September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಡೆಕ್ಕಾವುದ ಸತ್ಯೋಲು ಭಕ್ತಿ ಸುಗಿಪು ವೀಡಿಯೋ-ಆಡಿಯೋ ಆಲ್ಬಮ್ ಸಾಂಗ್ ಬಿಡುಗಡೆ

ನಾವೂರು: ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನಲ್ಲಿ ಬಡೆಕ್ಕಾವುದ ಸತ್ಯೋಲು ಭಕ್ತಿ ಸುಗಿಪು ವೀಡಿಯೋ ಮತ್ತು ಆಡಿಯೋ ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಎ.14ರಂದು ನಡೆಯಿತು.

ಆಲ್ಬಮ್ ಸಾಂಗ್ ಬಿಡುಗಡೆಗೊಳಿಸಿ ಮಾತನಾಡಿದ ಡಿ.ಸಿ.ಪಿ.ಡಾ.ಬಿ.ಶಂಕರ್ ಮಾತನಾಡಿ ಬಡೆಕ್ಕಾವಿನ ಭಕ್ತರ ರಕ್ಷಕ ತಾಯಿ ಅಪ್ಪೆ ಕಲ್ಲುರ್ಟಿ. ಧರ್ಮ, ಜಾತಿ, ಮತ, ಬೇದಗಳನ್ನು ತ್ಯಾಜಿಸಿ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೈವದ ಕಾರಣೀಕ ಶಕ್ತಿ ಸಂಚಯನ ಇರುವ ಈ ಸ್ಥಳದಲ್ಲಿ ದೈವದ ಅನುಗ್ರಹದಿಂದ ಸ್ವಯಂ ಪ್ರೇರಣೆಯಿಂದ ಭಕ್ತರು ನಮ್ಮ ಮನೆಯ ಕಾರ್ಯಕ್ರಮದ್ದಂತೆ ಇಲ್ಲಿ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ. ಕ್ಷೇತ್ರಕ್ಕೆ ಆಗಮಿಸುವವರು ವ್ಯಕ್ತಿಯಾಗದೆ ಭಕ್ತರಾಗಿ ಬರುತ್ತಿದ್ದಾರೆ. ಬಡೆಕ್ಕಾವುಗುತ್ತಿನ ಮನೆತನದವರು ಸೌಮ್ಯತೆ ಲವಲವಿಕೆಯಿಂದ ಆಗಮಿಸಿದ ಭಕ್ತರು ಬರಮಾಡಿಕೊಳ್ಳುವ ವ್ಯವಸ್ಥೆ ಹೃದಯ ಶ್ರೀಮಂತಿಕೆ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕಾಂಜಾನು ಮಾತನಾಡಿ ನಮ್ಮ ಆಚಾರ-ವಿಚಾರಗಳನ್ನು ಜೀವಂತವಾಗಿರಿಸಿಕೊAಡು ಊರಿನವರನ್ನೂ ಒಗ್ಗೂಡಿಸಿ ನಿರಂತರವಾಗಿ ಸೇವೆ ನಡೆಯುತ್ತ ಬರುತ್ತಿರುವುದು ಶ್ಲಾಘನೀಯ. ಜನರ ಬೆಂಬಲದೊಂದಿಗೆ ಶಿಸ್ತುಬದ್ಧ ಕಟ್ಟುಪಾಡು ಆಚರಣೆಗೆ ಬಡೆಕ್ಕಾವುಗುತ್ತು ಅನುಕರಣೀಯ ಎಂದರು.

ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಪ್ಪ ಪೂಜಾರಿ, ರವಿರಾಜ್ ಜೈನ್ ಬಡೆಕ್ಕಾವುಗುತ್ತು, ಉಜಿರೆ ಮಂದಾರ ಕಲಾವಿದರ ತಂಡದ ಅಧ್ಯಕ್ಷ ಗುಣಾಪಲ್ ಎಮ್.ಎಸ್, ಗಣೇಶ್ ಪಿ.ಎಸ್ ಇಂಚರ ನಾವೂರು,ಬಡೆಕ್ಕಾವುಗುತ್ತು ಮುಖ್ಯಸ್ಥ ರಕ್ಷಿತ್ ಅಜಿಲ, ವಸಂತ ಪೂಜಾರಿ ಇಡ್ಯಾಲ, ಪ್ರದೀಪ್ ಬೆಂಗಳೂರು, ಶಿವಣ್ಣ ಗೌಡ, ಊರಿನ ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಸಹಿತ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರದ ವತಿಯಿಂದ ಚಲನಚಿತ್ರದ ಬಾಲ ಕಲಾವಿದರಾದ ಲೈಟ್ ಹೌಸ್ ಖ್ಯಾತಿಯ ಅಚಲ್ ಜಿ.ಬಂಗೇರ, ಕಾಂತಾರ ಖ್ಯಾತಿಯ ಅಧ್ವಿಕ್ ಜಿ.ಬಂಗೇರ ಹಾಗೂ ಗಾಯಕಿ ಸಿಂಚನಾ ಲಾವುದಡಿ ಅವರನ್ನು ಸನ್ಮಾನಿಸಲಾಯಿತು. ರತ್ನಾಕರ್ ಬಿ.ನಾವೂರು ನನಸು ಪ್ರಸ್ತಾವಿಸಿ ಸ್ವಾಗತಿಸಿದರು. ರಾಜು ಕೆ.ಕಾರ್ಯಕ್ರಮ ನಿರೂಪಿಸಿದರು.

Related posts

ಫೇಸ್‌ಬುಕ್ ಜಾಲತಾಣದಲ್ಲಿ ಮಹಿಳೆಗೆ ಚಾರಿತ್ರ್ಯಕ್ಕೆ ಧಕ್ಕೆಯಾಗುವ ಬರಹ ಬೆದರಿಕೆ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ನಾರಾವಿ ಸಿಎ ಬ್ಯಾಂಕಿಗೆ ಸತತ 5 ವರ್ಷದಿಂದ ಸಾಧನಾ ಪ್ರಶಸ್ತಿ

Suddi Udaya

ರುಡ್‌ಸೆಟ್‌ನ 1000ನೇ ಫೋಟೋಗ್ರಫಿ–ವಿಡಿಯೋಗ್ರಫಿ ಹಾಗೂ 998ನೇ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ತಂಡಗಳ ಸಮಾರೋಪ

Suddi Udaya
error: Content is protected !!