September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ ಸ.ಉ.ಪ್ರಾ. ಶಾಲೆಯಲ್ಲಿ ದಾನಿಗಳಿಂದ ಉಚಿತ ಬ್ಯಾಗ್ ವಿತರಣೆ

ನಾರಾವಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ , ದಾನಿಗಳಿಂದ ಉಚಿತವಾಗಿ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು.

ಶ್ರೀಮತಿ ಲಕ್ಷ್ಮಿ ಪ್ರಶಾಂತ್ ಕಿಣಿಯವರು ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದುಕೊಂಡು ಈಗ ಬೆಂಗಳೂರಿನಲ್ಲಿ ಉತ್ತಮ ಉದ್ಯೋಗವನ್ನು ಪಡೆದು ಅಲ್ಲಿಯೇ ನೆಲೆಸಿದ್ದು ತನ್ನ ಹುಟ್ಟೂರಿನಲ್ಲಿ ಕಲಿತ ಶಾಲೆಯನ್ನು ನೆನಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಮಾರು ಒಂದು ಲಕ್ಷ ಮೌಲ್ಯದ ಉತ್ತಮ ಗುಣಮಟ್ಟದ ಬ್ಯಾಗನ್ನು ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಕುಟುಂಬ ಸಮೇತರಾಗಿ ಆಗಮಿಸಿ ವಿತರಿಸಿದರು.

ಶಾಲಾ ಅಭಿವೃದ್ಧಿ ಸಮಿತಿಯವರು ಅವರನ್ನು ಗೌರವದಿಂದ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅನ್ವರ್ ವಹಿಸಿದ್ದರು.ಅತಿಥಿಗಳಾಗಿ ಉದಯಕುಮಾರ್ ಹೆಗ್ಡೆ, ಪ್ರಶಾಂತ್ ಕಿಣಿ, ಶ್ರೀಮತಿ ಲಕ್ಷ್ಮೀ ಪ್ರಶಾಂತ್ ಕಿಣೆ, ಸೂರ್ಯನಾರಾಯಣ ಪೈ, ಶ್ರೀಮತಿ ದೀಪ, ಸುಧಾಕರ್ ನಾಯಕ್, ವಿನಯ ಹೆಗ್ಡೆ ಹಳೆ ವಿದ್ಯಾರ್ಥಿ, ಜನ ಸೇವಾ ಟ್ರಸ್ಟ್ ಅಧ್ಯಕ್ಷರು ಅಭಿಜಿತ್, ಹರ್ಷಿತ್ , ಶಾಲೆಗೆ ಟ್ಯೂಬ್ ಲೈಟ್ ನೀಡಿದ ದಾನಿಗಳು ಪ್ರಭಾಕರ್, ನಿವೃತ್ತ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರೇಮಕುಮಾರಿ ಪಿ . ನಿವೃತ್ತ ಶಿಕ್ಷಕಿಯವರು ಉದ್ಘಾಟಿಸಿದರು. ಮುಖ್ಯ ಶಿಕ್ಷಕರು ಸುಶೀಲ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕಿ ಶಿಲ್ಪ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಮತಾ.ಬಿ. ಧನ್ಯವಾದ ಕೋರಿದರು.

Related posts

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸುಗಮ ಸಂಚಾರಕ್ಕಾಗಿ ಆರಂಭಗೊಂಡ “ಪಲ್ಲಕ್ಕಿ” ನೂತನ ಬಸ್ ಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ನಾವೂರು: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಹಲವು ರ್‍ಯಾಂಕ್ ಗಳು

Suddi Udaya

ಕೃಷ್ಣಪ್ಪ ಪೂಜಾರಿಯವರಿಗೆ ಪಿತಾಂಬರ ಹೇರಾಜೆಯವರಿಂದ ಗೌರವ

Suddi Udaya

ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನ ಕಛೇರಿ ಸಿಬ್ಬಂದಿ ವಿಜಯ ಕುಮಾರಿ ರವರಿಗೆ ಬೀಳ್ಕೊಡುಗೆ

Suddi Udaya

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಿಳಾ ವೇದಿಕೆಯಿಂದ ಆಟಿಕೂಟ ಆಚರಣೆ

Suddi Udaya
error: Content is protected !!