23.7 C
ಪುತ್ತೂರು, ಬೆಳ್ತಂಗಡಿ
October 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಲಾಯಿಲ: ಬೈಕ್ ಸ್ಕಿಡ್ ಆಗಿ ಬಿದ್ದು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಲಾಯಿಲ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮಂಗಳೂರಿನ ಕಾಲೇಜೊಂದರ ನಾಲ್ಕು ಮಂದಿ ವಿದ್ಯಾರ್ಥಿಗಳು ಕೊಟ್ಟಿಗೆಹಾರ ಸಮೀಪದ ದೇವರ ಮನೆಗೆ ಹೋಗಿದ್ದು ಅಲ್ಲಿಂದ ಸಂಜೆ ಹಿಂತಿರುಗುತಿದ್ದ ವೇಳೆ ಲಾಯಿಲ ಬಳಿ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕಿನ ಹಿಂಬದಿ ಸವಾರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಮಂಗಳೂರು ನಿವಾಸಿ ಧೀರಜ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದು,ಸವಾರ ಗಾಯಗೊಂಡಿದ್ದಾರೆ.

ಮೇಲ್ನೋಟಕ್ಕೆ ಹೆದ್ದಾರಿಯಲ್ಲಿದ್ದ ಗುಂಡಿಗೆ ಬಿದ್ದು, ಬೈಕ್ ಪಲ್ಟಿಯಾದ ವೇಳೆ ಅಪರಿಚಿತ ವಾಹನವೊಂದು ಧೀರಜ್ ತಲೆ ಮೇಲೆ ಹಾದು ಹೋಗಿರುವ ಬಗ್ಗೆಯೂ ಸ್ಥಳೀಯರಲ್ಲಿ ಅನುಮಾನ ಮೂಡಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ..ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಮನೆಯೊಳಗೆ ಅಕ್ರಮ ಗಾಂಜಾ ದಾಸ್ತಾನು: ಪುಂಜಾಲಕಟ್ಟೆ ಪೊಲೀಸರಿಂದ ದಾಳಿ

Suddi Udaya

ಬೆಳ್ತಂಗಡಿ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಕಲ್ಲೇರಿಯಲ್ಲಿ ಸಂಘದ ಎರಡನೇ ಶಾಖೆ ಲೋಕಾರ್ಪಣೆ

Suddi Udaya

ವೇಣೂರು: ಓಮ್ನಿ ಕಾರು ವಿದ್ಯುತ್ ಕ೦ಬಕ್ಕೆ ಡಿಕ್ಕಿ: ಪ್ರಾಣಾಪಾಯದಿಂದ ಪಾರು

Suddi Udaya

ಮಾರಾಟ ತೆರಿಗೆ ಹೆಚ್ಚಿಸಿ ಪೆಟ್ರೋಲ್ ಡೀಸಿಲ್ ದರ ಏರಿಸಿದ‌ ರಾಜ್ಯದ ಕಾಂಗ್ರೇಸ್ ಸರಕಾರದ ನಡೆ ಖಂಡನೀಯ ಸಿಪಿಐಎಂ ಬೆಳ್ತಂಗಡಿ ತಾಲೂಕು ಮುಖಂಡ ನ್ಯಾಯವಾದಿ ಬಿ.ಎಂ.ಭಟ್

Suddi Udaya

ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಮುದಾಯ ಭವನ ನಿರ್ಮಾಣದ ಪೂರ್ವಭಾವಿ ಸಮಾಲೋಚನಾ ಸಭೆ

Suddi Udaya

ಹುಣ್ಸೆಕಟ್ಟೆ ಮತ್ತು ರೆಂಕೆದಗುತ್ತು ವ್ಯಾಪ್ತಿಯಲ್ಲಿ ಗುರು ಗಾಂಧಿ ಸಂವಾದ ಕಾರ್ಯಕ್ರಮ ಮತ್ತು ಕೋಟಿ ಚೆನ್ನಯ್ಯ ಕ್ರೀಡಾಕೂಟದ ಪೂರ್ವಭಾವಿ ಸಭೆ

Suddi Udaya
error: Content is protected !!