27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ : 10 ತಿಂಗಳು ಕಳೆದರೂ ಕಾರ್ಮಿಕರಿಗೆ ಸಿಗದ ಕೂಲಿ, ಬಾಡಿಗೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣದ ತನಿಖೆಗಾಗಿ ಎಸ್‌ಐಟಿ ಕಾರ್ಯಾಚರಣೆ ಮುಗಿದು 10 ತಿಂಗಳು ಕಳೆದರೂ ಅಲ್ಲಿ ದುಡಿದ ಕಾರ್ಮಿಕರಿಗೆ, ಜೆಸಿಬಿ ಒದಗಿಸಿದವರಿಗೆ ಹಣ ಪಾವತಿಯಾಗಿಲ್ಲ.ಬಿಲ್ ಪಾವತಿಗಾಗಿ ಅಲೆದಾಡುವಂತಾಗಿದೆ ಎಸ್‌ಐಟಿ 2025ರ ಜು. 28ರಂದು ಚಿನ್ನಯ್ಯನನ್ನು ಕರೆತಂದು ಸ್ಥಳ ಗುರುತಿಸಿತ್ತು. ಜು. 28ರಿಂದ ಆ. 13ರ ವರೆಗೆ ಪ್ರತಿದಿನ 10-12 ಕಾರ್ಮಿಕರು ಕೆಲಸ ಮಾಡಿದ್ದು, ಸುಮಾರು 80,000 ರೂ. ನೀಡಬೇಕಿದೆ.

ಜು. 29ರಿಂದ ಆ. 13ರವರೆಗೆ ಒಟ್ಟು 17 ಪಾಯಿಂಟ್‌ಗಳಲ್ಲಿ ಕಾರ್ಮಿಕರಿಂದ ಉತ್ಪನನ ನಡೆಸಲಾಗಿತ್ತು. ಜತೆಗೆ ಮಣ್ಣು ಅಗೆಯಲು ಜೆಸಿಬಿ ಬಳಸಲಾಗಿತ್ತು. 13 ಪಾಯಿಂಟ್‌ಗಳಲ್ಲಿ ಜೆಸಿಬಿ ಕೆಲಸ ಮಾಡಿತ್ತು. 13ನೇ ಪಾಯಿಂಟ್ ದೊಡ್ಡದಾಗಿ ಅಗೆದ ಕಾರಣ ಸಣ್ಣ -ದೊಡ್ಡ ಎರಡೂ ಜೆಸಿಬಿ ಬಳಸಲಾಗಿತ್ತು. ಹೆಚ್ಚಿನ ಕಾರ್ಯಾಚರಣೆಗೆ ಹೆಚ್ಚುವರಿ ಜೆಸಿಬಿಗಳನ್ನು ಕಾಯ್ದಿರಿಸಲಾಗಿತ್ತು. ಪ್ರಸ್ತುತ ಜೆಸಿಬಿ ಕೆಲಸ ಮಾಡಿದ ಗಂಟೆಗೆ ಮಾತ್ರ ಬಿಲ್ (71,500 ರೂ.) ಸಲ್ಲಿಸಲಾಗಿದೆ. ಶಾಮಿಯಾನ, ಹಾರೆ, ಪಿಕ್ಕಾಸು, ಕುಡಿಯುವ ನೀರು ಹಾಗೂ ವಾಹನ ಬಾಡಿಗೆ ಸಹಿತ ಒಟ್ಟು ಬಾಕಿ ಮೊತ್ತ 2 ಲಕ್ಷ ರೂ. ದಾಟಿದೆ.

ಎಸ್.ಐಟಿ ಸೂಚನೆಯಂತೆ ಧರ್ಮಸ್ಥಳ ಗ್ರಾಮ ಪಂಚಾಯತ್, ಕಾರ್ಮಿ ಕರನ್ನು ಹಾಗೂ ಜೆಸಿಬಿ ಒದಗಿಸಿತ್ತು. ನಿಯಮದಂತೆ ಪಂಚಾಯತ್ ನಿಧಿಯನ್ನು ಎಸ್ ಐಟಿ ಕೆಲಸಕ್ಕೆ ಬಳಸುವಂತಿಲ್ಲ ಎನ್ನಲಾಗಿದೆ. ಇತ್ತ ಎಸ್‌ಐಟಿ ಕಚೇರಿಗೆ ಹೋದರೆ ‘ಬಿಲ್ ಕಳುಹಿಸಲಾಗಿದೆ’ ಎಂಬ ಹಾರಿಕೆ ಉತ್ತರ ಸಿಗುತ್ತಿದೆ. ಇದರಿಂದ ಕಾರ್ಮಿಕರು ಮತ್ತಿತರರು ಬಾಕಿ ಬಿಲ್ ಅನ್ನು ಯಾರಲ್ಲಿ ಕೇಳುವುದು ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ.

ಬಿಲ್‌ ಪಾವತಿ ಬಾಕಿ ಇರುವ ಬಗ್ಗೆ ನನಗೆ ಮಾಹಿತಿಯಿಲ್ಲ, ನಾವು ತನಿಖೆಯನ್ನಷ್ಟೇ ನಡೆಸುತ್ತೇವೆ. ಆದರೂ ಈ ವಿಷಯದ ಬಗ್ಗೆ ಪರಿಶೀಲಿಸುವೆ. – ಪ್ರಣಬ್ ಮೊಹಾಂತಿ, ಎಸ್‌ಐಟಿ ಮುಖ್ಯಸ್ಥರು

Related posts

ಬೆಳಾಲು ಶ್ರೀಧ.ಮ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ: ಎಸ್ ಕೆ ಎ ಬೆಳ್ತಂಗಡಿ ವಿದ್ಯಾರ್ಥಿ ಯಶಸ್ವಿ ಉತ್ತೀರ್ಣ

Suddi Udaya

ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ನಾಯಕ ಮತ್ತು ಉಪನಾಯಕ ಚುನಾವಣೆ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಸವಣಾಲು: ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಯುವಕರು; ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ಧರ್ಮಸ್ಥಳ ಆನೆ ಮಾವುತ ನಾರಾಯಣ ಮತ್ತು ಯಮುನಾ ಕೊಲೆ ಪ್ರಕರಣ ಎಸ್‌ಐಟಿ ಗೆ ದೂರು ನೀಡಲು ಬಂದ ಆನೆ ಮಾವುತನ ಮಕ್ಕಳು

Suddi Udaya
error: Content is protected !!