22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಿಯುಸಿ ಫಲಿತಾಂಶ: ಪುತ್ತೂರಿನ ವಿವೇಕಾನಂದ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಫೆಬ್ರವರಿ-ಮಾರ್ಚ್ ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಅಭಿರಾಮ್ ವಿ. ಭಟ್ (ಬಂಟ್ವಾಳ ತಾಲೂಕಿನ ವಸಂತ ಕುಮಾರ್ ಎನ್ ಹಾಗೂ ಸುಲೋಚನಾ ಕುಮಾರಿ ಬಿ. ಕೆ ದಂಪತಿಗಳ ಪುತ್ರ ) 598 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ರಾಂಕ್ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಮನ್ಮಿತ (ಕಡೇಶಿವಾಲಯದ ವಸಂತ ಯು ಹಾಗೂ ಚಿತ್ರಾವತಿ ದಂಪತಿಗಳ ಪುತ್ರಿ) ಹಾಗೂ ಬಿಂದು ಎಚ್. ಆರ್ (ಕೊಡಗು ಜಿಲ್ಲೆಯ ಡಿ .ಸಿ ರವಿಕುಮಾರ್ ಹಾಗೂ ಹೆಚ್. ಆರ್ ಪವಿತ್ರ ದಂಪತಿಗಳ ಪುತ್ರಿ) 596 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ರೂಪಶ್ರೀ (ಪುತ್ತೂರು, ನೆಹರು ನಗರದ ಆನಂದ ಗೌಡ ಕೆ ಹಾಗೂ ಪಿ. ದಾಜಮ್ಮ ದಂಪತಿಗಳ ಪುತ್ರಿ) ಇವರು 584 ಅಂಕಗಳೊAದಿಗೆ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ತೀರ್ಥ ಶೆಟ್ಟಿ (ಬಂಟ್ವಾಳ ತಾಲೂಕಿನ ರಾಜೇಶ್ ಶೆಟ್ಟಿ ಹಾಗೂ ಸುಮಲತಾ ದಂಪತಿಗಳ ಪುತ್ರಿ) 595, ಶ್ರೀಜಾ (ಬಂಟ್ವಾಳ ತಾಲೂಕಿನ ಸದಾನಂದ ಹಾಗೂ ವನಿತಾ ದಂಪತಿಗಳ ಪುತ್ರಿ) 594 , ಪ್ರಾಪ್ತಿ ಆಳ್ವ (ಬಂಟ್ವಾಳ ತಾಲೂಕಿನ ಸರಪಾಡಿಯ ಪ್ರವೀಣ ಆಳ್ವ ಹಾಗೂ ಸವಿತಾ ಆಳ್ವಾ ದಂಪತಿಗಳ ಪುತ್ರಿ) ೫೯೩, ಮಂಗಳಾಮೃತ ಕೆ. ಆರ್ ( ಸುಳ್ಯ ತಾಲೂಕಿನ ರವಿರಾಜ ಕೆ. ಹಾಗೂ ವಾಣಿಕುಮಾರಿ ಎ. ದಂಪತಿಗಳ ಪುತ್ರಿ) ೫೯೨ ಹಾಗೂ ಪ್ರಸ್ತುತಿ ಪಿ .(ಕಾಸರಗೋಡಿನ ಉದಯ ಶಂಕರ ಭಟ್ ಪಿ .ಕೆ ಹಾಗೂ ಶ್ರೀವಾಣಿ ಪಿ. ದಂಪತಿಗಳ ಪುತ್ರಿ) ಅದಿತಿ ಯು ( ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ.ಡಿ ದಂಪತಿಗಳ ಪುತ್ರಿ) 590 ಅಂಕಗಳನ್ನು ಪಡೆದುಕೊಂಡಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಪ್ರಮಥ ಎಂ. ಭಟ್ 594 (ಪುತ್ತೂರು ತಾಲೂಕಿನ ರವಿ ನಾರಾಯಣ ಎಂ ಹಾಗೂ ಶರಾವತಿ ರವಿ ನಾರಾಯಣ ದಂಪತಿಗಳ ಪುತ್ರಿ ), ಶ್ರೀ ವಿದ್ಯಾ ಜೆ 593 (ಬಂಟ್ವಾಳ ತಾಲೂಕಿನ ಪ್ರಕಾಶ್ ನಾರಾಯಣ ಜೆ ಹಾಗೂ ರಮ್ಯಾ ದಂಪತಿಗಳ ಪುತ್ರಿ) , ಸುಶ್ಮಿತಾ ಬಿ 592 (ಬಾಲಕೃಷ್ಣ ನಾಯಕ್ ಬಿ ಹಾಗೂ ರೇವತಿ ಎಂ ದಂಪತಿಗಳ ಪುತ್ರಿ) ಸಹನ ಮಳಿ 591 (ಪುತ್ತೂರು ತಾಲೂಕಿನ ವೆಂಕಟ ಕೃಷ್ಣ ಎಂ. ಎನ್ ಹಾಗೂ ವೀಣಾ ಸರಸ್ವತಿ ದಂಪತಿಗಳ ಪುತ್ರಿ) ಅಂಕಗಳನ್ನು ಪಡೆದುಕೊಂಡಿರುತ್ತಾರೆ.

