September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮಂಜುನಾಥ ಜಿ ರವರಿಗೆ ಬೀಳ್ಕೊಡುಗೆ ಸಮಾರಂಭ

ಸವಣಾಲು: ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮಂಜುನಾಥ ಜಿ ಇವರಿಗೆ ಶಾಲಾಡಳಿತ ಸಮಿತಿ, ಶಾಲಾಭಿವೃದ್ಧಿ ಸಮಿತಿ, ತಾಯಂದಿರ ಸಮಿತಿ, ಹಿರಿಯ ವಿದ್ಯಾರ್ಥಿಗಳು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು, ಊರ ಪರವೂರ ವಿದ್ಯಾಭಿಮಾನಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭವು ನಡೆಯಿತು.

ದಯಾನಂದ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಲಯನ್ ಸಂಸ್ಥೆಯ ಬೆಳ್ತಂಗಡಿ ಕ್ಲಬ್ ನ ಅಧ್ಯಕ್ಷ ಲ| ಮುರಳಿ ಬಲಿಪ ಇವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಕೆ ಇವರು ನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನಿಸಿ ಅಭಿನಂದಿಸಿ ಗೌರವ ಸಮರ್ಪಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ ಜಿ ವಿದ್ಯಾನಿಧಿ ಸ್ಕ್ಯಾನರ್ ಅನಾವರಣ ಗೊಳಿಸಿ ಗೂಗಲ್ ಪೇ ಯಲ್ಲಿ ರೂ 10000/-ಕಳಿಸುವುದರ ಮೂಲಕ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ ದೇವಸ ಇವರು ಸಂದರ್ಭೋಚಿತವಾಗಿ ಮಾತನಾಡಿ ನಿವೃತ್ತ ಶಿಕ್ಷಕರಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿದ್ಯಾಭಿಮಾನಿ ರಂಗನಾಥ ರಾವ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಭಂಡಾರಿ, ತಾಯಂದಿರ ಸಮಿತಿಯ ಅಧ್ಯಕ್ಷೆ ಪ್ರೇಮಾ, ಬೆಳ್ತಂಗಡಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಮಂಜುನಾಥ್ ಜಿ ಸನ್ಮಾನ ಸ್ವೀಕರಿಸಿ ಮಾತನಾಡಿ ತನ್ನ ಮೂರು ಕಾಲು ದಶಕಗಳ ಕಾಲದ ವೃತ್ತಿ ಜೀವನದ ಸೇವೆಯ ಅನುಭವವನ್ನು ಸಮಸ್ತ ವಿದ್ಯಾಭಿಮಾನಿಗಳ ಮುಂದೆ ಹಂಚಿಕೊಂಡು. ಸಹಕರಿಸಿ ಎಲ್ಲರಿಗೂ ಹೃದಯ ಸ್ಪರ್ಶಿ ಕೃತಜ್ಞತೆಯನ್ನು ಸಲ್ಲಿಸಿದರು.

ಶಾಲಾಡಳಿತ ಸಮಿತಿಯ ಸದಸ್ಯೆ ಮಮತಾ ರವರು ನೆಚ್ಚಿನ ಗುರುವಿಗೆ ಅರ್ಥವತ್ತಾದ ಅಭಿನಂದನಾ ಭಾಷಣ ಮಾಡುವುದರ ಮೂಲಕ ಗೌರವ ಸಮರ್ಪಿಸಿದರು. ನಿಕಟಪೂರ್ವ ಆಡಳಿತ ಸಮಿತಿಯ ಸದಸ್ಯ ಸುಬ್ರಹ್ಮಣ್ಯ ಭಟ್, ವಿದ್ಯಾಭಿಮಾನಿ ರವಿಚಂದ್ರ ಶೆಟ್ಟಿ (ಆರ್ಯನ್), ನಿವೃತ್ತ ಶಿಕ್ಷಕ ಮಂಜುನಾಥ ಜಿ ರವರ ಕುಟುಂಬಸ್ಥರು, ಊರ ಪರವೂರ ಸಂಘ ಸಂಸ್ಥೆಗಳ ಅನೇಕ ಮಿತ್ರರು, ವಿದ್ಯಾಭಿಮಾನಿಗಳು , ಶಾಲೆಯ ಹಿರಿಯ ವಿದ್ಯಾರ್ಥಿ ರಾಜೇಶ್ ಕೆ , ಆಗಮಿಸಿ ಶುಭವನ್ನು ಹಾರೈಸಿದರು.


ಶಾಲಾಡಳಿತ ಸಮಿತಿಯ ಕಾರ್ಯದರ್ಶಿ ಕೂಸಪ್ಪ ಗೌಡ ಪ್ರಾಸ್ತಾವಿಕ ನುಡಿಗಳ್ನಾಡಿ ಸ್ವಾಗತಿಸಿದರು. ಶಿಕ್ಷಕಿ ಕು|ಸುಷ್ಮಾ ಇವರು ಸನ್ಮಾನ ಪತ್ರವನ್ನು ವಾಚಿಸಿದರು. ಶಿಕ್ಷಕಿ ಕು| ವೈಶಾಲಿ ಇವರು ಗಣ್ಯರಿಂದ ಬಂದ ಸಂದೇಶಗಳನ್ನು ವಾಚಿಸಿದರು. ವಿದ್ಯಾರ್ಥಿಗಳಾದ ತೇಜಸ್ ಭಟ್, ಆಯಿಷಾ ಮೈಮೂನ ಇವರು ಗುರುಗಳ ಕುರಿತು ಮಾತನಾಡಿದರು. ರಾಜೇಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ ಭಂಡಾರಿ ಧನ್ಯವಾದವಿತ್ತರು.

Related posts

ತೋಟತ್ತಾಡಿ: ಗೋಳಿತ್ತಡಿ ನಿವಾಸಿ ಬಾಬು ಗೌಡ ನಿಧನ

Suddi Udaya

ವಿಕಲಚೇತನ ಯುವಕನ ಸ್ವಾವಲಂಬನೆಯ ಹೆಜ್ಜೆ: ರಾಕೇಶ್ ಹೆಗ್ಡೆ ಅವರಿಂದ ಚಿರು ಟೀಮ್’ ಜರ್ಸಿ ಅನಾವರಣ

Suddi Udaya

ನಾರಾವಿ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಬೆಸ್ಟ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಕಿಯಿಲ್ಲದ ಅಡುಗೆ ಸ್ಪರ್ಧೆ

Suddi Udaya

ಅಳದಂಗಡಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

Suddi Udaya

ಶ್ರೀ ಧ.ಮಂ.ಅನುದಾನಿತ ಸಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಚುನಾವಣೆ

Suddi Udaya
error: Content is protected !!