September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಮಾರ್ಚ್ ತಿಂಗಳ ಸಾಮಾನ್ಯ ಸಭೆಯು ಹಾಗೂ ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ ಮಾ.25 ರಂದು ಕೊಕ್ಕಡದ ಎಜುನೆಸ್ಟ್ ಅಕಾಡೆಮಿ ಕೇಂದ್ರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ಅವರು ವಹಿಸಿದ್ದರು. ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಅವರಿಂದ ಘಟಕ ಅಭಿವೃದ್ಧಿ ಮತ್ತು ಆಡಳಿತ ನಿರ್ವಹಣೆ ತರಬೇತಿ ನಡೆಯಿತು.

ವಲಯ ಉಪಾಧ್ಯಕ್ಷರು ಮಾತನಾಡಿ ಸಮಾಜದ ಒಳಿತಿಗಾಗಿ ಸುಸ್ಥಿರ ಪರಿಹಾರ ಯೋಜನೆ ಹಾಗೂ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ಕಲ್ಪಿಸುವ ಕಾಬೀಲ್ ಯೋಜನೆ ಜಾರಿಗೊಳಿಸಲು ಸಲಹೆ ನೀಡಿದರು.

ಕೊಕ್ಕಡ ಕಪಿಲಾ ಘಟಕವು 10% ಬೆಳವಣಿಗೆಯನ್ನು ದಾಖಲಿಸಿದ್ದು, ಇದಕ್ಕಾಗಿ ಘಟಕದ ಅಧ್ಯಕ್ಷರನ್ನು ಅಭಿನಂದಿಸಿದರು. ಮುಂಬರುವ ವಲಯ ಮಟ್ಟದಲ್ಲಿ ಪುತ್ತೂರಿನಲ್ಲಿ ನಡೆಯುವ ಸಿ.ಎ.ಪಿ.ಪಿ. ಹಾಗೂ ಕಾಪುವಿನಲ್ಲಿ ನಡೆಯುವ ಕಡಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಣಯಿಸಲಾಯಿತು.

ಇದೇ ಸಂದರ್ಭದಲ್ಲಿ ಫಲ್ಗುಣಿ ಪ್ರಾಂತ್ಯದ ಸದಸ್ಯತ್ವದ ಬೆಳವಣಿಗೆಯಲ್ಲಿ ಧನಾತ್ಮಕ ಸಾಧನೆಗಾಗಿ ವಲಯ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಮಾರ್ಚ್ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಜಸ್ವಂತ್ ಪಿರೇರಾ, ವಿಯೋನ್ ಸುವಾರಿಸ್, ಪ್ರಜ್ವಲ್ ಲೋಬೊ, ಜೋಸೆಫ್ ಪಿರೇರಾ ಮತ್ತು ಕೆ. ಶ್ರೀಧರ ರಾವ್ ಅವರಿಗೆ ಶುಭಾಶಯವನ್ನು ಸಲ್ಲಿಸಲಾಯಿತು.

ರಬೇತಿ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷೆ ಡಾ. ಶೋಭಾ ಪಿ‌., ಲೇಡಿ ಜೆಸಿ ಅಧ್ಯಕ್ಷೆ ರೇಶ್ಮಿ ಡಿಸೋಜ, ಜೆಸಿಂತಾ ಡಿಸೋಜ, ಧನುಷ್ ಕುಮಾರ್ ಜೈನ್, ವಿಕ್ಟರ್ ಸುವಾರಿಸ್, ಸಂತೋಷ್ ಜೈನ್, ಚಂದನಾ ಜೈನ್ ಹಾಗೂ ದಕ್ಷಾ ಜೈನ್ ಉಪಸ್ಥಿತರಿದ್ದರು.

ದೀಪಾ ವಿ. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ವಾಚಿಸಿದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ಅವರು ವಂದಿಸಿದರು.

Related posts

ಜ.24-30: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya

ಕುತ್ಲೂರು ಉನ್ನತೀಕರಿಸಿದ ಸರಕಾರಿ ಶಾಲೆಯ ತೋಟ ಲೋಕಾರ್ಪಣೆ: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ-ಹರೇಕಳ ಹಾಜಬ್ಬ

Suddi Udaya

ಯಕ್ಷಭಾರತಿ ಸಂಸ್ಥೆಯ ವತಿಯಿಂದ ಕೋಳ್ಯೂರು ರಾಮಚಂದ್ರ ರಾವ್ ರವರಿಗೆ ಸನ್ಮಾನ

Suddi Udaya

ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಪ್ರತಿಷ್ಠಿತ ಜೈ ಜವಾನ್ ಜೈ ಕಿಸಾನ್ “ರೈತ ರತ್ನ” ಗೌರವ ಪ್ರಶಸ್ತಿ ಪ್ರದಾನ

Suddi Udaya

ಫೆ.12ರಿಂದ ಮರೋಡಿ ಕ್ಷೇತ್ರದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವ

Suddi Udaya

ಕೊಯ್ಯೂರು ಶ್ರೀಕೃಷ್ಣ ಭಜನಾ ಮಂಡಳಿ ಭಜನೋತ್ಸವ

Suddi Udaya
error: Content is protected !!