28.1 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಅನುಮಾನಸ್ಪದ ರೀತಿಯಲ್ಲಿ ಯುವಕನೋರ್ವ ಮೃತದೇಹ ಪತ್ತೆ

ಬೆಳ್ತಂಗಡಿ : ಗುರುವಾಯನಕೆರೆ ಯೋನೋಪಯೋ ವಿದ್ಯುತ್ ಸಬ್ ಸ್ಟೇಷನ್ ಜಾಗದಲ್ಲಿ ಅವಿವಾಹಿತ ಯುವಕನೋರ್ವ ಅನುಮಾನಸ್ಪದ ರೀತಿಯಲ್ಲಿ ಆತನ ಮೃತದೇಹ ಪತ್ತೆಯಾದ ಘಟನೆ ಜು. 1 ರಂದು ನಡೆದಿದೆ.

ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಸಮೀಪವಿರುವ ಖಾಸಗಿ ವಿದ್ಯುತ್ ಸಬ್ ಸ್ಟೇಷನ್ ಜಾಗದ ಮುಂಭಾಗ ತಡೆಗೋಡೆ ಇರುವ ಇಳಿಜಾರು ಪ್ರದೇಶದಲ್ಲಿ ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಶರೀಫ್ ಕೆ ಅವರ ಪ್ರಥಮ ಪುತ್ರ ಮುಸ್ತಾಕ್ (27ವ) ಎಂಬಾತ ಮೃತಪಟ್ಟ ವ್ಯಕ್ತಿ.

ಮೃತ ದುರ್ದೈವಿ ಚಾಲಕ ವೃತ್ತಿ ನಡೆಸುತ್ತಿದ್ದು, ಜೂ. 30 ರಂದು ಕಲ್ಲೇರಿಯಿಂದ ಮದ್ದಡ್ಕಕ್ಕೆ ಮುಸ್ತಾಕ್ ನ್ನು ಲಾರಿ ಬೀಡಲೆಂದು ಆತನ ತಮ್ಮ ಮುನಾಸೀರ್ ಬಿಟ್ಟು ಹೋಗಿದ್ದರು. ಆದರೆ ಇಂದು ಆತನ ಶವ ಪತ್ತೆಯಾದ ಸ್ಥಿತಿಯನ್ನು ಕಂಡು ಆತನ ತಂದೆ ಶರೀಫ್ ನನ್ನ ಮಗನನ್ನು ಕೊಲೆ ಮಾಡಿ ತಂದು ಎಸೆದು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹ ಸಿಕ್ಕ ಪ್ರದೇಶದಲ್ಲಿ ಯಾವುದೇ ಸಿಸಿ ಕ್ಯಾಮೆರಾ, ಸೆಕ್ಯೂರಿಟಿ ಗಾರ್ಡ್ ಇರುವುದಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್ ಐ ಆನಂದ್, ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಅಪಾಯಕಾರಿ ಸ್ಥಳಗಳಿರುವ ಮನೆಗಳಿಗೆ ಮೇಲಂತಬೆಟ್ಟು ಗ್ರಾಮ ಪಂಚಾಯತಿನಿಂದ ಮತ್ತೊಮ್ಮೆ ನೋಟೀಸು

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು-ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನ ದೇವನಾರಿ ವರ್ಷಾವಧಿ ಜಾತ್ರೆ ಹಾಗೂ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭೆ

Suddi Udaya

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆಯಾಗಬೇಕು : ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ರಾಷ್ಟ್ರ ಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಯತೀಂದ್ರ ರಿಗೆ ಕಂಚಿನ ಪದಕ

Suddi Udaya

ಕುತ್ಲೂರು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಪ್ರಜ್ಞೇಶ್ ಆಯ್ಕೆ

Suddi Udaya
error: Content is protected !!