September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಲೆಫ್ಟಿನೆಂಟ್ ಕರ್ನಲ್ ವಿನೋಜ್ ಪಿ.ಜೆ. ಅವರಿಗೆ ಗೌರವ ಸಮರ್ಪಣೆ

ನೆಲ್ಯಾಡಿ: ಭಾರತೀಯ ಭೂಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಿರುವ ಉದನೆ ಪ್ಯಾರಿಷ್‌ನ ಪುತ್ತೆನ್‌ಪರಂಬಿಲ್ ಜೋಸೆಫ್ ಮತ್ತು ಮೇರಿ ದಂಪತಿಯ ಪುತ್ರ ಲೆ. ಕರ್ನಲ್ ವಿನೋಜ್ ಪಿ.ಜೆ. ಅವರನ್ನು ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

1995ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡ ವಿನೋಜ್ ಅವರು ಕ್ರೀಡಾ ಹಾಗೂ ಸೈನಿಕ ಸೇವೆಯಲ್ಲಿ ಗಮನಾರ್ಹ ಸಾಧನೆ ತೋರಿದ್ದು, 2011ರಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ನಂತರ ಕ್ಯಾಪ್ಟನ್, ಮೇಜರ್ ಹಾಗೂ 2024ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಿದರು. ಪ್ರಸ್ತುತ ಜಬಲ್ಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪುಣ್ಯಕ್ಷೇತ್ರದ ನಿರ್ದೇಶಕರಾದ ವಂದನೀಯ ಫಾ. ಷಾಜಿ ಮಾತ್ಯು, ಸೈನಿಕ ಸೇವೆಯು ದೇಶಸೇವೆಯ ಅತ್ಯಂತ ಮಹತ್ವಪೂರ್ಣ ಕ್ಷೇತ್ರವಾಗಿದ್ದು, ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸಶಸ್ತ್ರ ಪಡೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಮಾತೃವೇದಿಕೆ ಅಧ್ಯಕ್ಷೆ ಸುಜಾ ಜೇಮ್ಸ್, ಸಿಸ್ಟರ್ ಲಿಸ್ ಮಾತ್ಯು, ಯುವಜನ ಸಂಘದ ದಿಶಾ ಮತ್ತು ಜಿತು, ಕ್ರೆಡಿಟ್ ಯೂನಿಯನ್‌ನ ಶಿಬು ಹಾಗೂ ವಿನ್ಸೆಂಟ್ ಡಿ ಪೌಲ್ ಸಂಘದ ಸನ್ನಿ ಉಪಸ್ಥಿತರಿದ್ದರು. ಬೆರಿಲ್ ಕಾರ್ಯಕ್ರಮ ನಿರೂಪಿಸಿದರು.

Related posts

ಪಟ್ರಮೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ದೈವಗಳ ನೇಮೋತ್ಸವ: ತೋರಣ ಮೂಹೂರ್ತ, ಊರವರಿಂದ ಹೊರೆಕಾಣಿಕೆ ಸಮರ್ಪಣೆ

Suddi Udaya

ಕೃಷಿಕ ಕಲಾಯ ದಾಮೋದರ ಬಂಗೇರ ನಿಧನ

Suddi Udaya

ಬೆಳ್ತಂಗಡಿ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಕುಟುಂಬಸ್ಥರಿಗೆ ಮೆಸ್ಕಾಂ ಇಲಾಖೆಯ ಪರಿಹಾರದ ಚೆಕ್ ನ್ನು ಶಾಸಕ ಹರೀಶ್ ಪೂಂಜರಿಂದ ಹಸ್ತಾಂತರ

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿಯ ನೂತನ ಅಧ್ಯಕ್ಷರಾಗಿ ಸುದರ್ಶನ್ ಶೆಟ್ಟಿ ನೇಮಕ

Suddi Udaya

ಅತ್ಯಮೂಲ್ಯ ಮತ ಚಲಾಯಿಸಿದ 106 ವರ್ಷದ ಅಜ್ಜಿ:

Suddi Udaya
error: Content is protected !!