September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡಂಗಡಿ ಓಡೀಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಚಿಕ್ಕಮೇಳ ತಿರುಗಾಟ ಆರಂಭ

ಪಡoಗಡಿ: ಕರಾವಳಿ ಕರ್ನಾಟಕದ ಹೆಮ್ಮೆಯ ಸಾಂಪ್ರದಾಯಿಕ ಕಲಾಪ್ರಕಾರವಾದ ಯಕ್ಷಗಾನವು ಸಾಮಾನ್ಯವಾಗಿ ದೀಪಾವಳಿಯ ಶುಭ ಮುಹೂರ್ತದಿಂದ ಆರಂಭಗೊಂಡು ಪತ್ತನಾಜೆಯವರೆಗೆ ಕರಾವಳಿಯಾದ್ಯಂತ ಅತ್ಯಂತ ವೈಭವದಿಂದ ಜರುಗುತ್ತದೆ. ಆದರೆ, ಮಳೆಗಾಲದ ದಿನಗಳಲ್ಲಿ ತಿರುಗಾಟವಿಲ್ಲದೆ ಕಲಾ ಸೇವೆಯಿಂದ ವಂಚಿತರಾಗುವ ಹಾಗೂ ಜೀವನೋಪಾಯಕ್ಕೆ ಸಂಕಷ್ಟ ಎದುರಿಸುವ ಯಕ್ಷಗಾನ ಕಲಾವಿದರ ನೆರವಿಗಾಗಿ ಮತ್ತು ಕಲೆಯ ನಿರಂತರತೆಗಾಗಿ ರೂಢಿಗೆ ಬಂದ ಅಪೂರ್ವ ಆಚರಣೆಯೇ ‘ಚಿಕ್ಕಮೇಳ’. ಇದರೊಂದಿಗೆ, ಸುತ್ತಮುತ್ತಲಿನ ಪರಿಸರದಲ್ಲಿ ಸುಳಿದಾಡುವ ಕಣ್ಣಿಗೆ ಕಾಣದ ಕ್ಷುದ್ರ ಹಾಗೂ ದುಷ್ಟ ಶಕ್ತಿಗಳು, ಯಕ್ಷಗಾನದ ಪವಿತ್ರ ಚೆಂಡೆ-ಮದ್ದಲೆಯ ಗಂಭೀರ ನಾದಕ್ಕೆ ಧಾವಿಸಿ ಓಡಿಹೋಗುತ್ತವೆ ಎನ್ನುವುದು ಸನಾತನ ಧರ್ಮದ ಅಚಲವಾದ ನಂಬಿಕೆಯಾಗಿದೆ.

ಈ ಪವಿತ್ರ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಓಡೀಲು ಶ್ರೀ ಮಹಾಲಿಂಗೇಶ್ವರ ಪ್ರಸಾದಿತ ಚಿಕ್ಕಮೇಳವು ಸನ್ನಿಧಾನದಲ್ಲಿ ಜೂ 5 ರoದು ಅತ್ಯಂತ ಭಕ್ತಿ-ಶ್ರದ್ಧೆಗಳೊಂದಿಗೆ ಕ್ಷೇತ್ರದ ಪ್ರಧಾನ ಅರ್ಚಕರಾದ ರಘುರಾಮ್ ಭಟ್ ಮಠ ಅವರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಮನೆಮನೆಗಳಿಗೆ ಕಲಾ ದೇವತೆಯ ಪ್ರಸಾದ ರೂಪದಲ್ಲಿ ತೆರಳಿ, ಭಕ್ತರ ಮನೆಬಾಗಿಲಲ್ಲಿ ಕಲೆಯ ಪ್ರದರ್ಶನವನ್ನು ನೀಡಲು ಕಲಾವಿದರು ಸಜ್ಜಾಗಿದ್ದಾರೆ.

ಖ್ಯಾತ ಯಕ್ಷಗಾನ ಕಲಾವಿದರಾದ ಕುಸುಮೋಧರ್ ಅವರ ಸಮರ್ಥ ನೇತೃತ್ವದಲ್ಲಿ ಈ ಚಿಕ್ಕಮೇಳವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿದೆ.
​ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು, ಸಮಿತಿಯ ಸದಸ್ಯರಾದ ಶ್ರೀಮತಿ ಶಾಂಭವಿ ಪಿ. ಬಂಗೇರ ಬೆಳ್ತಂಗಡಿ .ಶ್ರೀ ಸತೀಶ್ ಬಂಗೇರ ಕುವೆಟ್ಟು, ಭಜನಾ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕಿನ್ನಿಗೋಳಿ. ರಾಘವೇಂದ್ರ ಭಟ್ ಮಠ. ಕ್ರಷ್ಣ ಭಟ್ ನೇರಳಕಟ್ಟೆ. ಅನoತ ಎಸ್ ಇರ್ವತ್ರಾಯ. ತoಗೊಯಿ. ರಾಘವ ಪೂಜಾರಿ ನಾಳ. ಚoದ್ರಹಾಸ್ ಕೇದೆ. ನಾರಾಯಣ ಶೆಟ್ಟಿ ಪುರಿಪಟ್ಟ. ದಾಮೋದರ ಕುoದರ್ ಸಬರಬೈಲು. ಉಮೇಶ್ ಕುಮಾರ್. ಸದಾಶಿವ .ಸೇರಿದಂತೆ ಕಲಾಭಿಮಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದು ಕಲಾವಿದರನ್ನು ಹರಸಿ ಪ್ರೋತ್ಸಾಹಿಸಿದರು.

Related posts

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ “ಕೊಳಂಬೆ” ಕಿರುಚಿತ್ರ ನಿರ್ಮಾಣ: ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025, ‘ಕೊಳಂಬೆ’ ಬೆಸ್ಟ್ ಕಿರುಚಿತ್ರ ಡಬಲ್ ಪ್ರಶಸ್ತಿ,ಅನೀಶ್ ಅಮೀನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Suddi Udaya

ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪಿಲ್ಯ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೆ-ಬ್ರಹ್ಮರಥೋತ್ಸವ

Suddi Udaya

ಎಕ್ಸೆಲ್ ಪಿಯು ಕಾಲೇಜಿಗೆ ಪಿನಾಕಲ್ ನಲ್ಲಿ ಚಾಂಪಿಯನ್ ಶಿಪ್

Suddi Udaya

ರಕ್ತೇಶ್ವರಿ ಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

Suddi Udaya
error: Content is protected !!