September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀರಾಮ ಕ್ಷೇತ್ರ ಕನ್ಯಾಡಿಯ ಅಯೋಧ್ಯೆ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನೇಮಕ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳ, ಬೆಳ್ತಂಗಡಿ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರು, ಅಯೋಧ್ಯೆಯಲ್ಲಿ ಈಗಾಗಲೇ ಜಾಗವನ್ನು ಖರೀದಿ ಮಾಡಿ ಶಾಖಾ ಮಠದ ನಿರ್ಮಾಣದ ಕೈಕಂರ್ಯವನ್ನು ಪ್ರಾರಂಭಿಸಿದ್ದಾರೆ.

ಈ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ನೇಮಕಗೊಳಿಸಲಾಗಿದೆ ಎಂದು ಕ‌ನ್ಯಾಡಿ ಶ್ರೀಗಳು ಘೋಷಣೆ ಮಾಡಿದರು.

ಮೂರು ಬಾರಿ ಸತತ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ, ಒಬ್ಬ ನಿಷ್ಕಳಂಕ, ನಿಷ್ಠಾವಂತ, ಆದರ್ಶ, ಸಜ್ಜನ ರಾಜಕಾರಣಿಯಾಗಿ ಜನಮನ್ನಣೆಯನ್ನು ಗಳಿಸಿರುತ್ತಾರೆ.ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಇಡೀ ರಾಜ್ಯದಲ್ಲಿ ನಿರಂತರ ಪ್ರವಾಸ ಮಾಡಿ ಸಂಘಟನೆಯ ಒಬ್ಬ ಉತ್ತಮ ನಾಯಕನೆಂಬ ಕೀರ್ತಿಗೆ ಪಾತ್ರರಾಗಿರುತ್ತಾರೆ. ತಾನೊಬ್ಬ ರಾಜಕಾರಣಿಗಿಂತ ಹೆಚ್ಚಾಗಿ ಸನಾತನ ಹಿಂದು ಧರ್ಮದ ರಕ್ಷಣೆಗಾಗಿ ಅದರ ಅಭ್ಯುದಯಕ್ಕಾಗಿ ಸುಮಾರು 150ಕ್ಕೂ ಮಿಕ್ಕಿ ಬ್ರಹ್ಮ ಕಲಶಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಇಡೀ ರಾಜ್ಯದ ಜನತೆಯ ಅಮೋಘ ಪ್ರೀತಿಗೆ ಭಾಜನರಾದ ಒಬ್ಬ ಶುದ್ಧ ಹಸ್ತದ ದೈವ ಭಕ್ತ. ಜನನಾಯಕರಾಗಿರುವ ನಳಿನ್ ಕುಮಾರ್ ರವರು ಶ್ರೀ ಮಠದ ಪರಮಾಪ್ತ ಶಿಷ್ಯರಾಗಿದ್ರೂ, ಈಗ ಅಯೋಧ್ಯೆಯಲ್ಲಾಗುವ ಶಾಖಾ ಮಠಕ್ಕೆ ರಾಷ್ಟ್ರ- ಅಂತರಾಷ್ಟ್ರ ಮಟ್ಟದಲ್ಲಿ ಶಿಷ್ಯರನ್ನು ಹೊಂದಿರುವ ಈ ಪರಮ ಪವಿತ್ರವಾದ ದೈವೀ ಸಾನಿಧ್ಯವನ್ನು ಹೊಂದಿರುವ ಸಂಸ್ಥೆಗೆ ನಳಿನ್ ಕುಮಾರ್ ಕಟೀಲ್ ರವರು ಸರ್ವಸಮರ್ಥರೆಂದು ಮನಗಂಡು ಈ ಶ್ರೇಷ್ಠಕಾರ್ಯಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿದರು.

ಈ ಸಂದರ್ಭದಲ್ಲಿ ಗುರುದೇವ ಮಠ ಟ್ರಸ್ಟ್, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಟ್ರಸ್ಟ್, ಶ್ರೀ ರಾಮಕ್ಷೇತ್ರ ಅಭಿವೃದ್ಧಿ ಸಮಿತಿ ಪ್ರಮುಖರಾದ ಪೀತಾಂಬರ ಹೇರಾಜೆ ಬೆಳ್ತಂಗಡಿ,ನಾಗೇಶ್ ಗೌಡ ಕೊಕ್ಕಡ, ಜಯಂತ್ ಕೋಟ್ಯಾನ್ ಮರೋಡಿ,ಸಂಪತ್ ಬಿ ಸುವರ್ಣ ಬೆಳ್ತಂಗಡಿ, ರಾಜೇಶ್ ಪೈ ಉಜಿರೆ,ತಿಮ್ಮಪ್ಪ ಗೌಡ ಬೆಳಾಲು,ರವೀಂದ್ರ ಪೂಜಾರಿ ಆರ್ಲ ಕನ್ಯಾಡಿ,ಕೃಷ್ಣಪ್ಪ ಗುಡಿಗಾರ್,ವಿಕಾಸ್ ಪುತ್ತೂರು,ಶಿವಕಾಂತ್ ಗೌಡ,ರತ್ನಾಕರ ಬುಣ್ಣನ್ ಮರೋಡಿ,ರಾಜೇಶ್ ಪೂಜಾರಿ ವೇಣೂರು,ಸುನೀಲ್ ಕನ್ಯಾಡಿ,ಕೇಶವ ಬಂಗೇರ ಕಳಿಯ, ಹರೀಶ್ ಕನ್ಯಾಡಿ,ಯತೀಶ್ ಕನ್ಯಾಡಿ,ವಿನೋಭಾ ಕಾರಂತ್ ಉಜಿರೆ,ಪುರುಷೋತ್ತಮ ಪೂಜಾರಿ,ತುಕರಾಮ್ ಸಾಲಿಯಾನ್ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ರಘುರಾಮ ಶೆಟ್ಟಿ, ಸಾಧನಾ ಕಾರ್ಯದರ್ಶಿಯಾಗಿ ಅಮಿತಾನಂದ ಹೆಗ್ಡೆ ಆಯ್ಕೆ

Suddi Udaya

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರ

Suddi Udaya

ಕುವೆಟ್ಟು ಸ.ಉ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ದಂತ ಚಿಕಿತ್ಸಾ ಶಿಬಿರ

Suddi Udaya

ಜನ ನಾಯಕ, ಬೆಸ್ಟ್ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಬಿಲ್ಲವ ಅಭಿಮಾನಿ ಬಳಗದಿಂದ ಗೌರವಾಭಿನಂದನೆ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರರ 79ನೇ ಹುಟ್ಟು ಹಬ್ಬದ ಆಚರಣೆ, ಬೃಹತ್ ರಕ್ತದಾನ ಶಿಬಿರ ಹಾಗೂ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಲ್ಲಿ ಸಹಕರಿಸಿದ ದಾನಿಗಳಿಗೆ ಅಭಿನಂದನೆ

Suddi Udaya

ಅರಸಿನಮಕ್ಕಿ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ವರದ ಶಂಕರ ದಾಮ್ಲೆ, ಉಪಾಧ್ಯಕ್ಷರಾಗಿ ಸೀತಾ ಎ ಆಯ್ಕೆ

Suddi Udaya
error: Content is protected !!