29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮೀಲಾದ್ ಆಚರಣಾ ಸ್ವಾಗತ ಸಮಿತಿ ರಚನೆ

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ನಡೆಯುವ ಈದ್ ಮೀಲಾದ್ ಕಾರ್ಯಕ್ರಮದ 2026 ನೇ ಸಾಲಿನ ಸ್ವಾಗತ ಸಮಿತಿಯನ್ನು ಜು.24 ರಂದು ಮಸೀದಿಯ ವಿಶೇಷ ಜಮಾಅತ್ ಸಭೆಯಲ್ಲಿ ರಚಿಸಲಾಯಿತು.

ಜಮಾಅತ್ ಅಧ್ಯಕ್ಷ ಮಹಮ್ಮದ್ ಹನೀಫ್ ಮಿಸ್ಬಾಹಿ ಅಲ್ ಅಫ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಖತೀಬರಾದ ಎಫ್ ಎಚ್ ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ದುವಾ ನೆರವೇರಿಸಿ ಸಭೆ ನಡೆಸಿಕೊಟ್ಟರು.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯುವ ಸಂಘಟಕ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಮೀದ್ ಜಿ.ಡಿ, ಪ್ರಧಾನ ಕಾರ್ಯದರ್ಶಿಯಾಗಿ ನೌಷದ್ ಜಿ.,ಕೋಶಾಧಿಕಾರಿಯಾಗಿ ಹಾರಿಶ್ ಎನ್.ಎ, ಉಪಾಧ್ಯಕ್ಷರುಗಳಾಗಿ ಇರ್ಫಾನ್ ಸುಣ್ಣಲಡ್ಡ, ಹೈದರ್ ಪದಗೋಳಿ, ರಹಿಮಾನ್ ಮಾಸ್ಟರ್, ಅಬೂಸ್ವಾಲಿಹ್ ಮುಳ್ಳಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಜಿ.ಎ, ಸಿದ್ದೀಕ್ ಜಿ.ಎಚ್, ಶಬೀರ್ ಕುಲಾಯಿ, ಹನೀಫ್ ಕೆ. ಎಮ್,ಫಾಯಿಕ್ ಎಂ.ಕೆ, ಸದಸ್ಯರುಗಳಾಗಿ ಫಯಾಜ್ ಕೆ ಎಮ್ , ಬಶೀರ್ ಎಸ್ ಎಮ್ ಎಸ್, ಸಿಯಾಬ್ ಎಸ್, ಅಬ್ಬಾಸ್ ಬಿ, ಜಬ್ಬಾರ್ ಪರಪ್ಪು, ಶರೀಫ್ ಪರಪ್ಪು, ಅಶ್ರಫ್ ಬಟ್ಟೆಮಾರು, ಸಂಶುದ್ದೀನ್, ಅರಫತ್ ,ಅರ್ಶದ್ ಜಿ, ಸವಾದ್, ಅಶ್ರಫ್ ಪದಗೊಳಿ, ಅಜೀಜ್ ಬಟ್ಟೆಮಾರು, ಅನ್ವರಾಲಿ ಸುಣ್ಣಲಡ್ಡ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಜಮಾಅತ್ ಅಧ್ಯಕ್ಷರು, ಖತೀಬ್ ಉಸ್ತಾದ್, ಅಬೂಬಕ್ಕರ್ ಹಾಜಿ, ಹಾಜಿ ಎಸ್ ಎ ಹಮೀದ್, ಅಬ್ದುಲ್ ಕರೀಮ್ ಗೇರುಕಟ್ಟೆ, ಸೈಫುಲ್ಲ ಎಚ್ ಎಸ್, ಅಬ್ದುಲ್ ಬಶೀರ್, ಮಹಮ್ಮದ್ ಹನೀಫ್, ಶರೀಫ್ ಜಿ ಆಯ್ಕೆಯಾದರು.
ಸಭೆಯಲ್ಲಿ ಜಮಾಅತ್ ಸಮಿತಿ ಪದಾಧಿಕಾರಿಗಳು, ಕೆ ಎಮ್ ಜೆ, ಎಸ್ ವೈ ಎಸ್, ಎಸ್ ಎಸ್ ಎಫ್, ಸ್ವಲಾತ್ ಸಮಿತಿಯವರು ಹಾಗೂ ಜಮಾಅತರು ಭಾಗವಹಿಸಿದ್ದರು.

Related posts

ಡಿ.16: ಮರೋಡಿ ಶಾರದಾಂಬ ಪ್ಲೇಯರ್ಸ್ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ, “ಸ್ಪಂದನಾ ಟ್ರೋಫಿ-2023”

Suddi Udaya

ಬಂಟರ ಸಂಘ ಉಜಿರೆ ವಲಯ ಪದಾಧಿಕಾರಿಗಳ ಆಯ್ಕೆ

Suddi Udaya

ಭಾರತೀಯ ಮಜ್ದೂರು ಸಂಘ ದ.ಕ.: ರಾಜ್ಯಘಟಕದ ತೀರ್ಮಾನಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಛದ್ಮವೇಶ ಸ್ಪರ್ಧೆ

Suddi Udaya

ಮುಂಡಾಜೆ ಸಹಕಾರ ಸಂಘದ ಚಾರ್ಮಾಡಿ ಪೂರ್ಣಾವಧಿ ಶಾಖೆಯ ಉದ್ಘಾಟನೆ ಸಮಾರಂಭ

Suddi Udaya

ಚಾರ್ಮಾಡಿ: ಕಂದಕಕ್ಕೆ ಉರುಳಿ ಬಿದ್ದ ಕಾರು: ಓರ್ವ ಮಹಿಳೆ ಸಾವು, ಮಕ್ಕಳು ಸಹಿತ ನಾಲ್ವರಿಗೆ ಗಂಭೀರ ಗಾಯ

Suddi Udaya
error: Content is protected !!