25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಮೇ 7-8: ಕೋಟಿಕಟ್ಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ

ಬೆಳ್ತಂಗಡಿ: ಮುಂಡೂರು ಗ್ರಾಮದ ಕೋಟಿಕಟ್ಟಿ ಎಂಬಲ್ಲಿ ಅನೇಕ ವರ್ಷಗಳಿಂದ ಪೂಜಿಸಿಕೊಂಡು ಬರುತ್ತಿರುವ ಶ್ರೀ ಮಹಮ್ಮಾಯಿ ಸಾನಿಧ್ಯದಲ್ಲಿ ವರ್ಷಂಪ್ರತಿ ಶ್ರೀ ಮಾರಿಪೂಜೆ ಕಾರ್ಯಕ್ರಮ ನಡೆಯುತ್ತ ಬರುತ್ತಿದೆ. ಮೇ.7 ರಿಂದ 8 ರವರೆಗೆ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ ಮಹಾಪೂಜೆಯು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.


ಕಾರ್ಯಕ್ರಮಗಳು: ಮೇ.7ರಂದು ಸಂಜೆ ಗಂಟೆ 3:೦೦ಕ್ಕೆ ಶ್ರೀ ಮಹಮ್ಮಾಯಿ ಅಮ್ಮನ ನೂತನ ಮೂರ್ತಿ ಆಗಮನ (ಉಜಿರೆಯಿಂದ ಬದ್ಯಾರಿಗೆ), ಸಂಜೆ ಗಂಟೆ 4:೦೦ಕ್ಕೆ ಋತ್ವಿಜರ ಆಗಮನ, ಸಂಜೆ ಗಂಟೆ 4:30ಕ್ಕೆ ಅಲಯ ಪರಿಗ್ರಂತ ಪ್ರಾರ್ಥನೆ ತೋರಣ ಮುಹೂರ್ತ, ಸಂಜೆ ಗಂಟೆ 4:30ಕ್ಕೆ ಮಹಮ್ಮಾಯಿ ಅಮ್ಮನವರ ನೂತನ ಮೂರ್ತಿಯ ವೈಭವದ ಮೆರವಣಿಗೆ ಹಾಗೂ ಹಸಿರುವಾಣಿ ಹೊರೆಕಾಣಿಕೆಯ ಮೆರವಣಿಗೆ ಬದ್ಯಾರು ಶಾಲಾ ಬಳಿಯಿಂದ ಕೋಟಿಕಟ್ಟೆ ಶ್ರೀ ಮಹಮ್ಮಾಯಿ ಸನ್ನಿದಿಯ ತನಕ, ಸಂಜೆ ಗಂಟೆ 5:30ರಿಂದ ವೈದಿಕ ವಿಧಿ ವಿಧಾನಗಳು ಪ್ರಾರಂಭ, ಸಂಜೆ ಗಂಟೆ 6 ರಿಂದ ಶಾರದಾಂಬ ಭಜನಾ ಮಂಡಳಿ ಮುಂಡೂರು ಮತ್ತು ಶ್ರೀ ನಾಗಾಂಬಿಕ ಭಜನಾ ಮಂಡಳಿ ಮಂಗಳಗಿರಿ ಮುಂಡೂರು ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 7:30 ರಿಂದ ಕೀರ್ತನ ಕಲಾ ತಂಡ ಮುಂಡಾಜೆ ಇವರಿಂದ ಭಕ್ತಿಗಾನ, ಯಕ್ಷನೃತ್ಯ. ಸ್ಥಳೀಯ ಮಕ್ಕಳಿಂದ ನೃತ್ಯ, ವೈವಿದ್ಯಮಯ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ ವೈದಿಕ ವಿಧಿ ವಿಧಾನಗಳು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 9:30ರಿಂದ ತುಳು ಹಾಸ್ಯಮಯ ನಾಟಕ “ನಾಟಕ ಎಡ್ಡೆಂಡು” ಪ್ರದರ್ಶನಗೊಳ್ಳಲಿದೆ.

ಮೇ.8ರಂದು ಬೆಳಿಗ್ಗೆ ಗಂಟೆ 6:30ಕ್ಕೆ ಗಣಹೋಮ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಲಶ ಪೂಜೆ, ಬೆಳಿಗ್ಗೆ ಗಂಟೆ 9:51ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಮಹಾಕುಂಭಾಭಿಷೇಕ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಮೇ.9ರಂದು ಶ್ರೀ ಮಹಮ್ಮಾಯಿ ಅಮ್ಮನವರ ಪುನಃ ಪ್ರತಿಷ್ಠೆಯ ಅಂಗವಾಗಿ ವಿಶೇಷ ಮಾರಿಪೂಜೆ ನಡೆಯಲಿದ್ದು, ಕ್ಷೇತ್ರದಲ್ಲಿ ಅಪರಾಹ್ನ ಗಂಟೆ 3 ಕ್ಕೆ ಗದ್ದಿಗೆ ಪೂಜೆ, ರಾತ್ರಿ ಗಂಟೆ 9.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

Related posts

ಪದ್ಮುಂಜ ಪ್ರಾ.ಕೃ.ಪ.ಸ. ಸಂಘದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ ಪ್ರಯುಕ್ತ “ಏಕ್ ಪೇಡ್ ಮಾ ಕೇ ನಾಮ್ ” ಕಾರ್ಯಕ್ರಮ

Suddi Udaya

ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ಬೆಳ್ಳಿ ಹಬ್ಬ ಸಮಾರೋಪ ಸಮಾರಂಭ

Suddi Udaya

ಧರ್ಮಸ್ಥಳ : ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಾಮಧೇನು ಸಂಘದ ಸದಸ್ಯರಿಂದ ಆಟಿಡೊಂಜಿ ದಿನ

Suddi Udaya

ಬಂದಾರು: ಕರುವಿನ ಮೇಲೆ ಚಿರತೆ ದಾಳಿ

Suddi Udaya

ಶಿಕ್ಷಕರು: ನಿನ್ನೆ, ಇಂದು ಮತ್ತು ನಾಳೆ — ಬದಲಾಗುತ್ತಿರುವ ಕಾಲದ ಸವಾಲುಗಳ ನಡುವೆ ಶಿಕ್ಷಣದ ದೀಪಸ್ತಂಭ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಉಜಿರೆ ವಲಯದ, ಬೈಪಾಡಿ ಕಾರ್ಯಕ್ಷೇತ್ರದಲ್ಲಿ “ಶ್ರಿ ಚಾಮುಂಡೇಶ್ವರಿ” ಸಂಘದ ಉದ್ಘಾಟನೆ

Suddi Udaya
error: Content is protected !!