28.3 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮ ಬೆಳೆಸಿದ ಎಕ್ಸೆಲ್ ಟೆಕ್ನೊ ಸ್ಕೂಲ್‌ನ ‘ನೇಚರ್ ನರ್ಚರ್ ಡೇ’

ಗುರುವಾಯನಕೆರೆ: ಅಳಿವಿನಂಚಿನಲ್ಲಿರುವ ಪ್ರಕೃತಿಯನ್ನು ಸಂರಕ್ಷಿಸಿ ಬೆಳೆಸುವ ಕುರಿತು ಮಕ್ಕಳಲ್ಲಿ ಎಳೆ ವಯಸ್ಸಿನಲ್ಲೇ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಗುರುವಾಯನಕೆರೆಯ ಎಕ್ಸೆಲ್ ಟೆಕ್ನೊ ಸ್ಕೂಲ್‌ನ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ‘Nature Nurture Day’ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶಾಲೆಯ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ವಿದ್ಯಾರ್ಥಿಗಳು ಹಸಿರು ಬಣ್ಣದ ಉಡುಗೆ ತೊಟ್ಟು ಸಂಭ್ರಮದಿಂದ ಪಾಲ್ಗೊಂಡರು. ಮಕ್ಕಳು ಮನೆಯಿಂದ ತಂದಿದ್ದ ಹಸಿರು ಬಣ್ಣದ ವಸ್ತುಗಳು ಹಾಗೂ ಆಟಿಕೆಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

ವಿಶೇಷ ಆಕರ್ಷಣೆಯಾಗಿ ಕಾಡುಮನುಷ್ಯರ ವೇಷಭೂಷಣ ತೊಟ್ಟ ಪುಟಾಣಿಗಳು ಗುಹಾಕೃತಿಯಿಂದ ಹೊರಬಂದು ಪ್ರಕೃತಿಯೊಂದಿಗಿನ ಮಾನವನ ಬಾಂಧವ್ಯವನ್ನು ಮನಮಿಡಿಯುವ ರೀತಿಯಲ್ಲಿ ಬಿಂಬಿಸಿದರು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪ್ರಕೃತಿ ಸಂರಕ್ಷಣೆಯ ಕುರಿತು ಪಾತ್ರಾಭಿನಯ ಹಾಗೂ ಭಾಷಣಗಳನ್ನು ನಡೆಸಿ ಮೆಚ್ಚುಗೆ ಪಡೆದರು.

ಈ ಸಂದರ್ಭದಲ್ಲಿ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ ಅವರು ಪ್ರಕೃತಿಯ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು, ಮುಂದಿನ ದಿನಗಳಲ್ಲಿ ಪ್ರತಿದಿನದ ಪ್ರಾರ್ಥನಾ ಸಭೆಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಮಾತನಾಡುವ ಮೂಲಕ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಕಿಯರಾದ ಗೀತಾ, ಜೋಸ್ಲಿಟಾ ಲೋಬೊ, ಪೂರ್ಣಿಮಾ ಆಚಾರ್ಯ, ಲವೀನಾ, ಪ್ರೇಮ, ವಿಲ್ಮಾ, ಚೇತನಾ ಹಾಗೂ ಬೋಧಕೇತರ ಸಿಬ್ಬಂದಿ ಸಹಕರಿಸಿದರು. ಹಸಿರುಮಯ ಕಾರ್ಯಕ್ರಮದ ಯಶಸ್ಸಿನಲ್ಲಿ ಪೋಷಕರ ಉತ್ಸಾಹಭರಿತ ಸಹಭಾಗಿತ್ವ ಮತ್ತು ಪರಿಶ್ರಮವೂ ಪ್ರಮುಖ ಪಾತ್ರ ವಹಿಸಿತು.

Related posts

ಧರ್ಮಸ್ಥಳ-ಮಂಗಳೂರು ವೇಗದೂತ ಬಸ್ಸಿನ ಬೇಡಿಕೆಗಾಗಿ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಭೇಟಿಯಾದ ಎಸ್‌ಡಿಪಿಐ ಬೆಳ್ತಂಗಡಿ ನಿಯೋಗ

Suddi Udaya

ಕಸ್ತೂರಿ ರಂಗನ್ ವರದಿ ಸಚಿವರ ಹೇಳಿಕೆಗೆ ದ.ಕ ಮಲೆಕುಡಿಯ ಸಂಘ ತೀವ್ರ ಆಕ್ಷೇಪ

Suddi Udaya

ಮಡಂತ್ಯಾರು ಉಪ್ಪಿನಂಗಡಿ ರಸ್ತೆಯ ಮಾರಿಗುಡಿ ಸಮೀಪ ಅಪಾಯಕಾರಿ ಮರ: ಸಂಬಂಧಪಟ್ಟ ಇಲಾಖೆಯವರು ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ: ಡಾ. ಶಿವಾನಂದ

Suddi Udaya

ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದಿತಿ ಕೋಟಿ ಚೆನ್ನಯ್ಯ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟಿನ ನಿಯೋಗ ಮುಂಬಯಿಗೆ ಭೇಟಿ: ಅನ್ನಛತ್ರ ಮತ್ತು ಯಾತ್ರಿ ನಿವಾಸದ ಶಿಲನ್ಯಾಸ ಕಾರ್ಯಕ್ರಮದ ಪೂರ್ವಭಾವಿ ಸಭೆ , ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!