September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಪೆರ್ನೆಯ ಯುವಕ ಯತೀಶ್ ಗೌಡ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ : ಕಳ್ಳತನ ಶಂಕೆ ಆರೋಪ ಹೊರಿಸಿ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಬಳಿಕ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ ಶ್ರೀದೇವಿ ಕಾಂಪ್ಲೆಕ್ಸ್ ಆವರಣದಲ್ಲಿ ಜೂನ್.1 ರಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ಪರ್ನೆ ನಿವಾಸಿ ಯತೀಶ್ ಗೌಡ(33) ಎಂಬಾತನ ಮೇಲೆ ಕಳ್ಳತನ ಶಂಕೆ ಆರೋಪ ಹೊರಿಸಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿ ಯಶೋಧರ(35), ಕಡಬ ತಾಲೂಕಿನ ಚಾರ್ವಾಕ ನಿವಾಸಿ ಮೋಹನ್ (30) , ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿ ಇಬ್ರಾಹಿಂ(54) ಸೇರಿಕೊಂಡು ಹಗ್ಗದಿಂದ ಕಟ್ಟಿಹಾಕಿ ಬಳಿಕ ಹಲ್ಲೆ ನಡೆಸಿದ ಪರಿಣಾಮದಿಂದ ಸ್ಥಳದಲ್ಲಿಯೇ ಕೊಲೆಯಾಗಿದ್ದಾನೆ.

ಘಟನೆ ಬಗ್ಗೆ ಯತೀಶ್ ಗೌಡ ಸಹೋದರ ನಿತಿನ್ ಮೂವರು ಆರೋಪಿಗಳು ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಜೂನ್1 ರಂದು ರಾತ್ರಿ ಬಂಧಿಸಿದ್ದಾರೆ.

ಕೊಲೆ ಆರೋಪಿಗಳ ವಿಚಾರಣೆ ನಡೆಸಿ ಬಂಧಿಸಿ ಜೂ.2 ರಂದು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿ ಕೊಲೆ ಮಾಡಲು ಬಳಸಿದ ಒಂದು ಪಿವಿಸಿ ಪೈಪ್, ಒಂದು ಹಗ್ಗವನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಸಿಸಿಕ್ಯಾಮರ ನೀಡಿದ ಸುಳಿವು: ಅನುಮಾನಸ್ಪದವಾಗಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ 112 ಪೊಲೀಸರು ಮತ್ತು ಬೆಳ್ತಂಗಡಿ ಪೊಲೀಸರಿಗೂ ಯಾವುದೇ ಅನುಮಾನ ಬಂದಿರಲ್ಲಿಲ್ಲ ಯಾಕೆಂದರೆ ಮೇಲ್ನೋಟಕ್ಕೆ ಯತೀಶ್ ದೇಹದಲ್ಲಿ ಯಾವುದೇ ರಕ್ತ ಬಂದ ಗಾಯಗಳು ಕಂಡು ಬಂದಿಲ್ಲ, ಆದ್ರೆ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಮತ್ತು ತಂಡ ಸ್ಥಳೀಯ ಅಂಗಡಿಗಳ ಸಿಸಿಕ್ಯಾಮರ ಪರಿಶೀಲನೆ ನಡೆಸಿದಾಗ ಹಲ್ಲೆ ಮಾಡುವ ದೃಶ್ಯ ಒಂದು ಪತ್ತೆಯಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದು ಮೂವರು ಆರೋಪಿಗಳು ಜೈಲುಪಾಲಾಗಿದ್ದಾರೆ.

Related posts

ಕಳೆಂಜ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ಶಿರ್ಲಾಲು ಸ್ವಾಮಿ ವಿವೇಕಾನಂದ ಯುವಕ ಮಂಡಲದ ಮುಂದಾಳತ್ವದಲ್ಲಿ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಉಪನ್ಯಾಸಕ ನಂದಕುಮಾರ್ ಚಿಕಿತ್ಸೆಗೆ ಸ್ಪಂದಿಸದೆ ನಿಧನ

Suddi Udaya

ಕಳೆಂಜ: ಗ್ರಾಮಾಭ್ಯುದಯ ಅನುಷ್ಠಾನ ಸಮಿತಿ ಮತ್ತು ಶಿಬರಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರೋವರ್ಸ್ – ರೇಂಜರ್ಸ್ ಘಟಕ ಹಾಗೂ ವಾಣಿಜ್ಯ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!