24.7 C
ಪುತ್ತೂರು, ಬೆಳ್ತಂಗಡಿ
September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸರಳಿಕಟ್ಟೆ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಬಾರ್ಯ : ಬೆಳ್ತಂಗಡಿ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬೆಳ್ತಂಗಡಿ ಹಾಗೂ ದ. ಕ. ಜಿ. ಪ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಬಾರ್ಯ ಗ್ರಾಮದ ಸರಳಿಕಟ್ಟೆ ಶಾಲೆಯಲ್ಲಿ ನಡೆಯಿತು.

ಉದ್ಘಾಟಕರಾದ ಪ್ರಧಾನ ಸಿವಿಲ್ ನ್ಯಾಯಧೀಶರಾದ ರಾಮಲಿಂಗಪ್ಪರವರು ಪೋಕ್ಸೋ ಕಾಯ್ದೆಯ ಬಗ್ಗೆ ಮಾತನಾಡಿ ಮಕ್ಕಳು ಸುರಕ್ಷಿತ ಸ್ಪರ್ಶ ಮತ್ತು ಆಸುರಕ್ಷಿತ ಸ್ಪರ್ಶ ದ ಬಗ್ಗೆ ಗಮನದಲ್ಲಿಟ್ಟು ಅದನ್ನು ಪೋಷಕರಿಗೆ ತಿಳಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ ರವರು ಮಾತನಾಡಿ ಮಕ್ಕಳು ಮಾದಕ ವಸ್ತುಗಳಿಂದ ದೂರ ಇರುವಂತೆ ಸಲಹೆ ನೀಡಿದರು. ಇನ್ನೊರ್ವ ಅತಿಥಿಯಾದ ಪ್ರಶಾಂತ್ ಎಂ ರವರು ಕಾನೂನು ಅರಿವು ಮತ್ತು ನೆರವಿನ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾದ ಶಿವಕುಮಾರ್ ಎಸ್ ಎಂ ರವರು ಪೋಕ್ಸೋ ಮತ್ತು ಮಾನವ ಕಳ್ಳ ಸಾಗಣೆ ಇದರ ಬಗ್ಗೆ ಸವಿವಾರ ವಾಗಿ ಮಕ್ಕಳಿಗೆ ಮನದಟ್ಟು ಮಾಡಿದರು. ಅಧ್ಯಕ್ಷ ಜುಬೈದರವರು ಈ ಕಾರ್ಯಕ್ರಮವನ್ನು ನಡೆಸಿದ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಧನ್ಯವಾದವನ್ನು ತಿಳಿಸಿದರು. ಶಿಕ್ಷಕಿ ಅಂಬಿಕಾ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಶ್ರೀಮತಿ ಅನುರಾಧ ಪ್ರಾಸ್ತವಿಕ ಮಾತನಾಡಿ, ಶಿಕ್ಷಕಿ ಶಶಿರೇಖಾ ಧನ್ಯವಾದ ನೀಡಿ, ಶಿಕ್ಷಕ ಸುನಿಲ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು ಗ್ರಾಮಸ್ಥರು ಹಾಜರಿದ್ದರು

Related posts

ನ್ಯಾಯಾಲಯಕ್ಕೆ ಹಾಜರಾಗದ ವಾರಂಟು ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ನಡ: ಸ್ಟಾರ್ ಲೈನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ” ಫಿಟ್ ಫೆಸ್ಟ್ 2024 “

Suddi Udaya

ಆ.10-12: ಲಾಯಿಲದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

Suddi Udaya

ಅರಸಿನಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳದ  ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

Suddi Udaya

ಉಜಿರೆ ಎಸ್.ಡಿ.ಯಂ ಕಾಲೇಜಿನಲ್ಲಿ ಶ್ರೀಕೃಷ್ಣ ಲೀಲೆ-ಕಂಸ ವಧೆ ಇಂಗ್ಲೀಷ್ ತಾಳಮದ್ದಳೆ

Suddi Udaya
error: Content is protected !!