24.2 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡ್ಡಿ: ಗ್ರಾಹಕರ ಪರದಾಟ

ಬೆಳ್ತಂಗಡಿ: ತಾಲೂಕಿನಲ್ಲಿ ಪಡಿತರ ಪಡೆಯಲು ಸರ್ವರ್ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಕಾದು ಕಾದು ಬಸವಳಿಯುತ್ತಿದ್ದಾರೆ. ಮೇ 15ರಂದು ಈ ತಿಂಗಳ ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭವಾಗಿದ್ದು, ಆರಂಭದಿಂದಲೂ ಸರ್ವರ್ ಸಮಸ್ಯೆ ಕಂಡು ಬಂದಿತ್ತು. ಇದೀಗ ಮತ್ತಷ್ಟು ಸಮಸ್ಯೆ ಮುಂದುವರಿದಿದೆ.

ಪಡಿತರ ಸಾಮಗ್ರಿ ವಿತರಣೆಗೆ ಕಾರ್ಡ್ ದಾರರ ‘ಥಂಬ್’ ಅಗತ್ಯವಾಗಿದ್ದು, ಈ ವೇಳೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ನ್ಯಾಯಬೆಲೆ ಅಂಗಡಿ ತೆರೆಯುವ ಮೊದಲೇ ಸರದಿ ಸಾಲಲ್ಲಿ ನಿಲ್ಲುವ ಗ್ರಾಹಕರಿಗೆ ಕೆಲವೊಮ್ಮೆ ಸಂಜೆವರೆಗೂ ಕಾದರೂ ಪಡಿತರ ಸಾಮಗ್ರಿ ಸಿಗುತ್ತಿಲ್ಲ. ಮೇ 31 ಈ ತಿಂಗಳ ಪಡಿತರ ಅಕ್ಕಿ ಪಡೆಯಲು’ ಕೊನೆಯ ದಿನವಾಗಿದೆ. ಮೇ 31 ಭಾನುವಾರ ಆಗಿದ್ದು, ಹೆಚ್ಚಿನ ಪಡಿತರ ಅಂಗಡಿಗಳಿಗೆ ರಜೆ ಇರುವ ಕಾರಣ 30ರೊಳಗೆ ಪಡಿತರ ಪಡೆಯಬೇಕಿದೆ. ಒಂದು ‘ಥಂಬ್ ಪಡೆಯಲು ಕೆಲವೊಮ್ಮೆ ಅರ್ಧ ಗಂಟೆಗಿಂತಲೂ ಅಧಿಕ ಸಮಯ ಬೇಕಾಗುತ್ತಿದ್ದು ದಿನಕ್ಕೆ ಗರಿಷ್ಠ 20 ಮಂದಿ ಮಾತ್ರ ಪಡಿತರ ಪಡೆಯುವಂತಾಗಿದೆ. ‘ಥಂಬ್’ ಸಮಸ್ಯೆ ಕುರಿತು ಅರ್ಥವಾಗದ ಕೆಲವು ಮಂದಿ ನ್ಯಾಯಬೆಲೆ ಅಂಗಡಿಯವರನ್ನು ತರಾಟೆಗೆ ತೆಗೆದುಕೊಳ್ಳುವುದು ಕಂಡುಬಂದಿದೆ.

ತಾಲೂಕಿನ ಒಂದೊಂದು ಅಂಗಡಿಯಲ್ಲೂ ಅಧಿಕ ಪಡಿತರ ನ್ಯಾಯಬೆಲೆ 500ಕ್ಕಿಂತಲೂ ಚೀಟಿದಾರರಿದ್ದು, ಕೆಲವೆಡೆ ಇನ್ನು 200ಕ್ಕಿಂತ ಅಧಿಕ ಮಂದಿ ಪಡಿತರ ಪಡೆಯಲು ಬಾಕಿ ಇದೆ. ಸಹಕಾರ ಸಂಘಗಳಲ್ಲಿರುವ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯಕ್ಕಿಂತ ಅಧಿಕ ಹೊತ್ತು ಪಡಿತರ ವಿತರಣೆ ಸೇವೆ ನೀಡುವುದು ಕಂಡು ಬರುತ್ತಿದೆ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರಿಂದಲೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಮೇ ತಿಂಗಳ ಪಡಿತರ ಪಡೆಯಲು ದಿನಾಂಕ ವಿಸ್ತರಿಸದಿದ್ದರೆ ಹಲವು ಮಂದಿ ಕಾರ್ಡ್‌ದಾರರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

Related posts

ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠ ಕಾವೂರು ಮಂಗಳೂರು ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್‌ನ ಲೋಗೋ ಅನಾವರಣ

Suddi Udaya

ಹೊಸಂಗಡಿ: ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಂದ ಉದ್ಘಾಟನೆ

Suddi Udaya

ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ: ಜೋಡು ಜೀಟಿಗೆ ನಾಟಕ ಪ್ರದರ್ಶನ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ

Suddi Udaya

ನವೋದಯ ವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ನೆಟ್ ಬಾಲ್: ಎಸ್.ಡಿ.ಎಂ. ಅನುದಾನಿತ ಸೆಕೆಂಡರಿ ಶಾಲೆ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!