22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಕ್ಕಿಂಜೆ ಶಾಲಾ ಪ್ರಾರಂಭೋತ್ಸವ : ಪೋಷಕರಿಗೆ ಮಾರ್ಗದರ್ಶನ

ಕಕ್ಕಿಂಜೆ: ಸರಕಾರಿ ಪ್ರೌಢಶಾಲೆ, ಕಕ್ಕಿಂಜೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಯಟ್ ಮಂಗಳೂರು ಉಪನ್ಯಾಸಕ ತಾರೇಶ್ ನಾಯಕ್ ಭಾಗವಹಿಸಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು, ನಿಕಟ ಪೂರ್ವ ಪಂಚಾಯತ್ ಸದಸ್ಯ ಸಿದ್ದಿಕ್, ಪೋಷಕರು ಹಾಗೂ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಶಂಭು ಶಂಕರ್ ಅವರು ಪೋಷಕರಿಗೆ ಮಾರ್ಗದರ್ಶನ ನೀಡುತ್ತಾ, ಮಕ್ಕಳಿಗೆ ಶಾಲೆಯ ಆಯ್ಕೆ ಹೇಗಿರಬೇಕು, ಗುಣಮಟ್ಟದ ಶಾಲೆಗಳ ಲಕ್ಷಣಗಳು, ಶಿಕ್ಷಣದಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ, ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಕೌಶಲಭರಿತ ಶಿಕ್ಷಣದ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರ ಸಹಕಾರ ಮತ್ತು ಶಾಲೆಯೊಂದಿಗೆ ನಿರಂತರ ಸಂಪರ್ಕದ ಮಹತ್ವವನ್ನು ಅವರು ವಿವರಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಸಂಸ್ಥೆಯ ಎಲ್ಲಾ ಶಿಕ್ಷಕರು ಶ್ರಮವಹಿಸಿದ್ದು, ಪೋಷಕರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಶಾಲೆಗಳಿಂದ ಪ್ರೌಢ ಶಿಕ್ಷಣಕ್ಕೆ 60 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಗೊಂಡರು.

Related posts

ಲಾಯಿಲದಲ್ಲಿ ವಾಹನ ದಟ್ಟಣೆ

Suddi Udaya

ನಿಡ್ಲೆ ಪ್ರೇರಣ ಸಂಜೀವಿನಿ ಹಾಗೂ ಕಳೆಂಜ ಸಂಜೀವಿನಿ ಒಕ್ಕೂಟದಿಂದ ಸಮಗ್ರ ಕೃಷಿ ಸಮೂಹ ಚಟುವಟಿಕೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಗೌರವ

Suddi Udaya

ಮೇ 20-22: ಸಾಲುಕಾಯೇರು ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ವೈಜಣ್ಣರವರಿಂದ ಕಲ್ಮಂಜ ರಮೇಶ್ ನಾಯ್ಕ ರವರ ಅಡಿಕೆ ತೋಟ ರಚನೆಯ ಪರಿಶೀಲನೆ

Suddi Udaya

ದಿಡುಪೆ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Suddi Udaya
error: Content is protected !!