23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ತಾಲೂಕು ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಭಂಡಾರಿ ಸಮಾಜದ ಬಂಧುಗಳೆಲ್ಲರು ಕೂಡ ನನ್ನ ಆತ್ಮೀಯ ಬಾಂಧವರೇ ಆಗಿದ್ದಾರೆ. ಬೆಳ್ತಂಗಡಿ ಭಂಡಾರಿ ಸಮಾಜ ಸಂಘದಿಂದ ಅಶಕ್ತರಿಗೆ ಭಂಡಾರಿ ಸಂಜೀವಿನಿ ಮೂಲಕ ಸಹಾಯಧನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾ ಪುರಸ್ಕಾರದಂತಹ ಉತ್ತಮ ಕೆಲಸ ಮಾಡಲಾಗುತ್ತಿದೆ. ಭಂಡಾರಿ ಸಮಾಜ ಬಾಂಧವರು ಹೆಚ್ಚು ಹೆಚ್ಚು ಶಿಕ್ಷಣ ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಎ.14ರಂದು ನಡೆದ ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ ಹಾಗೂ ಭಂಡಾರಿ ಯುವ ವೇದಿಕೆ ಇದರ 15ನೇ ವರ್ಷದ ವಾರ್ಷಿಕ ಮಹಾಸಭೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಬೆಳ್ತಂಗಡಿ ಭಂಡಾರಿ ಸಮಾಜ ಸಂಘಕ್ಕೆ ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಲು ನಾನು ಸದಾ ಸಿದ್ಧನಿದ್ದೇನೆ ಎಂದರು.

ಸಂಘದ ಅಧ್ಯಕ್ಷ ಎಸ್. ಉಮೇಶ್ ಭಂಡಾರಿ ಉಜಿರೆ ಇವರ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ಮಹಾಸಭೆಯ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಮಂಗಳೂರು ವಲಯ ಉತ್ಸವ ಸಮಿತಿ ಅಧ್ಯಕ್ಷ ಮುರಳೀಧರ ಎಲ್ ಭಂಡಾರಿ ಉದ್ಘಾಟಿಸಿ ಮಾತನಾಡಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವವು ಈ ಬಾರಿ ಮಂಗಳೂರು ವಲಯದ ಉಸ್ತುವಾರಿಯಲ್ಲಿ ಭಂಡಾರಿ ಸಮಾಜ ಬಾಂಧವರ ಸಹಕಾರದಲ್ಲಿ ಮೇ. ೮ ರಂದು ಬಹಳ ವಿಜೃಂಭನೆಯಿಂದ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ ಭಂಡಾರಿ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬನಬೇಕೆಂದು ವಿನಂತಿಸಿದರು.

ಮಹಾಮಂಡಲದ ಸಂಘಟನಾ ಕಾರ್ಯದರ್ಶಿ ವೀಣಾ ರಾಜೇಶ್ ಭಂಡಾರಿ ಕಾರ್ಕಳ ಇವರು ಭಂಡಾರಿ ಸಂಜೀವಿನಿ ಸಹಾಯಧನ ವಿತರಣೆಯನ್ನು ನೆರವೇರಿಸಿ ಮಾತನಾಡುತ್ತಾ, ಸಂಘಟಣೆ ಮತ್ತು ಸಂಘದ ಮಹತ್ವವನ್ನು ಎಲ್ಲರೂ ತಿಳಿದು ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಭಂಡಾರಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.

