September 6, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಬೆನಕ ಹೆಲ್ತ್ ಸೆಂಟರ್ ವತಿಯಿಂದ ನಿವೃತ್ತ ಯೋಧ ಡಾ. ಗೋಪಾಲಕೃಷ್ಣ ಕಾಂಚೋಡುರಿಗೆ ಸನ್ಮಾನ

ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಉಜಿರೆಯ ನಿವೃತ್ತ ಯೋಧರಾದ ಡಾ.ಗೋಪಾಲಕೃಷ್ಣ ಕಾಂಚೋಡು ಅವರಿಗೆ ನಿವೃತ್ತ ಸಾಧಕ ಯೋಧ ಪ್ರಶಸ್ತಿಯನ್ನು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿಯವರು ಪ್ರದಾನ ಮಾಡಿದರು.

ಈ  ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಮೊದಲಿಗರು ಡಾ. ಗೋಪಾಲಕೃಷ್ಣ ಕಾಂಚೋಡು. ಆ ಪ್ರಯುಕ್ತ ಅವರನ್ನು ಉಜಿರೆಯ ಬೆನಕ ಹೆಲ್ತ್ ಸೆಂಟರ್ ವತಿಯಿಂದ ಮಾ.23ರಂದು ಆಸ್ಪತ್ರೆಯ ಆವರಣದಲ್ಲಿ ವೈದ್ಯಕೀಯ ನಿರ್ದೇಶಕ ಡಾ ಗೋಪಾಲಕೃಷ್ಣ ದಂಪತಿಗಳು  ಶಾಲು ಹೊದಿಸಿ , ಫಲಪುಷ್ಪ ಮತ್ತು ನೆನಪಿನ ಕಾಣಿಕೆಯಿತ್ತು ಸನ್ಮಾನಿಸಿದರು.

ಡಾ. ಗೋಪಾಲಕೃಷ್ಣ ಕೆ ಮಾತನಾಡಿ ಸೈನಿಕರು ನಿವೃತ್ತರಾದರೂ  ದೇಶದ ಆಸ್ತಿಯಾಗಿದ್ದಾರೆ . ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ನಿವೃತ್ತ ಸಾಧಕ ಯೋಧ ಪ್ರಶಸ್ತಿಗೆ ಭಾಜನರಾದ ಗೋಪಾಲಕೃಷ್ಣ  ಕಾಂಚೋಡು ಅವರನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ ಮತ್ತು ಅವರ ಸೇವೆ ನಮ್ಮೆಲ್ಲರಿಗೂ ಪ್ರೇರೇಪಣೆಯಾಗಲಿ ಎಂದು ಆಶಿಸಿದರು .

ಸನ್ಮಾನಿತರಾದ  ಡಾ. ಗೋಪಾಲಕೃಷ್ಣ ಕಾಂಚೋಡು ಮಾತನಾಡಿ ಜೀವನದಲ್ಲಿ ಯಾವುದೇ ಸಾಧನೆ ಮಾಡುವಲ್ಲಿ ನಮ್ಮ ಆಯ್ಕೆ ಸವಾಲು ಎದುರಿಸುವ ಶಕ್ತಿ ಮತ್ತು ಸಂದರ್ಭದೊಂದಿಗೆ ಬದಲಾವಣೆ ಬಹು ಮುಖ್ಯವಾಗಿರುತ್ತದೆ . ಅಂಥವರು ಯಾವುದೇ ಸಾಧನೆ ಮಾಡಲು ಸಾಧ್ಯ . ಬೆನಕ ಆಸ್ಪತ್ರೆಯ ಡಾ.ಗೋಪಾಲಕೃಷ್ಣ ಅವರಲ್ಲಿ ಈ ಮೂರು ಗುಣಗಳು ಮೈಗೊಂಡಿವೆ. ಹಾಗಾಗಿ ಉಜಿರೆಯಂಥ  ಗ್ರಾಮೀಣ ಪ್ರದೇಶದಲ್ಲಿ ಇಂಥ  ದೊಡ್ಡ ಆಸ್ಪತ್ರೆ ಕಟ್ಟಲು ಸಾಧ್ಯವಾಯಿತೆಂದು ಹೇಳುತ್ತ ಅವರ ಸಿಬ್ಬಂದಿಗಳಲ್ಲೂ ನಾನು ಇವುಗಳನ್ನು ಗುರುತಿಸಿದ್ದೇವೆ ಎಂದು ಪ್ರಶಂಸಿಸಿ , ಬೆನಕ ಆಸ್ಪತ್ರೆ  ಇನ್ನಷ್ಟು ಯಶಸ್ಸು ಸಾಧಿಸಲೆಂದು ಶುಭ   ಹಾರೈಸಿದರು .

ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಆಸ್ಪತ್ರೆಯ P R O  ಎಸ್ ಜಿ ಭಟ್ ಸ್ವಾಗತಿಸಿ, ನಿರೂಪಿಸಿದರು. ಡಾ. ಭಾರತಿ ಜಿ.ಕೆ ವಂದಿಸಿದರು.

Related posts

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೆಯರ್ ವಿತರಣೆ

Suddi Udaya

ಧರ್ಮಸ್ಥಳ ಪ್ರಕರಣದಲ್ಲಿ ಸರಕಾರ ತುರ್ತು ನಿರ್ಧಾರ ಮಾಡಿದೆ : ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು: ಶಾಸಕ ಕಿಶೋರ್ ಕುಮಾರ್ ಪುತ್ತೂರು

Suddi Udaya

ಕಳಿಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಕೊಕ್ಕಡ : ಮಾಯಿಲಕೋಟೆ ದೇವಸ್ಥಾನದಲ್ಲಿ ಕಳ್ಳತನ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅಕ್ಟೋಬರ್ ನಲ್ಲಿ ಬೆಳ್ತಂಗಡಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

Suddi Udaya

ಯಕ್ಷಗುರು ಮೋಹನ ಬೈಪಾಡಿತ್ತಾಯ ಉಜಿರೆ ಅವರಿಗೆ ತೆಂಕಬೈಲು ಪ್ರಶಸ್ತಿ

Suddi Udaya
error: Content is protected !!