September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಕ್ಕಾರು ವಲಯ ಕಾಂಗ್ರೆಸ್ ಸಮಿತಿ ಸಭೆ

ತೆಕ್ಕಾರು ವಲಯ ಕಾಂಗ್ರೆಸ್ ಸಮಿತಿ ಸಭೆಯು ಜೂ.14ರಂದು ಬಾಜಾರು MT ಅದಂ ಮನೆ ಬಳಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ N H ಅಬ್ದುಲ್ ರಹಿಮಾನ್ ವಹಿಸಿ ಮಾತನಾಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ದ.ಕ. ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು ಹಾಗೂ ಗ್ರಾಮದ ಅಭಿವೃದ್ಧಿಯ ಬಗ್ಗೆ ಮಾತಾಡಿದರು.

ಸಭೆಯಲ್ಲಿ ಪಕ್ಷದ ಹಿರಿಯ ಬಿ.ಎಂ, ಹುಸೇನ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ MT ಅದಂ ಹಾಗೂ ಇಸ್ಮಾಯಿಲ್ ಸೀಮೆಗೋಳಿ, ತೆಕ್ಕಾರು ಕಿಸಾನ್ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ಸುಲೇಮಾನ್ ಬೈಲಮೇಲ್, ಸಮಿತಿಯ ಕಾರ್ಯದರ್ಶಿ I B ರಫೀಕ್ ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಫಾಳುಲ್ ತಾಲೂಕು ಯುವ ಕಾಂಗ್ರೆಸ್ ಸದಸ್ಯ ಸಿದ್ದಿಕ್ ಬೈಲ ಮೇಲು TK ಹುಸೇನ್. ಹೈದರ್ ಕೆಳಗಿನ ಹಿತ್ಲು TK ನಝೀರ್ ತೆಕ್ಕಾರು ಹಾಗೂ ಹಲವಾರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಅಭಿಮಾನಿ ಮಿತ್ರರು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಸಭೆಯಲ್ಲಿ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚೆಯನ್ನು ನಡೆಸಲಾಯಿತು. ತೆಕ್ಕಾರು ಗ್ರಾಮದ ಬಾಜಾರು ಜೋಡುಕಟ್ಟೆ ರಸ್ತೆ ಮತ್ತು ಸರಳಿಕಟ್ಟೆಯಿಂದ ಗೋವಿಂದರಗುಳಿ ರಸ್ತೆ ಅಭಿವೃದ್ಧಿಯ ಬಗ್ಗೆ ಚರ್ಚೆಯನ್ನು ಮಾಡಲಾಯಿತು. ಕಳೆದ 15 ವರ್ಷದಿಂದ ಯಾವುದೇ ರೀತಿಯ ರಸ್ತೆಯ ಅಭಿವೃದ್ಧಿ ಆಗಿರುವುದಿಲ್ಲ ಮುಂದಿನ ಮೂರು ತಿಂಗಳೊಳಗೆ ರಸ್ತೆಯ ಅಭಿವೃದ್ಧಿಯ ಕೆಲಸವನ್ನು ಕೆಪಿಸಿಸಿ ಅಧ್ಯಕ್ಷ ರಕ್ಷಿತ್ ಶಿವರಾಂ ಇವರ ನೇತೃತ್ವದಲ್ಲಿ ಮಾಡಿ ಕೊಡಬೇಕಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ತೆಕ್ಕಾರು ಭಾಗಕ್ಕೆ ಸರಕಾರಿ ಬಸ್ ಬರುವಂತೆ ಸಂಬಂಧ ಪಟ್ಟ ಇಲಾಖೆಗೆ ಗ್ರಾಮ ಸಮಿತಿಯ ವತಿಯಿಂದ ಹೋಗಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ KSRTC ಬಸ್ಸು ಬಗ್ಗೆ ಚರ್ಚೆಯನ್ನು ಮಾಡಲಾಯಿತು. ಸರಳಿಕಟ್ಟೆಯಲ್ಲಿ ಪದವಿಪೂರ್ವ ಕಾಲೇಜ್ ನಿರ್ಮಾಣ ಮಾಡುವಂತೆ ಸಂಬಂಧ ಪಟ್ಟ ಇಲಾಖೆಗೆ ಹೋಗಿ ಮಾತುಕತೆ ನಡೆಸಿ ಮುಂದಿನ ವರ್ಷ PUC ಕಾಲೇಜ್ ಮಾಡುವಂತೆ ತೀರ್ಮಾನಿಸಲಾಯಿತು. SIR ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಸಂಗ್ರಹಣೆ ಮಾಡಿ ಇಟ್ಟುಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ ಯುವತಿಯರು ಮತದಾನದ ಹಕ್ಕನ್ನು ಪಡೆಯಲು ಮತದಾರರ ನೋಂದಾವಣೆ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಎಲ್ಲಾ ಕಾರ್ಯಕರ್ತ ಮಿತ್ರರು ಹಾಗೂ ಹಿರಿಯರ ಸಲಹೆ ಸೂಚನೆ ಪಡೆದುಕೊಂಡು ಹಾಗೂ ಯುವಕರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸದೃಢವಾಗಿ ಕಟ್ಟಬೇಕಾಗಿದೆ ಎಂದು ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ NH ಅಬ್ದುಲ್ ರಹಿಮಾನ್ ಹೇಳಿದರು

ತೆಕ್ಕಾರು ಸಿಎ ಬ್ಯಾಂಕ್ ನಿರ್ದೇಶಕ ಎಸ್‌ಎಂಎಸ್‌ ಇಬ್ರಾಹಿಂ ಮುಸ್ಲಿಯರ್ ಸ್ವಾಗತಿಸಿದರು. ಸುಲೇಮಾನ್ ಬೈಲಮೇಲ್ ವಂದಿಸಿದರು.

Related posts

ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ ಜೈನ ಸಮಾಜದಿಂದ ತಹಶೀಲ್ದಾರರಿಗೆ ಮನವಿ

Suddi Udaya

ಉಜಿರೆ ಎಸ್.ಡಿ.ಎಂ ಪ.ಪೂ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಿಧನ

Suddi Udaya

ಕನ್ಯಾಡಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಅಂತರಾಷ್ಟ್ರೀಯ ಆಖಾಡ ಪರಿಷತ್ ನ ಅಧ್ಯಕ್ಷ ಹರಿಗಿರಿ ಮಹಾರಾಜ ಭೇಟಿ : ಅಯೋಧ್ಯೆಯ ಶಾಖಾಮಠದ ಭೂಮಿ ಪೂಜೆಗೆ ಆಹ್ವಾನ

Suddi Udaya

ಅಸ್ಸಯ್ಯದ್ ಕೂರತ್ ತಂಙಳ್ ನಿಧನಕ್ಕೆ ಅಬ್ದುಲ್ ಕರೀಮ್ ಗೇರುಕಟ್ಟೆ ಸಂತಾಪ

Suddi Udaya

ಮುಂಡೂರುಪಳಿಕೆ ಸುಗ್ಗಿ ಪುರುಷರ ಕೂಟದ ಸಮಿತಿ ರಚನೆ

Suddi Udaya
error: Content is protected !!