ಕಚ್ಚೂರು ಕ್ರೆಡಿಟ್ ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ ಕುಲಾಯಿ ಮತ್ತು ಕಾರ್ಕಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಕೃಷ್ಣ ಭಂಡಾರಿ ಇವರು ಹತ್ತನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ೮೫ ಶೇ. ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾ ಪುರಸ್ಕಾರ ನೀಡಿ ಮಾತನಾಡುತ್ತಾ. ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಕಾರ್ಯವನ್ನು ಶ್ಲಾಘಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕುಲ ಕಸುಬು ಮಾಡುತ್ತಾ, ವಿವಿಧ ದೈವಸ್ಥಾನಗಳಲ್ಲಿ ಮತ್ತು ಊರಿನ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಾ ಗ್ರಾಮದ ಜನರ ಪ್ರೀತಿಗೆ ಪಾತ್ರರಾಗಿರುವ ಹಿರಿಯರಾದ ಮೋಹನ್ ಭಂಡಾರಿ ವೇಣೂರು, ಸಂಜೀವ ಭಂಡಾರಿ ಗುರುವಾಯನಕೆರೆ, ಸಂಜೀವ ಭಂಡಾರಿ ಅಣಿಯೂರು ನೆರಿಯ ಹಾಗೂ ಕಚ್ಚೂರು ಕ್ರೆಡಿಟ್ ಕೋಪರೇಟಿವ್ ಬ್ಯಾಂಕ್ ಇದರ ನಾಮನಿರ್ದೇಶಿತ ನಿರ್ದೇಶಕರಾಗಿ ಆಯ್ಕೆಯಾದ ಬಾಲಕೃಷ್ಣ ಭಂಡಾರಿ ಕೋಡ್ಯೇಲು ಇವರನ್ನು ಸನ್ಮಾನಿಸಲಾಯಿತು.

ಬೆಳ್ತಂಗಡಿ ತಾಲೂಕು ಭಂಡಾರಿ ಸಂಘದ ನೂತನ ಕಾರ್ಯಕಾರಿಣಿ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಗುಲಾಬಿ ನೀಡಿ ಸ್ವಾಗತಿಸಲಾಯಿತು. ನೂತನ ಸಾಲಿನ ಗೌರವಾಧ್ಯಕ್ಷರಾದ ಎಸ್. ಉಮೇಶ್ ಭಂಡಾರಿ ಉಜಿರೆ, ಅಧ್ಯಕ್ಷರಾದ ಜಿ.ಎಸ್ ಪೂವಪ್ಪ ಭಂಡಾರಿ ಮದ್ದಡ್ಕ, ಕಾರ್ಯದರ್ಶಿ ಶೋಧನ್ ಭಂಡಾರಿ ಬೆಳ್ತಂಗಡಿ, ಉಪಾಧ್ಯಕ್ಷರಾದ ಸಂಜೀವ ಭಂಡಾರಿ ಉಜಿರೆ, ಜತೆಕಾರ್ಯದರ್ಶಿ ಸತೀಶ್ ನಾಳ, ಕೋಶಾಧಿಕಾರಿ ಅಶೋಕ್ ಭಂಡಾರಿ ಗುಂಡ್ಯಲ್ಕೆ ಇವರನ್ನು ಗುಲಾಬಿ ನೀಡಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಭಂಡಾರಿ ಯುವವೇದಿಕೆಯ ನೂತನ ಕಾರ್ಯಕಾರಿಣಿ ಸಮಿತಿಯ ಗೌರವಾಧ್ಯಕ್ಷರಾದ ವಿಶ್ವನಾಥ ಭಂಡಾರಿ ಉಜಿರೆ, ಅಧ್ಯಕ್ಷರಾದ ಪ್ರಸಾಂತ್ ಭಂಡಾರಿ ಅಂಡಿಂಜೆ, ಕಾರ್ಯದರ್ಶಿ ಅಭಿಜಿತ್ ಭಂಡಾರಿ ಕನ್ಯಾಡಿ, ಉಪಾಧ್ಯಕ್ಷರಾದ ಶೋಧನ್ ಭಂಡಾರಿ ಬೆಳ್ತಂಗಡಿ, ಜತೆಕಾರ್ಯದರ್ಶಿ ಸೌದೇಶ್ ಭಂಡಾರಿ ನೆರಿಯಾ, ಕೋಶಾಧಿಕಾರಿ ಗಣೇಶ್ ಭಂಡಾರಿ ರೇಷ್ಮೆರೋಡ್, ಸಂಘಟನಾ ಕಾರ್ಯದರ್ಶಿಗಳಾದ ರವಿ ಭಂಡಾರಿ ಅಗರಿ ಹಾಗೂ ಸುರೇಶ್ ಭಂಡಾರಿ ಅಗರಿ ಇವರನ್ನು ಕೂಡ ಗುಲಾಬಿ ನೀಡಿ ಸ್ವಾಗತಿಸಲಾಯಿತು.

