23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಪ್ರವೇಶ ಪರೀಕ್ಷೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ಹರಿಕೃಷ್ಣ ಇವರು ರಾಷ್ಟ್ರ ಮಟ್ಟದಲ್ಲಿ ರ‍್ಯಾಂಕ್

ಉಜಿರೆ: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ನಡೆಸಲ್ಪಡುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ಇವರು ಜೂನ್ ತಿಂಗಳಿನಲ್ಲಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಹರಿಕೃಷ್ಣ ಇವರು ರಾಷ್ಟ್ರ ಮಟ್ಟದಲ್ಲಿ 1327ರಾಂಕ್ ಅನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.

ಹರಿಕೃಷ್ಣ ಅವರ ಅಧ್ಬುತ ಸಾಧನೆಯಿಂದ ನಮ್ಮ ಕಾಲೇಜಿನ ಘನತೆಗೆ ಮತ್ತೊಂದು ಗರಿ ಸೇರಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳು ಎಂದರೆ ಕೇವಲ CET ಅಥವಾ NEET ಮಾತ್ರ ಎಂಬ ಭ್ರಮೆಯನ್ನು ಹೋಗಲಾಡಿಸುವಂತಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೂ ಉನ್ನತ ಶಿಕ್ಷಣದ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಮತ್ತು ಮುಂದಿನ ವಿದ್ಯಾರ್ಥಿಗಳಿಗೆ ಈ ಸಾಧನೆ ಸ್ಪೂರ್ತಿದಾಯಕವಾಗಿದೆ ಎಂದು ಎಸ್ ಡಿ ಎಂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಪ್ರಮೋದ್ ಕುಮಾರ್ ಬಿ, ತಿಳಿಸಿದರು.

ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾದ ನಂತರ ನನಗೆ ವಿಶೇಷ ಅನುಭವಗಳು ದೊರೆತವು. ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ನೀಡುತ್ತಿದ್ದು, ವಿದ್ಯಾರ್ಥಿ ವೇತನದ ಮೂಲಕ ಓದಲು ಉತ್ಸಾಹ ಇರುವ ಹಲವಾರು ಬಡ ಕುಟುಂಬದ ಮಕ್ಕಳಿಗೆ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಿ. ನೀವು ನೀಡಿರುವ ಸಂಸ್ಕಾರ ಜೀವನ ಪರ್ಯಂತ ಜೊತೆಗಿರುತ್ತದೆ. ನೀವು ನೀಡಿದ ಸವಲತ್ತುಗಳು ನನ್ನ ಭವಿಷ್ಯದ ಮೆಟ್ಟಿಲುಗಳು. ಶಿಕ್ಷಕ ವೃಂದದ ಆಶಯ, ಪ್ರೋತ್ಸಾಹ, ತ್ಯಾಗ, ಆಶೀರ್ವಾದ, ಸಹಕಾರಕ್ಕೆ ನನ್ನ ಅನಂತಾನಂತ ಧನ್ಯವಾದಗಳು. ಎಂದು ಸಾಧಕ ವಿದ್ಯಾರ್ಥಿ ಹರಿಕೃಷ್ಣ ಅಭಿಪ್ರಾಯ ಪಟ್ಟರು.

ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಹಾಗೂ ಶಿಕ್ಷಕ ವೃಂದ ಅಭಿನಂದಿಸಿರುತ್ತಾರೆ.

Related posts

ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 32 ಲಕ್ಷ ನಿವ್ವಳ ಲಾಭ, ಶೇ.22 ಡಿವಿಡೆಂಡ್ ಘೋಷಣೆ

Suddi Udaya

ಬಳ್ಳಮಂಜ – ಮಾಯಿಲೋಡಿ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತ: ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ ಮರ

Suddi Udaya

ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

Suddi Udaya

ಉಜಿರೆ ಅನುಗ್ರಹ ಪ್ರೌಢಶಾಲೆಯಲ್ಲಿ ಅಗ್ನಿ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಭಕ್ತಿಯ ನಡಿಗೆಯಲ್ಲಿ ಭಕ್ತರ ಮನಸೆಳೆದ ಆನೆ- ದೊಡ್ಡ ಗಾತ್ರದ ಶಿವನ ಮೂರ್ತಿ: ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉದ್ಯಮಿ ಮೋಹನ್ ಕುಮಾರ್ ರವರ ಸೇವೆಗೆ ಮೆಚ್ಚುಗೆ

Suddi Udaya

ಆ. 7 -16: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya
error: Content is protected !!