September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

“ಕಾಜೂರು ರಾಹಾ ಪಬ್ಲಿಕ್ ಸ್ಕೂಲ್” ಪ್ರಾರಂಭೋತ್ಸವ ಸಂಭ್ರಮ

ಬೆಳ್ತಂಗಡಿ: “ರಾಹಾ ಪಬ್ಲಿಕ್ ಸ್ಕೂಲ್” ಕಾಜೂರಿನಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಜೂ. 1 ರಂದು ಉತ್ಸಾಹಭರಿತವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಕೆ.ಎಮ್ ಸಿದ್ದೀಕ್ ಮೊಂಟುಗೋಳಿ ಭಾಗವಹಿಸಿ, ಮಕ್ಕಳ ಭವಿಷ್ಯ ಉಜ್ವಲವಾಗಲು ಮನೆ ಮತ್ತು ಶಾಲೆಯ ನಡುವೆ ಉತ್ತಮ ಸಹಕಾರ ಅಗತ್ಯ. ಮಕ್ಕಳನ್ನು ಒತ್ತಡ ರಹಿತವಾಗಿ ಸಂತುಷ್ಟತೆಯಿಂದ ಕಲಿಕೆಗೆ ಅವಕಾಶ ಮಾಡಿಕೊಡಬೇಕಾದ ಜವಾಬ್ದಾರಿ ಹೆತ್ತವರು ಮತ್ತು ಶಿಕ್ಷಕರದ್ದು ಎಂದರು.

ಸಮಾರಂಭದಲ್ಲಿ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಆಡಳಿತ ಕಮಿಟಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ದರ್ಗಾ ಪ್ರಧಾನ ಕಾರ್ಯದರ್ಶಿ ಮತ್ತು ರಹ್ಮಾನಿಯಾ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಜೆ.ಹೆಚ್ ಅಬೂಬಕ್ಕರ್ ಸಿದ್ದಿಕ್, ಕೋಶಾಧಿಕಾರಿ ಡಿ.ವೈ ಉಮರ್, ಉಪಾಧ್ಯಕ್ಷ ಬಶೀರ್ ಅಹ್ಸನಿ, ಸದಸ್ಯರಾದ ಬದ್ರುದ್ದೀನ್, ಮುಹಮ್ಮದ್ ಸಖಾಫಿ, ಮುಹಮ್ಮದ್ ಹನೀಫ್, ಸಲೀಂ ಕೇರಿಮಾರ್, ಯಾಕೂಬ್ ಎನ್.ಎಮ್, ವೈಸ್ ಚೇರ್ಮನ್ ಮುಹಮ್ಮದ್ ಕಮಾಲ್, ಸಂಚಾಲಕ ಉಮರುಲ್ ಅಶ್ಫಾಕ್, ಫೈನಾನ್ಷಿಯಲ್ ಸೆಕ್ರೆಟರಿ ಆಸಿಫ್ ಜೆ.ಹೆಚ್. ಸಂಸ್ಥೆಯ ಸದರ್ ಉಸ್ತಾದ್ ಅಬ್ದುಲ್ ಅಝೀಝ್ ಸಖಾಫಿ ಪರಪ್ಪು, ಕೋರ್ಡಿನೇಟರ್ ನವಾಝ್, ರಾಹ ಮದರಸ ಮುಖ್ಯ ಅಧ್ಯಾಪಕ ಸಿನಾನ್ ಉಸ್ತಾದ್ ಮತ್ತು ಸಿಬ್ಬಂದಿಗಳು ಹಾಗೂ ಜಮಾಅತ್ ಕಮಿಟಿಯ ಇತರ ಸದಸ್ಯರು, ಶಾಲಾ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷಪಟ್ಟರು. ಶಾಲೆಗೆ ಹೊಸದಾಗಿ ಸೇರ್ಪಡೆಯಾದ ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಷಕರು ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಗಣ್ಯರು, ಜಮಾಅತ್ ಕಮಿಟಿ ಸದಸ್ಯರು ಹಾಗೂ ಆಗಮಿಸಿದ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿತು. ಸಂಸ್ಥೆಯ ಸಹ ಅಧ್ಯಾಪಕಿ ರೋಸಮ್ಮ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ಮುಖ್ಯ ಶಿಕ್ಷಕಿ ಝೊಹರಾ ಸ್ವಾಗತಿಸಿ, ಸಹ ಶಿಕ್ಷಕಿಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸಿನಾನ್ ಉಸ್ತಾದ್ ಧನ್ಯವಾದವಿತ್ತರು.

Related posts

ಶ್ರೀ ಕ್ಷೇ.ಧ.ಗ್ರಾ.ಯೋ ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ್ ರೈ ಹೃದಯಾಘಾತದಿಂದ ನಿಧನ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ

Suddi Udaya

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ-2026ರ ಸಮಾರೋಪ

Suddi Udaya

ಉಜಿರೆ ಕ್ರೀಡಾ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ

Suddi Udaya

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Suddi Udaya

ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಾ. ಐ. ಶಶಿಕಾಂತ ಜೈನ್

Suddi Udaya
error: Content is protected !!