30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನೀರಿನ ಯೂನಿಟ್ ಮಿತಿ ಹೆಚ್ಚಳಕ್ಕೆ ಎಸ್‌ಡಿಪಿಐ ವತಿಯಿಂದ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ

ಉಜಿರೆ: ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ 08ರ ಕಕ್ಕೇಜಾಲ್ ಗಾಂಧಿನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಬಳಕೆಯ ಯೂನಿಟ್ ಮಿತಿಯನ್ನು ಹೆಚ್ಚಿಸುವಂತೆ ಹಾಗೂ ಹೆಚ್ಚುವರಿ ಬಳಕೆಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಪರಿಷ್ಕರಿಸುವಂತೆ ಎಸ್‌ಡಿಪಿಐ ಕಕ್ಕೇಜಾಲ್ ಬ್ರಾಂಚ್ ವತಿಯಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರದೇಶದ ಹೆಚ್ಚಿನ ನಿವಾಸಿಗಳು ದಿನಗೂಲಿ ಕಾರ್ಮಿಕರಾಗಿದ್ದು, ಪ್ರಸ್ತುತ ನಿಗದಿಪಡಿಸಿರುವ 7 ಯೂನಿಟ್‌ಗಳ ಮಿತಿಗಿಂತ ಹೆಚ್ಚಿನ ನೀರಿನ ಬಳಕೆ ಅನಿವಾರ್ಯವಾಗುತ್ತಿದೆ. ಇದರ ಪರಿಣಾಮವಾಗಿ ಮಾಸಿಕ ನೀರಿನ ಬಿಲ್ ಹೆಚ್ಚಾಗಿ ಬಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೊರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆದ್ದರಿಂದ ಒಂದು ಮನೆಗೆ ನಿಗದಿಪಡಿಸಿರುವ ನೀರಿನ ಬಳಕೆಯ ಮಿತಿಯನ್ನು 7 ಯೂನಿಟ್‌ನಿಂದ 20 ಯೂನಿಟ್‌ಗಳಿಗೆ ಹೆಚ್ಚಿಸಬೇಕು. ಜೊತೆಗೆ ಹೆಚ್ಚುವರಿ ಯೂನಿಟ್‌ಗಳಿಗೆ ವಿಧಿಸಲಾಗುವ ಶುಲ್ಕವನ್ನು ಮರುಪರಿಶೀಲಿಸಿ ಕಡಿತಗೊಳಿಸಬೇಕು. ಅಲ್ಲದೆ 40 ಯೂನಿಟ್‌ಗಳವರೆಗೆ ನೀರಿನ ಬಳಕೆಯನ್ನು ಯಾವುದೇ ಕಾರಣಕ್ಕೂ ವಾಣಿಜ್ಯ (ಕಮರ್ಷಿಯಲ್) ಸಂಪರ್ಕವೆಂದು ಪರಿಗಣಿಸಬಾರದು ಎಂದು ಆಗ್ರಹಿಸಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಧಿಕಾರಿಗಳಿಗೆ ಕೋರಲಾಗಿದೆ. ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಕ್ಕೇಜಾಲ್ ಬ್ರಾಂಚ್ ಅಧ್ಯಕ್ಷ ಇರ್ಫಾನ್ ಕಕ್ಕೇಜಾಲ್, ಕಾರ್ಯದರ್ಶಿ ಸವಾದ್, ಶರ್ವಾನ್, ಇಲ್ಯಾಸ್ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Related posts

ಅ.11: ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಚಾಲನೆ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಕಲಾನಿಕೇತನ ಡಾನ್ಸ್ ಪೌಂಡೇಶನ್ ಬೆಳ್ತಂಗಡಿ ಘಟಕಕ್ಕೆ ಶೇ. 100 ಫಲಿತಾಂಶ

Suddi Udaya

ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆಯಿಂದ ವೈದ್ಯಕೀಯ ನೆರವು ಹಸ್ತಾಂತರ-ಅಶಕ್ತ ಕುಟುಂಬಕ್ಕೆ ಆರ್ಥಿಕ ಸಹಕಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಪೋಸ್ಟ್‌ : ಮುಂಬಯಿಯ ಶ್ರೀನಾಥ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ ಮತ್ತು ಸ್ವಚ್ಛತಾ ಶ್ರಮದಾನ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಜೈನ ಮತ್ತು ಹಿಂದೂ ಸಮುದಾಯಗಳ ನಡುವೆ ಅಶಾಂತಿಯನ್ನು ಪ್ರೇರೇಪಿಸುವ ಭಾಷಣ ಆರೋಪ: ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಜಿರೆಯ ಅಜಿತ್ ಹೆಗ್ಡೆಯವರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!