September 6, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ರ‍್ಯಾಂಕ್ ಮೇಲೆ ರ‍್ಯಾಂಕ್ : ಅಕಾಡೆಮಿಕ್ ವರ್ಷವಿಡೀ ಸಾಧನೆಗಳ ಪರ್ವ: ಸಿಇಟಿ ಯಲ್ಲಿ ಎಕ್ಸೆಲ್ ಗುರುವಾಯನಕೆರೆ ಸರ್ವ ಶ್ರೇಷ್ಠ ಸಾಧನೆ

ಗುರುವಾಯನಕೆರೆ: ಇತ್ತೀಚೆಗೆ ಪ್ರಕಟಗೊಂಡ ಬಿಎಸ್ಸಿ ಅಗ್ರಿ ಪ್ರಾಕ್ಟಿಕಲ್ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದ, ರಾಷ್ಟ್ರ ಮಟ್ಟದ ಜೆಇಇ ಪರಿಕ್ಷೆಯಲ್ಲಿ ಅಪೂರ್ವ ದಾಖಲೆ ನಿರ್ಮಿಸಿದ, ಪಿಯು ಬೋರ್ಡ್ ಪರೀಕ್ಷೆಯಲ್ಲಿಯೂ ಪೂರ್ಣಾಂಕದ ಸಾಧನೆ ಮಾಡಿರುವ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಇದೀಗ
ಕರ್ನಾಟಕ ರಾಜ್ಯ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಇದರಲ್ಲೂ ಅಪೂರ್ವ ಸಾಧನೆ ಮಾಡಿದ್ದಾರೆ.

ಈ ವರ್ಷವು ಎಕ್ಸೆಲ್ ನ ವಿದ್ಯಾರ್ಥಿಗಳಾದ ಆನಂದ್ ರೆಡ್ಡಿ -21,ಚಿನ್ಮಯ್ ಪ್ರಶಾಂತ್ – 28,ರೋಹಿತ್ ಎಮ್ – 32,
ವಿಶ್ವಾಸ್ ಎಂ ಅಸುಂಡಿ – 29,ಅಕ್ಷಯ್ ಎ – 41,ಕೌಶಲ್ ಕುಲಾಲ್ – 31,ಫಾತಿಮಾ ರಾಯೀಜಾ- 54, ಮೌರ್ಯ ವೈ ಡಿ – 75, ಶಿಲ್ಪಿತಾ ಹೆಚ್ ಎಸ್ – 86, ಸಮ್ಯಕ್ ವಿನಯ್ – 97, ಗಗನ್ ದೀಪ್ ಎಮ್ – 99, ಮದನ್ ಕುಮಾರ್ ಎಸ್ ಟಿ-107, ತೇಜಲ್ ವಿ – 111, ಸ್ವಸ್ತಿಕ್ ಎಮ್ ಜೈನ್-142, ನಿಶ್ಚಯ್ ಎನ್ – 150,ಪರೇಶ್ ಪಿ – 182, ಕೆ ಕೆ ಸಾರ್ವಿಕ – 185,ದರ್ಶನ್ ಹೆಚ್ – 231, ನಿಶ್ಚಿತ ಸಿ -233, ತನ್ಮಯಿ ಕೃಷ್ಣ -282, ಚಿನ್ಮಯ್ ಎಲ್ ಆರ್ ಗೌಡ – 317, ಚಂದ್ರಶೇಖರ್ – 417, ತಜ್ಞ- 493 ಗಳನ್ನು ಪಡೆದು ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ನಾಡಿನ ಶ್ರೇಷ್ಠ ವಿದ್ಯಾಸಂಸ್ಥೆಗಳಲ್ಲಿ ಎಕ್ಸೆಲ್ ಕಾಲೇಜು ಮೊದಲ ನೂರು ಸ್ಥಾನಗಳಲ್ಲಿ 31 ರ‍್ಯಾಂಕ್, 500ರೊಳಗೆ 87 ರ‍್ಯಾಂಕ್ , ಒಂದು ಸಾವಿರದೊಳಗೆ 186 ರ‍್ಯಾಂಕ್, 2000 ರ‍್ಯಾಂಕ್ ನೊಳಗೆ 268 ಹಾಗೂ 5000 ರೊಳಗೆ 514 ರ‍್ಯಾಂಕ್ ಗಳನ್ನು ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಪಡೆದು ಕೊಂಡಿದ್ದಾರೆ.
ಈ ಬಾರಿಯ ಸಿ ಎಸ್ ಎಕ್ಸಾಂ ನಲ್ಲೂ ಎಕ್ಸೆಲ್ ನ ವಿದ್ಯಾರ್ಥಿ ಪ್ರಥಮ ಸ್ಥಾನ, ಎನ್ ಡಿ ಎ ಪರೀಕ್ಷೆಯಲ್ಲಿ 12 ವಿದ್ಯಾರ್ಥಿಗಳು ಆಯ್ಕೆಯಾದುದನ್ನು ನೆನಪಿಸಿಕೊಳ್ಳಬೇಕು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಎಕ್ಸೆಲ್ ಶಕ್ತಿ ನೀಡಿದೆ: ಸುಮಂತ್ ಕುಮಾರ್ ಜೈನ್

