September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಅಕ್ರಮ ಮರಳು ದಾಸ್ತಾನು ಅಡ್ಡೆ ಪತ್ತೆಹಚ್ಚಿದ ವೇಣೂರು ಪೊಲೀಸರು

ಬೆಳ್ತಂಗಡಿ : ವೇಣೂರು ಠಾಣಾ ವ್ಯಾಪ್ತಿಯ ಆರಂಬೋಡಿ ನಿಡ್ಯಾಲಬೆಟ್ಟು ಎಂಬಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ಸುಮಾರು 12 ಟಿಪ್ಪರ್ ನಷ್ಟು ಮರಳನ್ನು ವೇಣೂರು ಪೊಲೀಸರು ಪತ್ತೆಹಚ್ಚಿದ್ದು ಪ್ರಕರಣ‌ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಸುಂದರ ಪೂಜಾರಿ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ನೇತೃತ್ವದ ತಂಡ ಜೂನ್.5 ರಂದು ದಾಳಿ ನಡೆಸಿದ್ದು ಅವರನ್ನು ವಿಚಾರಿಸಿದಾಗ ಮರಳನ್ನು ಸ್ಥಳೀಯರಾದ ದಿನೇಶ್ ಕುಲಾಲ್ ಎಂಬವರು ತಮ್ಮ ಟಿಪ್ಪರ್ KA-19-AA-3213 ರಲ್ಲಿ ಅಂಗರಕರಿಯದ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಮರಳನ್ನು ತಂದು ತನ್ನ ಜಾಗದಲ್ಲಿ ದಾಸ್ತಾನು ಇರಿಸಿರುವುದಾಗಿ ಇದನ್ನು ಮಾರಾಟಮಾಡಿ ಹಣ ಗಳಿಸುವ ಉದ್ದೇಶದಿಂದ ಮರಳನ್ನು ಶೇಖರಿಸಿರುವುದಾಗಿ ತಿಳಿಸಿದ್ದು ಅದರಂತೆ ವೇಣೂರು ಮರಳನ್ನು ಮುಟ್ಟುಗೋಲು ಹಾಕಿದ್ದಾರೆ.

ಮರಳಿನ ಅಂದಾಜು ಮೌಲ್ಯ ರೂ 90 ಸಾವಿರ ಎಂದು ಅಂದಾಜಿಸಲಾಗಿದೆ ವೇಣೂರು ಠಾಣೆಯಲ್ಲಿ ಕಲಂ: Us 303(2) BNS ಮತ್ತು ಕಲಂ: 42 ̧ 43 ̧ 44 KARNATAKA MINOR MINERAL CONSISTENT RULE 1994 ಮತ್ತು ಕಲಂ: 4(1),4(1A),21(1) (1A) MMRD Act 1957 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ನಲ್ಲಿ ಗುರುಜಯಂತಿ ಆಚರಣೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ: ಕಾಯ್ದಿರಿಸಿದ ತೀರ್ಪು-ಏ.29ರವರೆಗೆ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

Suddi Udaya

ಪುರುಷ ಮತ್ತು ಮಹಿಳಾ ವಿಭಾಗದ ನ್ಯಾಷನಲ್ ಚಾಂಪಿಯನ್ ಶಿಪ್ ಪಂದ್ಯಾಟ: ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ನಾವೂರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ನಲ್ಲಿ ಆಷಾಡ (ಆಟಿ) ಮೆಗಾ ಡಿಸ್ಕೌಂಟ್ ಸೇಲ್: ಹೊಚ್ಚ ಹೊಸ ಸಂಗ್ರಹದೊಂದಿಗೆ 10% ರಿಂದ 50% ಪ್ರತಿ ಖರೀದಿಯ ಮೇಲೆ ಡಿಸ್ಕೌಂಟ್

Suddi Udaya

ತಾಲೂಕು ಮಟ್ಟದ ಫುಟ್ ಬಾಲ್ : ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯ ಪ್ರೌಢಶಾಲಾ ತಂಡ ದ್ವಿತೀಯ ಸ್ಥಾನ

Suddi Udaya
error: Content is protected !!