September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶುಭಾರಂಭ

ಉಜಿರೆಯಲ್ಲಿ ಜಿ-ಮಾಲ್ ಉದ್ಘಾಟನೆ: ಬೆಳೆಯುತ್ತಿರುವ ಉಜಿರೆಗೆ ಜಿ-ಮಾಲ್ ಶೋಭೆ ತಂದಿದೆ: ಶರತ್‌ಕೃಷ್ಣ ಪಡ್ವೆಟ್ನಾಯ

ಉಜಿರೆ: ಗೋವರ್ಧನಗಿರಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ನಂದಗೋಕುಲ ಸಾತ್ವಿಕ ಸಾಮ್ರಾಜ್ಯ, ಗೋಕುಲ ಮಾರ್ಟ್, ಎಂಪವರ್ ಇಂಟೀರ್ಯಸ್ ಇದರ ನೂತನ ಶಾಖೆ ಜಿ ಮಾಲ್ ಏ.೬ರಂದು ಉಜಿರೆಯ ಫನತೀರ್ ಲಾಡ್ಜ್ ನಲ್ಲಿ ಉದ್ಘಾಟನೆಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಅವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿ ದೇಶದಲ್ಲಿ ಯುವ ಶಕ್ತಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉಜಿರೆಗೆ ಜಿ-ಮಾಲ್ ಶೋಭೆ ತಂದಿದೆ. ಸಂಸ್ಥೆಯು ಒಳ್ಳೆಯ ಸೇವೆಯನ್ನು ನೀಡುವ ಮೂಲಕ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಿಶೇಷ ಆಕರ್ಷಣೆ ತುಳು ಚಲನಚಿತ್ರ ನಟ ತುಳುನಾಡ ನವರಸ ನಾಯಕ ಭೋಜರಾಜ ವಾಮಂಜೂರು, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಸಂಸ್ಥೆಯ ಸಂಸ್ಥಾಪಕರು, ಗೋವರ್ಧನಗಿರಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರು ನಿಶಾನ್ ಕೃಷ್ಣ ಭಂಡಾರಿ, ಡೆಸ್ಟಿನಿ ಇನ್ಫೋ ಸಿ.ಇ.ಓ ಚಂದ್ರಶೇಖರ ಪೂಜಾರಿ, ಗೋಕುಲ ಮಾರ್ಟ್ ಸಿ.ಇ.ಓ. ಲೋಹಿತ್ ಕುಮಾರ್ ಶೆಟ್ಟಿ, ಎಂಪವರ್ ಇಂಟೀರಿಯರ್ಸ್ ಸಿ.ಇ.ಓ., ಕಿಶನ್ ಆಚಾರ್ಯ, ಅಂತರಾಷ್ಟ್ರೀಯ ತರಬೇತುದಾರ ಅಬ್ದುಲ್ ರಜಾಕ್, ಎಫ್.ಎಂ. ಗ್ರೂಪ್ ಮಾಲಕ ಅಬ್ದುಲ್ ರಶೀದ್, ನಾಮ್‌ದೇವ್ ರಾವ್, ಬ್ಯಾಂಕ್‌ನ ನಿರ್ದೇಶಕ ಚಂದ್ರಶೇಖರ್, ಶಶಿಕುಮಾರ್, ಕೋಟೆ ಮಲ್ಲೇಶ್, ನಿತ್ಯಾನಂದ, ಕಿಶನ್ ಪಿಜಿ, ಗೋಕುಲ ಮಾರ್ಚ್ ಲೋಹಿತ್ ಶೆಟ್ಟಿ, ಸುಬೋಧ್, ಚಂದ್ರಪ್ಪ ಬಿ ಚಿತ್ರದುರ್ಗ, ಸುರೇಶ್ ಕಾಂಚನ್, ಭರತ್ ರಾಜ್ ಉಡುಪಿ, ಶ್ರೀನಾಥ್ ಒಳಲ್‌ಕೆರೆ, ದುರ್ಗೇಶ್ ಭಟ್, ರತ್ನಾಕರ ಶೆಟ್ಟಿ, ಜಯಕುಮಾರ್, ಶಿವಪ್ರಸಾದ್, ಸಂಗೀತ ರಾವ್ ಬೆಳಾಲು, ಆದರ್ಶ್ ಸುಳ್ಯ, ಸತೀಶ್ ವಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಜಿರೆ ಶಾಖೆಯ ಸದಸ್ಯರು, ಪಾಲುದಾರರು, ಸ್ಥಳೀಯ ಮಳಿಗೆ ಮಾಲರು, ಗ್ರಾಹಕರು ಉಪಸ್ಥಿತರಿದ್ದರು.

ಉಜಿರೆ ಬಳಗದಿಂದ ಸಂಸ್ಥೆಯ ಸಂಸ್ಥಾಪಕರು, ಗೋವರ್ಧನಗಿರಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರು ನಿಶಾನ್ ಕೃಷ್ಣ ಭಂಡಾರಿ ಅವರಿಗೆ ಸನ್ಮಾನವನ್ನು ನಡೆಸಲಾಯಿತು. ನಂದಗೋಕುಲ ಸಾತ್ವಿಕ ಸಾಮ್ರಾಜ್ಯದ ಸಿಇಒ ದೀಪಕ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಉಜಿರೆ ಶ್ರೀ ಸರಸ್ವತಿ ಭಜನಾ ಮಂದಿರಕ್ಕೆ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಭೇಟಿ

Suddi Udaya

ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಅಭಿನಂದನ್ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಕಾರಿಣಿ ಸಭೆ

Suddi Udaya

ಹೊಸಪಟ್ಣ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ ರವರಿಗೆ ಸನ್ಮಾನ

Suddi Udaya

ಫೆ.4-5: ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

Suddi Udaya

ಗೇರುಕಟ್ಟೆ ಜನತಾ ಕಾಲೋನಿಯಲ್ಲಿ ನೀರಿನ ಸಮಸ್ಯೆಗೆ ತಕ್ಷಣ ಸ್ವಂದಿಸಿ ಕೊಳವೆ ಬಾವಿ ಕೊರೆಸಿದ ಇ.ಓ ಹಾಗೂ ಕಳಿಯ ಗ್ರಾ.ಪಂ.

Suddi Udaya

ಹೊಸಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಶ್ರೀ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!