಜಿ ಅಧ್ಯಕ್ಷ ಸುಧೀರ್ ಶೆಟ್ಟಿ, ಪ್ರವೀಣ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.

Related posts

ಮಡಂತ್ಯಾರು : ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ವತಿಯಿಂದ ಆಟಿಡೊಂಜಿ ದಿನ ಕೆಸರ್ದ ಗೊಬ್ಬು

Suddi Udaya

ಕೊಕ್ಕಡ ಶ್ರೀ ರಾಮ ಸೇವಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಬೆಳ್ತಂಗಡಿ : ಪ.ಪಂ. ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’

Suddi Udaya

ರಾಜ್ಯ ಮಟ್ಟದ ಕರಾಟೆ: ಉಜಿರೆ ಅನುಗ್ರಹ ಆಂ.ಮಾ. ಶಾಲೆಯ ಮೊಹಮ್ಮದ್ ರಈಸ್ ರಿಗೆ ಚಿನ್ನದ ಪದಕ

Suddi Udaya

ಕರಿಮಣೇಲು ನಿವಾಸಿ ಶ್ರೀಮತಿ ಶಾಂತ ನಿಧನ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ಘಟಕ ಉದ್ಘಾಟನೆ

Suddi Udaya
error: Content is protected !!