September 6, 2026
ಅಭಿನಂದನೆಗ್ರಾಮಾಂತರ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 53ನೇ ವಿಶೇಷ ಸೇವಾ ಯೋಜನೆ: ಉರಗ ಮಿತ್ರ ಸ್ನೇಕ್ ಅಶೋಕ್ ಗೆ ಗೌರವ

ಬೆಳ್ತಂಗಡಿ: ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಇದೆ. ಅದನ್ನು ಯಾವ ರೀತಿಯಾಗಿ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಆತನ ಜೀವನ ಶೈಲಿ ನಿಂತಿರುತ್ತದೆ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 53ನೇ ವಿಶೇಷ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಆಧುನಿಕ ಜಗತ್ತಿನಲ್ಲಿ ಯಾವುದೇ ಪ್ರತಿಫಲದ ಜೊತೆಗೆ ಸಂಭಾವನೆಯನ್ನು ಬಯಸದೆ ಸದಾ ಜನಸೇವೆಯ ಮೂಲಕ ಪ್ರತಿ ಮನೆಯಲ್ಲಿಯೂ ಮನೆಮಾತಾಗಿರುವ ಸ್ನೇಕ್ ಅಶೋಕ್ ಇವರ ಈ ಅದ್ಭುತ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ವತಿಯಿಂದ ಕೊಡಲ್ಪಟ್ಟ ರಕ್ಷಣಾ ಕವಚಗಳನ್ನು ಒಳಗೊಂಡ ಕಿಟ್ ನ್ನು ಅವರು ವಿತರಿಸಿದರು.

‘ಉರಗ ಮಿತ್ರ’ ಸನ್ಮಾನವನ್ನು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ನ್ಯಾಯವಾದಿ ಧನಂಜಯ್ ರಾವ್, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾಕಿರಣ್ ಕಾರಂತ್ ನೀಡಿ ಗೌರವಿಸಿದರು.

ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷ ರಾಜೇಶ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಅರುಣ್ ಕುಕ್ಕಾವು, ಕೋಶಾಧಿಕಾರಿ ಹರೀಶ್ ಕೋಟ್ಯಾನ್, ಸಚಿನ್ ವರ್ಧನ್ ದಿನೇಶ್ ಕೋಟ್ಯಾನ್, ವಿನಯ್ ಗುರಿಪಲ್ಲ ವಿನೋದ್ ಶೆಣೈ, ಸುರೇಶ್ ಕುಲಾಲ್, ಸುರೇಂದ್ರ ಕೋಟ್ಯಾನ್, ಅನಿಲ್ ಉಜಿರೆಉಪಸ್ಥಿತರಿದ್ದರು.

Related posts

ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಶುಭಾಶಯ

Suddi Udaya

ಉಜಿರೆ: ಪ್ರಾಧ್ಯಾಪಕ ಮಹಮ್ಮದ್ ಇಕ್ಬಾಲ್ ರವರಿಗೆ ಡಾಕ್ಟರೇಟ್

Suddi Udaya

ತೋಟತ್ತಾಡಿ: ಗೋಳಿತ್ತಡಿ ನಿವಾಸಿ ಬಾಬು ಗೌಡ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಮಂಜೊಟ್ಟಿ ಹೋಲಿಕ್ರಾಸ್ ಚರ್ಚ್ ನಲ್ಲಿ ಪವಿತ್ರ ಶಿಲುಬೆಯ ಅವಶೇಷದ ಭವ್ಯ ಮೆರವಣಿಗೆ, ಪ್ರತಿಷ್ಠಾಪನ ಸಂಭ್ರಮ

Suddi Udaya
error: Content is protected !!