ಕಲಾ ವಿಭಾಗದಲ್ಲಿ ಪ್ರೀತಿ ಸುನಿಲ್ ಚಿಲ್ಲಾಲ್ 582 (ಹುಬ್ಬಳ್ಳಿಯ ಸುನಿಲ್ ಚಿಲ್ಲಾಲ್ ಹಾಗೂ ರೇಷ್ಮಾ ಸುನಿಲ್ ಚಿಲ್ಲಾಲ್ ದಂಪತಿಗಳ ಪುತ್ರಿ) ಬಿಂದು ಕೆ .ಜೆ 580 (ಸುಳ್ಯ ತಾಲೂಕಿನ ಕೆ. ಎನ್ ಜಗದೀಶ ಹಾಗೂ ಶೋಭಾ ಕೆ. ಎಚ್ ದಂಪತಿಗಳ ಪುತ್ರಿ), ಕಿರಣ್ ಆರ್ 577 (ಮೈಸೂರಿನ ರವಿಕುಮಾರ್ ಹಾಗೂ ಮಂಜುಳ ದಂಪತಿಗಳ ಪುತ್ರ) , ಶೋಭಿತಾ ಸಿ. ಎಚ್ 571 .(ಬಂಟ್ವಾಳ, ಕನ್ಯಾನ ಗ್ರಾಮದ ಗಣರಾಜ ಸಿ. ಎಚ್ ಹಾಗೂ ಸವಿತಾ ದಂಪತಿಗಳ ಪುತ್ರಿ) ಅಂಕಗಳನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಒಟ್ಟು 520 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 447 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ ೩೩೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇದರೊಂದಿಗೆ ಪುತ್ತೂರಿನಲ್ಲಿ ರಾಜ್ಯಮಟ್ಟದಲ್ಲಿ ಅತ್ಯಧಿಕ ರಾಂಕ್‌ಗಳನ್ನು ಗಳಿಸಿದ ಏಕೈಕ ವಿದ್ಯಾಸಂಸ್ಥೆ ಎನ್ನುವ ಹೆಗ್ಗಳಿಕೆಗೆ ವಿವೇಕಾನಂದ ಪದವಿಪೂರ್ವ ಕಾಲೇಜು ಪಾತ್ರವಾಗಿದೆ. ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Related posts

ನಾಳೆ(ಜ.2) ಅರಸಿನಮಕ್ಕಿಯಲ್ಲಿ ಶೀರೂರು ಶ್ರೀಗಳಿಗೆ ನಾಗರಿಕ ಸನ್ಮಾನ

Suddi Udaya

ಅಂಡಿಂಜೆ ಸ.ಉ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ದ.ಕ. ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ – ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ಮಚ್ಚಿನ: ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ರುಕ್ಮಯ ಗೌಡ ನಿಧನ

Suddi Udaya

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉರುವಾಲು: ಮನೆಗೆ ಸಿಡಿಲು ಬಡಿದು ಅಪಾರ ಹಾನಿ: ಅದೃಷ್ಟವಶಾತ್ ಅಪಾಯದಿಂದ ಪಾರಾದ ಮನೆಯವರು

Suddi Udaya
error: Content is protected !!