28.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುತ್ತಿಲ ಕಲಾಯ ಗುತ್ತುವಿನಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ ಮತ್ತು ಪುಸ್ತಕ ಪ್ರಸ್ತುತಿ ಹಾಗೂ ಸಾವಿರದ ಸಾಧಕರು ಕಾರ್ಯಕ್ರಮ

ಪುತ್ತಿಲ: ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ, ಬೆಳ್ತಂಗಡಿ ತಾಲೂಕು ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿ ಇದರ ಆಶ್ರಯದಲ್ಲಿ 200 ವರ್ಷಗಳಷ್ಟು ಹಳೆಯ ಪ್ರಸಿದ್ಧ ಗುತ್ತಿನ ಮನೆ ‘ಕಲಾಯ ಗುತ್ತು ‘ ಪುತ್ತಿಲದಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ ಮತ್ತು ಪುಸ್ತಕ ಪ್ರಸ್ತುತಿ ಸಮಾರಂಭ ಹಾಗೂ ಸಾವಿರದ ಸಾಧಕರು ಕಾರ್ಯಕ್ರಮದಲ್ಲಿ ಏಳು ಮಂದಿ ಮೌನ ಸಾಧಕರಿಗೆ ಮನೆ -ಮನದ ಸಮ್ಮಾನದ ಹೃದಯಸ್ಪರ್ಶಿ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಸಂಸ್ಮರಣಾ ಸಮಿತಿಯ ಅಧ್ಯಕ್ಷ ಸಂಪತ್ ಬಿ ಸುವರ್ಣರವರು ಮಂಜ ಬೈದ್ಯರ ಹೋರಾಟ, ಬಲಿದಾನದ ತ್ಯಾಗವನ್ನು ನೆನೆದು, ಅವರ ಪ್ರತಿಮೆ ಅನಾವರಣ ಆಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಮಂಜ ಬೈದ್ಯರ ಕುರಿತಾಗಿ ಹೊರತಂದ ಪುಸ್ತಕವನ್ನು ಸಭೆಗೆ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಮೌನ ಸಾಧಕರಾದ ಬಾಲಕೃಷ್ಣ ಶೆಟ್ಟಿ ಕುಂಡಡ್ಕ (ಸಮಾಜಸೇವೆ), ಶ್ರೀಮತಿ ವಿನೋದ ಪ್ರವೀಣ್ ಪೂಜಾರಿ ಕರ್ಲ (ನಾಟಿವೈದ್ಯೆ ), ಶಿವಪ್ಪ ಪರವ (ದೈವ ನರ್ತಕರು), ಚಿದಾನಂದ ಪೂಜಾರಿ ಕಲಾಯಗುತ್ತು ಮನೆ
ಯಜಮಾನ), ಸುರೇಶ್ ಪೂಜಾರಿ ಕಲಾಯ ( ಅಧ್ಯಕ್ಷರು, ವಿಘ್ನೇಶ್ವರ ಭಜನಾ ಮಂಡಳಿ,ಪುತ್ತಿಲ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ಮಾಜಿ ಅಧ್ಯಕ್ಷ ಪ್ರಸನ್ನ ಗೌಡ, ಸಂಜೀವ ಪೂಜಾರಿ ಕಲಾಯ , ವಿಶ್ವನಾಥ್ ಪೂಜಾರಿ ಕೇರ್ಯ ಗುತ್ತು, ವಿಶ್ವನಾಥ್ ಪೂಜಾರಿ ಕಲಾಯ , ನಾಣ್ಯಪ್ಪ ಪೂಜಾರಿ ಕಲಾಯ, ಉಮೇಶ್ ಪೂಜಾರಿ ಕಲಾಯ, ಸುರೇಶ್ ಕಲಾಯ , ಪಾರ್ಶ್ವನಾಥ ಪೂಜಾರಿ ಕಲಾಯ, ಪ್ರಭಾಕರ್ ಪೂಜಾರಿ ಕಲಾಯ ಗಣೇಶ ಪೂಜಾರಿ ಬೆದ್ರಾಡಿ ಮತ್ತು ಕಲಾಯಗುತ್ತಿನ ಕುಟುಂಬದವರು ಉಪಸ್ಥಿತರಿದ್ದರು. ವಿಕೇಶ ಮಾನ್ಯ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಸತೀಶ್ ಪೂಜಾರಿ ಕಲಾಯ ಗುತ್ತು ,ರೋಹಿತ್ ಕಲಾಯ ಸಹಕರಿಸಿದ್ಧರು.
ತಾಲೂಕು ಸಮಿತಿ ಸಂಚಾಲಕರಾದ ಶಶಿಧರ ಕಲ್ಮoಜ, ಬಾಲಕೃಷ್ಣ ಶೆಟ್ಟಿ ಉಜಿರೆ, ವಿಶ್ವನಾಥ ಪೂಜಾರಿ ಮಡoತ್ಯಾರು ಉಪಸ್ಥಿತರಿದ್ದರು.

Related posts

ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ಸದಾನಂದ ಮುಂಡಾಡಿ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಸಾರಿಗೆ ನಿಯಮಗಳ ಉಲ್ಲಂಘನೆಯ ಪ್ರಕರಣಗಳು : ಡಿ.12 ರ ಒಳಗೆ ದಂಡ ಕಟ್ಟಿದಲ್ಲಿ ಶೇ 50 ರಿಯಾಯಿತಿ

Suddi Udaya

ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ದಯಾನಂದ ನಾಯಕ್, ಪ್ರ. ಕಾರ್ಯದರ್ಶಿಯಾಗಿ ಸುಧಾಕರ್ ಪ್ರಭು ಆಯ್ಕೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಸೆ.21: ಕರಾಯ ವಿದ್ಯುತ್ ನಿಲುಗಡೆ

Suddi Udaya

ಆನ್ಲೈನ್ ರಸಪ್ರಶ್ನೆ ಸ್ಪರ್ಧೆ: ವೇಣೂರು ಸ.ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!