24.7 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಅಗ್ರಿಲೀಫ್‌ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ – ಉದ್ಯೋಗಿಗಳಿಗೆ ಏಥರ್‌ ದ್ವಿಚಕ್ರ ವಾಹನ ಮತ್ತು ವಾಷಿಂಗ್‌ ಮೆಷೀನ್‌ ವಿತರಣೆ

ನಿಡ್ಲೆ: ಅಗ್ರಿಲೀಫ್ ಸಂಸ್ಥೆಯು ಜೂನ್ 18, 2026ರಂದು ಅತ್ಯುತ್ತಮ ಸಾಧನೆಗೈದ ಪ್ರತಿಭಾನ್ವಿತ ಉದ್ಯೋಗಿಗಳಿಗೆ ಪ್ರಶಸ್ತಿಯಾಗಿ ಏಥರ್‌ ದ್ವಿಚಕ್ರ ವಾಹನ ಮತ್ತು ವಾಷಿಂಗ್‌ ಮೆಷೀನ್‌ಗಳನ್ನು ಸಂಸ್ಥೆಯ ಸ್ಥಾಪಕ ಅವಿನಾಶ್‌ ರಾವ್‌ ಮತ್ತು ಸಹ ಸ್ಥಾಪಕ ಅತಿಶಯ್‌ ಎಂ ಜೈನ್‌ರವರು ವಿತರಿಸಿದರು.

ಎಲ್ಲಾ ಉದ್ಯೋಗಿಗನ್ನು ಉದ್ದೇಶಿಸಿ ಮಾತನಾಡಿದ ಅವಿನಾಶ್‌ ರಾವ್‌, ಅಗ್ರಿಲೀಫ್‌ ಹುಟ್ಟಿನಿಂದ ಬೆಳೆದು ಬಂದ ದಾರಿಯಲ್ಲಿನ ದಿನಗಳನ್ನು ನೆನೆಪಿಸಿಕೊಂಡರು ಉದ್ಯೋಗಿಗಳ ಸಮರ್ಪಿತ ಸೇವೆ ಮತ್ತು ನಮ್ಮದೇ ಸಂಸ್ಥೆ ಎಂಬ ಅಭಿಮಾನದಿಂದ ದುಡಿಯುವ ತಂಡದ ಪರಿಶ್ರಮದಿಂದಲೇ ಸಂಸ್ಥೆ ಇನ್ನಷ್ಟು ಯಶಸ್ಸಿನ ಮಟ್ಟಿಲನ್ನು ಏರಿತಿದ್ದು ಅಂತಹ ಅಪ್ರತಿಮ ಸಾಧಕರನ್ನು ಗುರುತಿಸಲು ಅಗ್ರಿಲೀಫ್‌ ಹೆಮ್ಮೆ ಪಡುತ್ತದೆ ಎಂದು ನುಡಿದರು.

ಸಹ ಸ್ಥಾಪಕ ಅತಿಶಯ್‌ ಎಂ ಜೈನ್‌ರವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಿಗಳು ಇಂತಹ ಪುರಸ್ಕಾರಗಳನ್ನು ಪಡೆಯುವಂತೆ ಉದ್ಯೋಗಿಗಳನ್ನು ಹುರಿದುಂಬಿಸಿದರು.

ಅಗ್ರಿಲೀಫ್‌ ಸಂಸ್ಥೆಗೆ ಕೆಲಸಕ್ಕೆ ಬರುವಲ್ಲಿ ಉದ್ಯೋಗಿಗಳಿಗೆ ತಮ್ಮ ವೈಯಕ್ತಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸಹಾಯಕವಾಗಲಿ ಎಂಬ ಉದ್ದೇಶದೊಂದಿಗೆ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಮತ್ತು ಪ್ರತಿಭಾವಂತ ಉದ್ಯೋಗಿಗಳಾದ ಬಾಲಕೃಷ್ಣ. ಪುನೀತ್‌ ಮತ್ತು ಹರಿಪ್ರಸಾದ್‌ರವರಿಗೆ ತಲಾ 1 ಲಕ್ಷ 80 ಸಾವಿರ ರೂಪಾಯಿ ಮೌಲ್ಯದ ಒಟ್ಟು 3 ಏಥರ್ ರಿಝ್ಟಾ (Ather Rizta) ಇಲೆಕ್ಟ್ರಿtಕ್ ಸ್ಕೂಟರ್‌ಗಳನ್ನು ವಿತರಿಸಿ ಪುರಸ್ಕರಿಸಲಾಯಿತು. ಅಂತೆಯೇ ಸಂಸ್ಥೆಯಲ್ಲಿ 2 ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಕೆಲಸ ಮಾಡುತ್ತಿರುವ ಪ್ರತಿಭಾನ್ವಿತ ಆರು ಮಹಿಳಾ ಉದ್ಯೋಗಿಗಳಾದ ರಜನಿ, ಧರಣಿ, ಚಂದ್ರಾವತಿ, ನಿಟಿಲಾಕ್ಷಿ, ಪ್ರೇಮ ಹಾಗೂ ಅನುಶ್ರೀ ಇವರಿಗೆ ತಲಾ 20 ಸಾವಿರ ರೂಪಾಯಿ ಮೌಲ್ಯದ ಒಟ್ಟು 6 Wirlpool Fully Automatic ವಾಷಿಂಗ್ ಮೆಷಿನ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಗ್ರಿಲೀಫ್‌ ಸಂಸ್ಥೆಯ ಲಲಿತಾ ರಾವ್‌ ಹಾಗೂ ಚೇತಾನಾ ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

Related posts

ಶಿಶಿಲೇಶ್ವರ ದೇವಸ್ಥಾನದಲ್ಲಿ ಊರವರಿಂದ ಶ್ರಮದಾನ

Suddi Udaya

ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ನಾಯಕಿಯಾಗಿ ಕು. ನಿಶಾ ಜಿ

Suddi Udaya

ಕಾಶಿಪಟ್ಣ ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಎಸ್.ಡಿ.ಎಂ. ಪ.ಪೂ. ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ವ್ಯಸನದ ಬಗ್ಗೆ ಅಂತರ್ಜಾಲ ಬಳಸಿ ಪಿಪಿಟಿ ಸ್ಪರ್ಧಾ ಕಾರ್ಯಕ್ರಮ

Suddi Udaya

ಇಂದಬೆಟ್ಟು: ಬೆಳ್ಳೂರು ಬೈಲಿನ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ

Suddi Udaya

ಧರ್ಮಸ್ಥಳ: ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!