28.4 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ತಾಲೂಕು ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.12 ರಂದು ಬಂಟರ ಭವನ ಬೆಳ್ತಂಗಡಿಯಲ್ಲಿ ಜರುಗಿತು. ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ,ಜಯರಾಮ ಶೆಟ್ಟಿ ಮುಂಡಾಡಿಗುತ್ತು ಭಾಗವಹಿಸಿದ್ದರು. ನೂತನ ಅಧ್ಯಕ್ಷ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ನೇತೃತ್ವದ ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ವಸುಧಾ ಮೂಡಯೂರು ನೇತೃತ್ವದಲ್ಲಿ ಪದಾಧಿಕಾರಿಗಳ ಪದಗ್ರಹಣ ನರವೇರಿಸಲಾಯಿತು.

ದಿ.ಕಾಶಿಶೆಟ್ಟಿ ಸ್ಮರಣಾರ್ಥ ಶಶಿಧರ ಶೆಟ್ಟಿ ನವಶಕ್ತಿ ಇವರು ನಿರ್ಮಿಸಿದ ಕಾಶಿಸಧನ ಮನೆ ನಿರ್ಮಾಣದ ಫಲಾನುಭವಿಗಳಿಗೆ ಚೆಕ್ ಹಸ್ತಾಂತರ, ವಿಜಯ ಕೋ-ಅಪರೇಟಿವ್ ಸಹಕಾರ ಸಂಘದ ಸಹಾಯಧನ ಹಸ್ತಾಂತರ, ಸ್ಪಂದನಾ ಬಂಟರ ಸೇವಾ ಸಂಘದಿಂದ ಉನ್ನತ ವಿದ್ಯಾಭ್ಯಾಸಕ್ಕೆ ನೆರವು , ಬಂಟರ ಮಾತೃ ಸಂಘದಿಂದ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವಿನ ಚೆಕ್ ನ್ನು ಹಸ್ತಾಂತರಿಸಲಾಯಿತು.

ವೇದಿಕೆಯಲ್ಲಿ ವಿಜಯ ಕೋ-ಅಪರೇಟಿವ್ ಸಹಕಾರ ಸಂಘದ ಅಧ್ಯಕ್ಷ ಅಜಿತ್ ಶೆಟ್ಟಿ ಕೋಯಾ೯ರುನೂತನ ಆಡಳಿತ ಮಂಡಳಿಯಉಪಾಧ್ಯಕ್ಷರಾದ ರಾಜು ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲ್ಯಾಲ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ದಾ, ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಸುಲ್ಕೇರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಜಿರೆ ವಲಯದ ಜಯಂತ ಶೆಟ್ಟಿ ಕುಂಟಿನಿ, ಪುರುಷೋತ್ತಮ ಶೆಟ್ಟಿ ಮುಂಡಾಜೆ, ನಿರಂಜನ್ ಶೆಟ್ಟಿ ಉಜಿರೆ, ವೆಂಕಟ್ರಮಣ ಶೆಟ್ಟಿ ನಿಡಿಗಲ್, ವನಿತಾ ವಿ. ಶೆಟ್ಟಿ ಉಜಿರೆ, ಬೆಳ್ತಂಗಡಿ ವಲಯದ ನಾರಾಯಣ ಶೆಟ್ಟಿ ಬೆಳ್ತಂಗಡಿ, ಪವನಂದ ಶೆಟ್ಟಿ ಕನ್ಯಾಡಿ, ವಿಜಯಾ ಬಿ. ಶೆಟ್ಟಿ ಉಜಿರೆ.ಅಳದಂಗಡಿ ವಲಯದ, ಸುಭಾಶ್ಚಂದ್ರ ರೈ ಅಳದಂಗಡಿ, ಜಯಲಕ್ಷ್ಮೀ ಎನ್. ಸಾಮಾನಿ ಕರಂಬಾರುಬೀಡು. ಮಡಂತ್ಯಾರು ವಲಯದ ಮಂಜಯ್ಯ ಶೆಟ್ಟಿ ಮಾಲಾಡಿ,ಮೀನಾಕ್ಷಿ ಶೆಟ್ಟಿ ಬದ್ಯಾರು, ಪ್ರಶಾಂತ್ ಶೆಟ್ಟಿ ಮುಡಾಯೂರು, ದಿವಾಕರ ಶೆಟ್ಟಿ ಹಂಕರ್ಜಾಲು. ವೇಣೂರು ವಲಯದ ಶಶಿಧರ ಶೆಟ್ಟಿ ಮುಡುಕೋಡಿ,ರಮೇಶ್ ಶೆಟ್ಟಿ ಹೊಸಂಗಡಿ, ಶಿವಪ್ರಸಾದ್ ಶೆಟ್ಟಿ ಆರಂಬೋಡಿ ಇವರ ಪದಗ್ರಹಣ ನಡೆಯಿತು. ಮಾತೃ ಸಂಘದ ನಿರ್ದೇಶಕ ಜಯರಾಮ ಭಂಡಾರಿ ಉಜಿರೆ, ರಾಜು ಶೆಟ್ಟಿ ಬೇಂಗೇತ್ಯಾರು ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಉಪಾಧ್ಯಕ್ಷರುಗಳಾದ ಉಮೇಶ್ ಶೆಟ್ಟಿ ಉಜಿರೆ, ನವೀನ್ ಸಾಮಾನಿ ಕರಂಬಾರು, ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ, ಜೊತೆ ಕಾರ್ಯದರ್ಶಿ ಕಿರಣ್‌ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮೀ ಎನ್ ಸಾಮಾನಿ, ಯುವ ವಿಭಾಗದ ಅಧ್ಯಕ್ಷ ಪ್ರತೀಶ್ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು. ಮಹಾಸಭೆ ಯಲ್ಲಿ ಸಂಘದ ಉಪಾಧ್ಯಕ್ಷ ನವೀನ್ ಸಾಮಾನಿ ಸ್ವಾಗತಿಸಿದರು.

ಕಾಯ೯ದಶಿ೯ ಸುರೇಶ್ ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ ಲೆಕ್ಕಪತ್ರ ಮಂಡಿಸಿದರು. ಮಹಿಳಾ ವಿಭಾಗದ ಕೋಶಾಧಿಕಾರಿ ರಕ್ಷೀತಾ ಶೆಟ್ಟಿ ಮಹಿಳಾ ವಿಭಾಗದ ವರದಿ ವಾಚಿಸಿದರು. ಚುನಾವಣಾಧಿಕಾರಿ ರಾಮಚಂದ್ರ ಶೆಟ್ಟಿ ನೂತನ ಪದಾಧಿಕಾರಿಗಳ ಆಯ್ಕೆನ್ನು ಘೋಷಿಸಿದರು. ಕಾಯ೯ದಶಿ೯ ಕಿರಣ್ ಕುಮಾರ್ ಶೆಟ್ಟಿ ವಂದಿಸಿದರು.

Related posts

ಬೆಳ್ತಂಗಡಿ: ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ತಣ್ಣೀರುಪಂತ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವಾರ್ಷಿಕ ಜಾತ್ರೆ

Suddi Udaya

ಅಳದಂಗಡಿಯಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಗೆ ಚಾಲನೆ

Suddi Udaya

ಶಿಶಿಲ ಗ್ರಾ.ಪಂ. ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ನಾವೂರು ಗ್ರಾ.ಪಂ. ಗ್ರಾಮಸಭೆ

Suddi Udaya

ಉಜಿರೆ: ಅನುಗ್ರಹ ಕಾಲೇಜು ಪ್ರಾರಂಭೋತ್ಸವ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Suddi Udaya
error: Content is protected !!