ಬೆಳ್ತಂಗಡಿ ಸಮಾಜ ಸಂಘದ ಪದಾಧಿಕಾರಿಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಅಧ್ಯಕ್ಷ ಎಸ್. ಉಮೇಶ್ ಭಂಡಾರಿ ಉಜಿರೆ, ಕಾರ್ಯದರ್ಶಿ ಅಶೋಕ್ ಭಂಡಾರಿ ಗುಂಡ್ಯಲ್ಕೆ, ಉಪಾಧ್ಯಕ್ಷರಾದ ಬಾಲಕೃಷ್ಣ ಭಂಡಾರಿ ಕೋಡ್ಯೇಲು, ಜತೆ ಕಾರ್ಯದರ್ಶಿ ನಾರಾಯಣ. ಬಿ ಕುಂಡದಬೆಟ್ಟು, ಕೋಶಾಧಿಕಾರಿ ಸದಾಶಿವ ಭಂಡಾರಿ ಪಡ್ತೆç ಹಾಗೂ ಎಲ್ಲಾ ಸಮಿತಿ ಸದಸ್ಯರಿಗೆ ಶಾಲು ನೀಡಿ ಗೌರವಿಸಲಾಯಿತು.

ಯುವ ವೇದಿಕೆ ಅಧ್ಯಕ್ಷ ವಿಶ್ವನಾಥ ಭಂಡಾರಿ ಉಜಿರೆ, ಕಾರ್ಯದರ್ಶಿ ಪ್ರಶಾಂತ್ ಭಂಡಾರಿ ಅಂಡಿಂಜೆ, ಉಪಾಧ್ಯಕ್ಷ ಅಭಿಜಿತ್ ಭಂಡಾರಿ ಕನ್ಯಾಡಿ, ಜತೆಕಾರ್ಯದರ್ಶಿ ರಂಜಿತ್ ಕೊಕ್ಕಡ, ಕೋಶಾಧಿಕಾರಿ ಜಗದೀಶ್ ಭಂಡಾರಿ ಕೋಡಿಕ್ಕು, ಸಂಘಟನಾ ಕಾರ್ಯದರ್ಶಿ ಧನ್ಯಕುಮಾರ್ ಪುದುವೆಟ್ಟು ಹಾಗು ಸಮಿತಿ ಸದಸ್ಯರನ್ನು ಕೂಡ ಶಾಲು ನೀಡಿ ಗೌರವಿಸಲಾಯಿತು.

ಗೌರವಾಧ್ಯಕ್ಷ ಎ. ಪೂವಪ್ಪ ಭಂಡಾರಿ ಪಣೆಜಾಲು ಮಾತನಾಡಿ ಬೆಳ್ತಂಗಡಿ ಭಂಡಾರಿ ಸಮಾಜ ಸಂಘ ಮತ್ತು ಯುವ ವೇದಿಕೆಯ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಉತ್ತಮ ರೀತಿಯುಲ್ಲಿ ಮುನ್ನಡೆಸುವಂತೆ ಸಲಹೆ ನೀಡಿದರು.

