July 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭವು ಜೂನ್ 1ರಂದು ಸೇಕ್ರೆಡ್ ಹಾರ್ಟ್ ಸಮುದಾಯ ಭವನದಲ್ಲಿ ನಡೆಯಿತು.

ಶಾಲಾ ಸಂಚಾಲಕರು ಹಾಗೂ ಇತರ ಗಣ್ಯರು ದೀಪ ಬೆಳಗಿಸುವುದರ ಮೂಲಕ 2026-27ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ರವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ, ಸದಾ ಅರಳುತ್ತೀರಿ. ನಿತ್ಯವೂ ಹೂ ಹಣ್ಣುಗಳನ್ನು ಬಿಡುವ ಮರಗಳ ಹಾಗೆ ನಾವು ಆಗಬೇಕೆಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ| ಮ್ಯಾಥ್ಯೂ ಎನ್. ಎಂ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಸರ್ವಶಕ್ತನಾದ ದೇವರಲ್ಲಿ ನಂಬಿಕೆ ಇಡಿ, ನಿಮ್ಮನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ, ನಿಮ್ಮ ಪ್ರತಿಭೆಯನ್ನು ಬಳಸಿಕೊಂಡು ಬೆಳೆಯಿರಿ, ಉತ್ತಮ ಮೌಲ್ಯಗಳನ್ನು ಬೆಳೆಸಿರಿ ಮತ್ತು ಪೋಷಿಸಿರಿ ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.


ಮಂಗಳೂರು ಮೇರಿ ಜಾನ್ ಅಫೀಷಿಯಲ್ ಅವರು ಆಯೋಜಿಸಿದ 2.5 ಕಿಮೀ ಕಿಡ್ಸ್ ಮ್ಯಾರಥಾನ್ 2026, ಮೇ 17ರಂದು ಪಾಲೆಮಾರ್ ಕನ್ವೆನ್ಷನ್ ಸೆಂಟರ್ ಮೇರಿಹಿಲ್ ಮಂಗಳೂರಿನಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ 9ನೇ ತರಗತಿಯ ಮನ್ವಿತ್ ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರನ್ನು ಅವರ ಹೆತ್ತವರೊಂದಿಗೆ ಸನ್ಮಾನಿಸಲಾಯಿತು.
2025-26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕವನ್ನು ಗಳಿಸಿದ ಪವನ್ ಪಿ ನಾಯಕ್, ಶೇಕ್ ಮಹಮ್ಮದ್ ಶಯಾಪ್, ಜೇಡನ್ ಕೀತ್ ಡಿಕುನ್ಹಾ ,ಕೆ ಶ್ರಾವಣಿ ಬಾಳಿಗ, ಶರೋನ್ ಮೊರಾಸ್ , ಅದ್ವಿತ ಶೆಟ್ಟಿ, ಅಭಿಗೆಲ್ ಫೆರ್ನಾಂಡಿಸ್ ಹಾಗೂ ಅನ್ವಿತ್ ಎಸ್ ಇವರನ್ನು ಅವರ ಹೆತ್ತವರೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಶಾಲೆಗೆ ಹೊಸದಾಗಿ ನೇಮಕಗೊಂಡ ಶಿಕ್ಷಕ- ಶಿಕ್ಷಕಿಯರನ್ನು ಮತ್ತು ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಸಭೆಗೆ ಪರಿಚಯಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ|ದೀಪಕ್ ಲಿಯೊ ಡೇಸ ಇವರು ಎಲ್ಲ ವಿದ್ಯಾರ್ಥಿಗಳನ್ನು 2026-27ನೇ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಡಂತ್ಯಾರು ಚರ್ಚ್ ಸಹಾಯಕ ಧರ್ಮ ಗುರುಗಳಾದ ವಂ|ಸ್ವಾ| ಲ್ಯಾರಿ ಪಿಂಟೋ ರವರು, ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ನೆಲ್ಸನ್ ಲಸ್ರಾದೋ ರವರು, ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ ರವರು, ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕರಾದ ಲಿಯೋ ನೊರೊನ್ಹಾ ರವರು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಮಂಜುನಾಥ ನಿರೂಪಿಸಿ, ಸಹ ಶಿಕ್ಷಕಿಯರಾದ ಮೇಘಶ್ರೀ ಸ್ವಾಗತಿಸಿ, ಐಡ ಡಿಕುನ್ಹಾ ಧನ್ಯವಾದಗಳನ್ನು ಸಮರ್ಪಿಸಿದರು .

Related posts

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಸ್ಪೂರ್ತಿ 2K25 ಕಾಮರ್ಸ್ ಫೆಸ್ಟ್

Suddi Udaya

ಮುಗ್ಗ ಗುತ್ತಿನಲ್ಲಿ ನವರಾತ್ರಿ ಪೂಜೆ ಆರಂಭ

Suddi Udaya

ಬಹುನಿರೀಕ್ಷಿತ ರಾನಿ ಚಲನಚಿತ್ರದ ನಾಯಕ ನಟ ಗಂಭೀರ ಗಾಯ: ಕಾರ್ಯಕಾರಿ ನಿರ್ಮಾಪಕ ಕೊಕ್ರಾಡಿಯ ಗಿರೀಶ್ ಹೆಗ್ಡೆ ಅದೃಷ್ಟವಶಾತ್ ಪಾರು

Suddi Udaya

ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಕೊಕ್ಕಡ: ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ: ನೆರವಿನ ನಿರೀಕ್ಷೆಯಲ್ಲಿ ವೃದ್ಧ ದಂಪತಿ

Suddi Udaya

ಪುದುವೆಟ್ಟಿನಲ್ಲಿ ವಿಕಲಚೇತನರ ಸಮನ್ವಯ ಗ್ರಾಮಸಭೆ

Suddi Udaya
error: Content is protected !!