September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಂಜು ಇಂಡೇನ್ ಗ್ಯಾಸ್‌ನಿಂದ ಅಸಮರ್ಪಕ ಗ್ಯಾಸ್ ವಿತರಣೆ: ಜಿಲ್ಲಾಧಿಕಾರಿ, ಬೆಳ್ತಂಗಡಿ ಪೊಲೀಸರಿಗೆ ಗ್ರಾಹಕರಿಂದ ದೂರು.

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಕಛೇರಿ ಹೊಂದಿರುವ ಇಂಡೇನ್ ಗ್ಯಾಸ್ ವಿತರಣ ಸಂಸ್ಥೆಯಾದ ಮಂಜು ಇಂಡೇನ್ ಗ್ಯಾಸ್ ಸಂಸ್ಥೆಯು ನಮಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ನೀಡದೇ ಸತಾಯಿಸುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸುವಂತೆ ಗುರುವಾಯನಕೆರೆ ನಿವಾಸಿಗಳಾದ ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಹಾಗೂ ಮಹಮ್ಮದ್ ರಫೀಕ್ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದಾರೆ.

ಅವರ ವಿತರಣ ವ್ಯವಸ್ಥೆಯಂತೆ ತಿಂಗಳು ಕಳೆದ ಬಳಿಕ ಗ್ಯಾಸ್ ಬುಕ್ ಮಾಡಿದರೂ ಸಿಲಿಂಡರ್ ನೀಡುತ್ತಿಲ್ಲ. ಬಡವರಾದ ನಮಗೆ ಅಡುಗೆಗೆ ಪರ್ಯಾಯ ವ್ಯವಸ್ಥೆ ಇಲ್ಲ. ಮನೆಮನೆಗೆ ತಲುಪಿಸುವ ವ್ಯವಸ್ಥೆ ಇದ್ದರೂ ಅವರು ಮಾಡುತ್ತಿಲ್ಲ. ಬದಲಾಗಿ ನಾವೇ ಅವರ ಕಛೇರಿಗೆ ಹೋಗಿ ಗ್ಯಾಸ್ ಬುಕ್ ಮಾಡಿ ರಶೀದಿ ಮಾಡಿದ ಬಳಿಕ ೧೦-೨೦ ದಿನಗಳ ಬಳಿಕ ಅವರ ಗೋದಾಮಿಗೆ ಹೋಗಿ ಸಿಲಿಂಡರ್ ಪಡೆಯಬೇಕಾಗಿದೆ. ಬೆಳ್ತಂಗಡಿಯಿAದ ಮದ್ದಡ್ಕ- ಪಡಂಗಡಿ ಕಡೆ ವಾಸವಿರುವ ನಾವು ಇದರಿಂದ ಗ್ಯಾಸ್ ಸಿಲಿಂಡರ್ ಪಡೆಯಲು ಬಹುದೂರ ಹೋಗಬೇಕಾಗಿದೆ. ಒಂದೊಮ್ಮೆ ಅಲ್ಲಿಗೆ ಹೋದರೂ ಮತ್ತೊಂದು ದಿನ ಬನ್ನಿ ಎಂದು ಸಾಗ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ಹೆಚ್ಚುವರಿ ಸಿಲಿಂಡರ್ ಪಡೆಯಲು ಅರ್ಜಿ ನೀಡಿದರೂ ಸಿಲಿಂಡರ್ ನೀಡದೇ ಸತಾಯಿಸುತ್ತಾರೆ. ಹೆಚ್ಚುವರಿ ಹಣ ಕಟ್ಟಿದರಷ್ಟೇ ಸಿಲಿಂಡರ್ ಪಡೆಯಬಹುದಾಗಿದೆ. ಹೆಸರು ಬದಲಾವಣೆಗೂ ಹೆಚ್ಚುವರಿ ಹಣ ತೆರಬೇಕಾಗಿದೆ. ಇಂತಹ ಅವ್ಯವಸ್ಥೆಗಳಿಂದ ಸಾರ್ವಜನಿಕರು ರೋಸಿ ಹೋಗಿದ್ದೇವೆ.

ಆದುದರಿಂದ ನಮಗೆ ಮನೆ ಬಳಕೆಯ ಸಮರ್ಪಕವಾದ ಗ್ಯಾಸ್ ಸಿಲಿಂಡರ್ ವಿತರಣೆಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

Related posts

ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟ: ಉಜಿರೆ ಅನುಗ್ರಹ ಆಂ.ಮಾ. ಶಾಲಾ ವಿದ್ಯಾರ್ಥಿ ನಿಶಾನ್ ಹೆಚ್.ಪೂಜಾರಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

ಅಪಘಾತದಲ್ಲಿ ಮೃತರಾದ ನಾವೂರು ಚಂದ್ರಹಾಸ ಅವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಲಾಯಿಲ: ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಪಡ್ಲಾಡಿ ಮೊಸರು ಕುಡಿಕೆ ಉತ್ಸವ ಕಣ್ಸೆಳೆದ ಪುಟಾಣಿಗಳ ಕೃಷ್ಣ ವೇಷ:

Suddi Udaya

ಮಹಾಮಂಡಲೇಶ್ವರಾಗಿ ಪಟ್ಟಾಭಿಶಿಕ್ತರಾಗಿ ಆಗಮಿಸಿದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಉಜಿರೆಯಲ್ಲಿ ಭಕ್ತರಿಂದ ಭವ್ಯ ಸ್ವಾಗತ

Suddi Udaya

ಅ.20 ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಲಾಯಿಲ ಸೈಂಟ್ ಮೆರೀಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!