ಯುವ ವೇದಿಕೆಯ ಅಧ್ಯಕ್ಷರಾದ ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಶ್ವನಾಥ ಭಂಡಾರಿ ಉಜಿರೆ ಮಾತನಾಡಿ, ಯುವವೇದಿಕೆಯ ಸದಸ್ಯರಾಗಿ ತನ್ನ ಅವಧಿಯಲ್ಲಿ ತನ್ನೊಂದಿಗೆ ಸಹಕರಿಸಿದ ಎಲ್ಲರ ಸಹಕಾರವನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್. ಉಮೇಶ್ ಭಂಡಾರಿ ಉಜಿರೆ ಮಾತನಾಡಿ, ತಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಭಂಡಾರಿ ಬಾಂಧವರ ಸೇವೆ ಮತ್ತು ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು. ನೂತನ ಸಾಲಿನ ಕಾರ್ಯಕಾರಿಣಿ ಸಮಿತಿಗೂ ಕೂಡ ಹೆಚ್ಚಿನ ಸಹಕಾರ ನೀಡುವ ಮೂಲಕ ನಮ್ಮ ಭಂಡಾರಿ ಸಮಾಜ ಇನ್ನೂ ಬಲಿಷ್ಟವಾಗಿ ಬೆಳೆಯುವಂತೆ ಸಹಕರಿಸಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ಮತ್ತು ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 4 ಮಂದಿಯನ್ನು ಸನ್ಮಾನಿಸಲಾಯಿತು. ಕುಣಿತ ಭಜನೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಸ್ಕೂಲ್ ಕಿಟ್ ವಿತರಿಸಲಾಯಿತು.

ಸತೀಶ್ ನಾಳ ಇವರ ಪ್ರಾರ್ಥಿಸಿ, ವಂದಿಸಿದರು. ಮಾಜಿ ಅಧ್ಯಕ್ಷ ದಿವಾಕರ ಭಂಡಾರಿ ನಾರಾವಿ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಅಶೋಕ್ ಭಂಡಾರಿ ಗುಂಡ್ಯಲ್ಕೆ ವಾರ್ಷಿಕ ವರದಿ ಮಂಡಿಸಿದರು. ಸಂಘದ ಜತೆಕಾರ್ಯದರ್ಶಿ ನಾರಾಯಣ. ಬಿ ಕುಂಡದಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆಯ ಬಳಿಕ ತಾಲೂಕಿನ ಭಂಡಾರಿ ಸಮಾಜದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related posts

ಬಿ.ಸಿ. ರೋಡ್‌-ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್ದಾರಿ 73 ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ರೂ.64 ಕೋಟಿ ಮಂಜೂರು: ಸಂಸದ ಕ್ಯಾ. ಚೌಟ

Suddi Udaya

ಬೆಳ್ತಂಗಡಿ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಈಡೇರಿಸುವಂತೆ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಮನವಿ

Suddi Udaya

ಸುಲ್ಕೇರಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಭಂಡಾರಿಗೋಳಿ ವತಿಯಿಂದ ಆರ್ಥಿಕ ಧನ ಸಹಾಯ ಹಾಗೂ ಅಕ್ಕಿ ವಿತರಣೆ

Suddi Udaya

ಎ.30: ಉಪ್ಪಾರಪಳಿಕೆಯಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಪ್ರಾರಂಭೋತ್ಸವ

Suddi Udaya

ಮುಂಡಾಜೆ : ದಿ. ಮಹಾಬಲ ರೈ ಕಲ್ಲಹಿತ್ತಿಲು ಅವರ ಸ್ಮರಣಾರ್ಥ ಬಸ್ಸು ತಂಗುದಾಣ ಲೋಕಾರ್ಪಣೆ

Suddi Udaya

ಕಾಯರ್ತಡ್ಕದಲ್ಲಿ ಮಾರಕಾಯುಧದಿಂದ ಹಲ್ಲೆ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಬ್ರಿಜೇಶ್ ಚೌಟ : ಗಂಭೀರ ಗಾಯಗೊಂಡ ರಾಜೇಶ್ ರವರ ಆರೋಗ್ಯ ವಿಚಾರಣೆ

Suddi Udaya
error: Content is protected !!