September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಯಕ್ಷಭಾರತಿಯಿಂದ ಸಂಸ್ಕಾರ ಶಿಕ್ಷಣ ಶಿಬಿರ

ಉಜಿರೆ: ಯಕ್ಷಭಾರತಿ ಕನ್ಯಾಡಿ ಸಂಸ್ಥೆಯ ವತಿಯಿಂದ ಒಂದು ದಿನದ ಸಂಸ್ಕಾರ ಶಿಕ್ಷಣ ಶಿಬಿರವು ಎ.11ರಂದು ಉಜಿರೆಯ ಶಾರದಾ ಮಂಟಪದಲ್ಲಿ ಜರುಗಿತು.

ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಅಭ್ಯಂತರ. ಬಿ ಸುಭಾಷ್ಚಂದ್ರ ದೀಪ ಪ್ರಜ್ವಲಿಸುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ಉಜಿರೆ ಪಡುವೆಟ್ಟು ಮನೆಯ ಶ್ರೀಮತಿ ವೃಂದ ಪಡ್ವೆಟ್ನಾಯ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಟ್ರಸ್ಟಿ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಸದಿಂದ ರಸ, ಯೋಗ, ಅಭಿನಯ ಗೀತೆ, ದೇಶಿಯ ಆಟಗಳು ಮುಂತಾದ ಈ ಶಿಬಿರದಲ್ಲಿ 72 ಮಕ್ಕಳು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಗುಣವತಿ ಮಾತಾಜಿ, ಪುಷ್ಪಲತಾ ಮಾತಾಜಿ, ರಾಜೇಶ್ವರಿ ಮಾತಾಜಿ, ವಿಜಯ್ ಅರಳಿ ಎಸ್. ಡಿ. ಎಮ್ ಯೇಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಡಾl ಅರುಂಧತಿ, ಡಾlಲೇಖಾ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಬ್ಯಾಂಕ್ ನಿವೃತ್ತ ಪ್ರಬಂಧಕ ವಿಶ್ವಾಸ್ ರಾವ್ ಉಜಿರೆ ಭಾಗವಹಿಸಿ ಇಂದಿನ ಕಾಲಘಟ್ಟದಲ್ಲಿ ಶಿಬಿರದ ಅಗತ್ಯತೆ ವಿವರಿಸಿ , ಯಕ್ಷ ಭಾರತಿಯ ಕಾರ್ಯಕ್ಕೆ ಶ್ಲಾಘಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಉಜಿರೆ ಬಾಲಗೋಕುಲ ಸಮಿತಿಯಿಂದ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಕಾಳಿಕಾಂಬಾ ಕಲಾಸೇವಾ ಪ್ರತಿಷ್ಠಾನ ಉಪ್ಪಿನಂಗಡಿ ಇದರ ವತಿಯಿಂದ ಮಕ್ಕಳಿಗೆ ಮಹಾಭಾರತದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಟ್ರಸ್ಟಿಗಳಾದ ಭವ್ಯ ಹೊಳ್ಳ ಮತ್ತು ಕುಸುಮಾಕರ ಕೊತ್ತೋಡಿ ಶಿಬಿರವನ್ನು ಸಂಯೋಜಿಸಿದ್ದರು. ಯಕ್ಷಭಾರತಿಯ ಉಪಾಧ್ಯಕ್ಷ ಹರಿದಾಸ ಗಾಂಭೀರ ಧರ್ಮಸ್ಥಳ, ಟ್ರಸ್ಟಿಗಳಾದ ವಿದ್ಯಾ ಕುಮಾರ್ ಕಾಂಚೋಡು, ಗುರು ಪ್ರಸಾದ್, ಸಂಚಾಲಕ ಮಹೇಶ ಕನ್ಯಾಡಿ ಉಪಸ್ಥಿತರಿದ್ದು ಸಹಕರಿಸಿದರು.

Related posts

ಉಜಿರೆ ದೇವಸ್ಥಾನದ ವಿಜಯಗೋಪುರ ನಿರ್ಮಾಣ ಕಾರ್ಯಾಲಯ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ವತಿಯಿಂದ “ವೈದ್ಯರೊಂದಿಗೆ ಸಂವಾದ” ಕಾರ್ಯಕ್ರಮ

Suddi Udaya

ಲಾಯಿಲ: ಗಂಗಮ್ಮ ಪೂಜಾರಿ ನಿಧನ

Suddi Udaya

ಉಜಿರೆ: ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಾರೀಸುದಾರರ ಪತ್ತೆಗೆ ಮನವಿ

Suddi Udaya

ತೆಕ್ಕಾರು: ಬಾಜಾರು ಓಂ ರಾಮ್ ಫ್ರೆಂಡ್ಸ್ ಆಶ್ರಯದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಸೌತಡ್ಕದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷ ಕೃಷ್ಣ ಶೆಟ್ಟಿಗೆ ಅಭಿನಂದನೆ

Suddi Udaya
error: Content is protected !!