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾರಂಭದ ದಿನಗಳಿಂದಲೂ ಪ್ರತಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡುತ್ತಾ ಬರುತ್ತಿದ್ದು ಶೈಕ್ಷಣಿಕ ಸಾಧನೆಗೆ ಹಿಡಿದ ಕೈಕನ್ನಡಿಯಾಗಿದೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾನ ಪೊನ್ನಮ್ಮ 600 ಕ್ಕೆ 600ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆಯಲ್ಲಿ ಬುದ್ಧಿವಂತರ ಜಿಲ್ಲೆಯಾದ ನಮ್ಮ ಜಿಲ್ಲೆಗೆ ಪ್ರಥಮ ಸ್ಥಾನ, ಸಿಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್, 12 ವಿದ್ಯಾರ್ಥಿಗಳ ಎನ್ ಡಿ ಎ ಆಯ್ಕೆ,ಹೀಗೆ ಹಲವು ಸಾಧನೆಗಳ ನಡುವೆ ಈ ಬಾರಿಯು ಸಿಇಟಿ ಪರೀಕ್ಷೆಯಲ್ಲಿ ಅತ್ಯಧಿಕ ವಿದ್ಯಾರ್ಥಿಗಳು ಅತ್ಯುನ್ನತ ರ‍್ಯಾಂಕ್ ನೊಂದಿಗೆ ಸರ್ವಶ್ರೇಷ್ಠ ಸಾಧನೆ ಮಾಡಿದ್ದಾರೆ. ಸಿಇಟಿಯಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳು ಹಾಗೂ ನಮ್ಮ ಪರಿಣಿತ ಹಾಗೂ ಅನುಭವಿ ಬೋಧಕ ವೃಂದಕ್ಕೆ ವಂದನೆಗಳು ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾದ ಸುಮಂತ್ ಕುಮಾರ್ ಜೈನ್ ಪ್ರತಿಕ್ರಿಯಿಸಿದರು.

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ನಿವೃತ್ತರಾದ ಪಿಲಾತಬೆಟ್ಟು ಸಂತ ಜೋಸೆಫರ ಅ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಸಿ| ಮೋಂತಿ ಡಿ’ಸೋಜಾ ರವರ ವಿದಾಯ ಸಮಾರಂಭ

Suddi Udaya

ಎಸ್.ಡಿ.ಎಂ. ಕಾಲೇಜಿನಲ್ಲಿ ಭಗವದ್ಗೀತೆ ಮತ್ತು ಶಿಕ್ಷಣದ ಬಗ್ಗೆ ವೀಣಾ ಬನ್ನಂಜೆ ರವರಿಂದ ವಿಶೇಷ ಉಪನ್ಯಾಸ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಮೂಡಿಗೆರೆ ತಾಲೂಕಿಗೆ ಎಳನೀರಿನ ಅಧಿತಿ ಪಿ ಜೈನ್ ಪ್ರಥಮ

Suddi Udaya

ಗುರುವಾಯನಕೆರೆ:ಎಕ್ಸೆಲ್ ಕಾಲೇಜಿನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್ : ಶೈಕ್ಷಣಿಕ ಸಾಧನೆಗಳ ಮೂಲಕ ರಾಜ್ಯದಲ್ಲಿ ಗುರುತಿಸ್ಪಟ್ಟ ಕಾಲೇಜು ಎಕ್ಸೆಲ್

Suddi Udaya

ಉಜಿರೆ ಶ್ರೀ ಧ.ಮಂ.ವಸತಿ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ.

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!